ಅಮೆರಿಕಾದಿಂದ ಹಾಸನಾಂಬೆ ದರ್ಶನಕ್ಕೆ ಓಡೋಡಿ ಬಂದ ಆನಂದನಾಥ ಸ್ವಾಮೀಜಿ; 5 ವರ್ಷಗಳ ಹರಕೆ ಈಡೇರಿದ ಖುಷಿ!

Published : Nov 04, 2026, 11:17 AM IST
us swami visits hasanamba temple after 5 years

ಸಾರಾಂಶ

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ತಾಯಿಯ ದರ್ಶನ ಪಡೆಯಲು ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲ, ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಇದೀಗ ಅಮೆರಿಕದಿಂದಲೂ ಸ್ವಾಮೀಜಿಯೊಬ್ಬರು ಹಾಸನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ.

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ತಾಯಿಯ ದರ್ಶನ ಪಡೆಯಲು ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲ, ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಇದೀಗ ಅಮೆರಿಕದಿಂದಲೂ ಸ್ವಾಮೀಜಿಯೊಬ್ಬರು ಹಾಸನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ಸಾವಿರಾರು ಕಿಲೋಮೀಟರ್ ದೂರದಿಂದ ಕೇವಲ ತಾಯಿಯ ದರ್ಶನಕ್ಕಾಗಿಯೇ ಭಾರತಕ್ಕೆ ಬಂದಿರುವ ಅವರ ಭಕ್ತಿ ಎಲ್ಲರ ಗಮನ ಸೆಳೆದಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಹೋಸೆಯಲ್ಲಿರುವ ಬಾಲಾಜಿ ಮಠದ ಪೀಠಾಧಿಪತಿಗಳಾದ ಶ್ರೀ ಆನಂದನಾಥ ಸ್ವಾಮೀಜಿ ಅವರು ಮಂಗಳವಾರ ಹಾಸನಾಂಬೆ ದೇವಿಯ ದರ್ಶನ ಪಡೆದರು. ಕಳೆದ ಐದು ವರ್ಷಗಳಿಂದ ಹಾಸನಾಂಬೆಯ ದರ್ಶನ ಪಡೆಯಲು ಪ್ರಯತ್ನಿಸುತ್ತಿದ್ದ ಅವರ ಆಸೆ ಈ ಬಾರಿ ಈಡೇರಿದೆ.

5 ವರ್ಷಗಳ ಪ್ರಯತ್ನದ ಬಳಿಕ ಸಿಕ್ಕಿತು ಹಾಸನಾಂಬೆ ದರ್ಶನ

ಶ್ರೀ ಆನಂದನಾಥ ಸ್ವಾಮೀಜಿ ಅವರು ಕಳೆದ ಐದು ವರ್ಷಗಳಿಂದ ಹಾಸನಾಂಬೆ ದೇವಿಯ ದರ್ಶನ ಪಡೆಯುವ ಹಂಬಲ ಹೊಂದಿದ್ದರು. ಆದರೆ ವಿವಿಧ ಕಾರಣಗಳಿಂದ ಈವರೆಗೆ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ತಮ್ಮ ಸಂಕಲ್ಪ ಈಡೇರಿದ ಹಿನ್ನೆಲೆಯಲ್ಲಿ ಅಮೆರಿಕದಿಂದಲೇ ಹಾಸನಕ್ಕೆ ಆಗಮಿಸಿ ತಾಯಿಯ ದರ್ಶನ ಪಡೆದಿದ್ದಾರೆ. ದೇವಿಯ ದರ್ಶನದ ಬಳಿಕ ಸಂತಸ ವ್ಯಕ್ತಪಡಿಸಿದ ಅವರು, ಹಾಸನಾಂಬೆ ದರ್ಶನ ಪಡೆಯುವುದೇ ತಮ್ಮ ಭಾರತ ಭೇಟಿಯ ಪ್ರಮುಖ ಉದ್ದೇಶವಾಗಿತ್ತು ಎಂದು ತಿಳಿಸಿದ್ದಾರೆ. ತಾಯಿಯ ದರ್ಶನ ಪಡೆದಿದ್ದು ಬಹಳ ಖುಷಿ ನೀಡಿದೆ ಎಂದೂ ಹೇಳಿದ್ದಾರೆ.

