ಬೆಳಗಾವಿ: ಸಹಾಯ ಮಾಡಲು ಹೋದ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ದರೋಡೆ

By Web Desk  |  First Published Oct 6, 2019, 12:42 PM IST

ಸಹಾಯ ಮಾಡಲು ಹೋದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ 12 ಸಾವಿರ ನಗದು ಹಾಗೂ 7 ಸಾವಿರ ಮೌಲ್ಯದ ಮೊಬೈಲ್‌ ದರೋಡೆ ಮಾಡಿದ ಘಟನೆ ಇಸ್ಲಾಂಪೂರ ಗ್ರಾಮದಲ್ಲಿ ನಡೆದಿದೆ| ಸುಮಾರು ಐದಾರು ಜನರು ಗುಂಪು ಏಕಾಏಕಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಆತನ ಬಳಿಯಿಂದ ನಗದು ಹಾಗೂ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ| 


ಬೆಳಗಾವಿ(ಅ.5): ಸಹಾಯ ಮಾಡಲು ಹೋದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ 12 ಸಾವಿರ ನಗದು ಹಾಗೂ 7 ಸಾವಿರ ಮೌಲ್ಯದ ಮೊಬೈಲ್‌ ದರೋಡೆ ಮಾಡಿದ ಘಟನೆ ಶನಿವಾರ ಯಮಕನಮರಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ ಸೋಮಲಿಂಗ ಬಸವರಾಜ ತಳವಾರ (26) ಹಲ್ಲೆಗೊಳಗಾದ ವ್ಯಕ್ತಿ. ಸೋಮಲಿಂಗ ತನ್ನ ಸಹೋದರಿ ಗಂಡನ ಮನೆಯಾದ ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾಮಕ್ಕೆ ತೆರಳಿ, ತನ್ನ ಸಹೋದರಿ ಹಾಗೂ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ. ಈ ವೇಳೆ ಮನೆಯಲ್ಲಿ ಅನ್ಯಕಾರ್ಯದ ನಿಮಿತ್ತ ಮಾವನ ಹತ್ತಿರ 10 ಸಾವಿರ ಹಣ ತೆಗೆದುಕೊಂಡು ಬರುತ್ತಿದ್ದನು. 

Tap to resize

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಸ್ಲಾಂಪೂರ ಗ್ರಾಮದ ಹೊರವಲಯದಲ್ಲಿ ಕುದುರೆ ಹೆಜ್ಜೆ ನಾಲಾ ಎಂಬ ಸೇತುವೆ ಹತ್ತಿರ ಅಪರಿಚಿತ ದ್ವಿಚಕ್ರ ವಾಹನ ಬಿದ್ದಿರುವುದನ್ನು ಕಂಡು ಸೋಮಲಿಂಗ ಮಾನವೀಯ ನೆಲೆಗಟ್ಟಿನಲ್ಲಿ ಆ್ಯಂಬುಲೆನ್ಸ್‌ಗೆ ಕರೆ ಮಾಡಲು ಮುಂದಾಗುತ್ತಿದ್ದಂತೆ ಹಿಂಬದಿಯಿಂದ ಸುಮಾರು ಐದಾರು ಜನರು ಗುಂಪು ಏಕಾಏಕಿ ಸೋಮಲಿಂಗ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಆತನ ಬಳಿಯಿಂದ ಒಟ್ಟು .12 ಸಾವಿರ ನಗದು ಹಾಗೂ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ವಿಷಯ ತಿಳಿದ ಸೋಮಲಿಂಗ ಮಾವನ ಮನೆಯವರು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
 

click me!