
ಶಿರಸಿ(ಉತ್ತರ ಕನ್ನಡ): ಅಪ್ರಾಪ್ತೆಯೊಬ್ಬಳು ವಸತಿ ಶಾಲೆಯ ಶೌಚಾಲಯದಲ್ಲಿ ಸ್ವಯಂ ಹೆರಿಗೆ ಮಾಡಿಕೊಂಡು ಮಗುವಿಗೆ ಜನ್ಮ ನೀಡಿ ನಂತರ ಮಗುವನ್ನು ಹೊರಗಡೆ ಎಸೆದಿರುವ ಘಟನೆ ಶಿರಸಿ ತಾಲೂಕಿನ ಬಂಡಲ ಗ್ರಾಮದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ಶಾಲೆಯಲ್ಲಿ ನಡೆದಿದೆ.
ಶಾಲೆಯಲ್ಲಿ ಬೆಳಗ್ಗೆ ಶಾಲಾ ಅವಧಿಯ ಆರಂಭ ಆಗುವ ಮುನ್ನ 9ನೇ ತರಗತಿಯ ವಿದ್ಯಾರ್ಥಿನಿ ಶೌಚಾಲಯದಲ್ಲಿ ಸ್ವಯಂ ಹೆರಿಗೆ ಮಾಡಿಕೊಂಡಿದ್ದಾಳೆ. ಬಳಿಕ ಅಲ್ಲೇ ಸಮೀಪದಲ್ಲಿ ಮಗುವನ್ನು ಎಸೆದಿದ್ದಾಳೆ. ಶಾಲೆಯ ಹಿಂಭಾಗದಲ್ಲಿ ಸ್ವಚ್ಛತೆಗೆ ತೆರಳಿದ್ದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
ಬಳಿಕ ಶಾಲಾ ಮುಖ್ಯಸ್ಥರು ಪೊಲೀಸ್ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ವಿದ್ಯಾರ್ಥಿನಿಯಿಂದ ಮಾಹಿತಿ ಕಲೆ ಹಾಕಿದ್ದಾರೆ. ವಿದ್ಯಾರ್ಥಿನಿ ಗರ್ಭ ಧರಿಸಲು ಸಂಬಂಧಿ ಕಾರಣ ಎಂದು ತಿಳಿದುಬಂದಿದೆ.
ಅಸ್ವಸ್ಥಗೊಂಡ ಬಾಲಕಿಯನ್ನು ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.