ಯಾರು ಈ ಆನಂದನಾಥ ಸ್ವಾಮೀಜಿ?

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಹೋಸೆಯಲ್ಲಿ ನೆಲೆಸಿರುವ ಬಾಲಾಜಿ ಮಠದ ಪೀಠಾಧಿಪತಿಗಳೇ ಶ್ರೀ ಆನಂದನಾಥ ಸ್ವಾಮೀಜಿ. ಇವರು ಆದಿಚುಂಚನಗಿರಿ ಮಠದ ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರಿಂದ ದೀಕ್ಷೆ ಪಡೆದಿದ್ದಾರೆ. ಸುಮಾರು 30 ವರ್ಷಗಳಿಂದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಅವರು, ಅಲ್ಲಿನ ಬಾಲಾಜಿ ಮಠದ ಧಾರ್ಮಿಕ ಚಟುವಟಿಕೆಗಳ ನೇತೃತ್ವ ವಹಿಸಿಕೊಂಡಿದ್ದಾರೆ.

ದೇಶ-ವಿದೇಶಗಳಲ್ಲೂ ಹಾಸನಾಂಬೆ ದರ್ಶನೋತ್ಸವದ ಪ್ರಸಿದ್ಧಿ

ಹಾಸನಾಂಬೆ ದೇವಿಯ ದರ್ಶನೋತ್ಸವದ ಮಹಿಮೆ ಇದೀಗ ದೇಶದ ಗಡಿಗಳನ್ನು ದಾಟಿ ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ ಎಂದು ಆನಂದನಾಥ ಸ್ವಾಮೀಜಿ ಸಂತಸ ಹಂಚಿಕೊಂಡಿದ್ದಾರೆ. ದರ್ಶನದ ಬಳಿಕ ಮಾತನಾಡಿದ ಅವರು, ಹಾಸನಾಂಬೆ ದರ್ಶನದ ವಿಚಾರ ದೇಶ-ವಿದೇಶಗಳಲ್ಲಿಯೂ ಸುದ್ದಿಯಾಗುತ್ತಿದೆ. ತಾಯಿಯ ದರ್ಶನ ಪಡೆದಿರುವುದು ಅತ್ಯಂತ ಸಂತೋಷ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆ ದೇವಿಯ ದರ್ಶನಕ್ಕಾಗಿ ಪ್ರತಿವರ್ಷ ಲಕ್ಷಾಂತರ ಭಕ್ತರು ಕಾಯುತ್ತಾರೆ. ಈ ಬಾರಿ ಅಮೆರಿಕದಿಂದ ಸ್ವಾಮೀಜಿಯೊಬ್ಬರು ಆಗಮಿಸಿ ದರ್ಶನ ಪಡೆದಿರುವುದು ಹಾಸನಾಂಬೆ ಮೇಲಿನ ಭಕ್ತಿಯ ವ್ಯಾಪಕತೆಯನ್ನು ಮತ್ತೊಮ್ಮೆ ತೋರಿಸಿದೆ.

PREV
Read more Articles on
click me!

Recommended Stories

ಕಬ್ಬಿಗೆ ₹5500 ಪಟ್ಟು: ರೈತರ ಬಗ್ಗೆ ಭಾಷಣ ಬೇಡ, ದರ ಘೋಷಿಸಿ, ಭುಗಿಲೆದ್ದ ಅನ್ನದಾತರ ಆಕ್ರೋಶ!
ಮುರಸು ಚಂಡಮಾರುತ ಎಫೆಕ್ಟ್: ಕೊಡಗಿನಲ್ಲಿ ವರುಣನ ಅಬ್ಬರ; ಕೆರೆಯಂತಾದ ಮಡಿಕೇರಿ ಓಂಕಾರೇಶ್ವರ ದೇಗುಲ ರಸ್ತೆ