ನಂದಿ ಮೂರ್ತಿಗೆ ಚಪ್ಪಲಿ ಹಾರ: ಗೊಳಸಂಗಿ ಗ್ರಾಮ ಉದ್ವಿಗ್ನ

By Web Desk  |  First Published Jun 9, 2019, 8:30 AM IST

ನಂದಿ ಮೂರ್ತಿಗೆ ಚಪ್ಪಲಿ ಹಾರ: ಗೊಳಸಂಗಿ ಗ್ರಾಮ ಉದ್ವಿಗ್ನ| ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನದಲ್ಲಿರುವ ನಂದಿ ಮೂರ್ತಿ


ಬಸವನಬಾಗೇವಾಡಿ[ಜೂ.09]: ಬಸವೇಶ್ವರ ದೇವಸ್ಥಾನದಲ್ಲಿರುವ ಶಿವನ ವಾಹನ ನಂದಿ(ಬಸವ) ಮೂರ್ತಿಗೆ ಯಾರೋ ದುಷ್ಕರ್ಮಿಗಳು ಬೆಳಗ್ಗೆ ಪೂಜಾ ವಿಧಿವಿಧಾನದ ನಂತರ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ಎಪಿಎಂಸಿ ಹತ್ತಿರ ಇರುವ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದೆ. ಬಸವೇಶ್ವರ ದೇವಸ್ಥಾನದಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನಂದಿ ಮೂರ್ತಿಗೆ ಚಪ್ಪಲಿ ಹಾರ ಹಾಕಿದ್ದಾರೆ. ಈ ಸುದ್ದಿ ಗೊತ್ತಾಗುತ್ತಿದ್ದಂತೆ ಬಸವ ಭಕ್ತರು, ಗ್ರಾಮಸ್ಥರು ದೇವಸ್ಥಾನದಲ್ಲಿ ಜಮಾಯಿಸಿದರು. ಕೂಡಲೇ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರನ್ನು ಕರೆದು ಪರಿಶೀಲಿಸಿ, ತಪ್ಪಿತಸ್ಥರನ್ನು ಕಂಡು ಹಿಡಿಯಬೇಕೆಂದು ಪಟ್ಟು ಹಿಡಿದರು

Latest Videos

ನಂತರ ನಂದಿ ಮೂರ್ತಿಗೆ ಹಾಕಲಾಗಿದ್ದ ಚಪ್ಪಲಿಯನ್ನು ತೆಗೆದು ಇಡೀ ದೇವಸ್ಥಾನ ಸ್ವಚ್ಛಗೊಳಿಸಿ ಧಾರ್ಮಿಕ ವಿಧಿವಿಧಾನದಂತೆ ಬಸವ ಭಕ್ತರು ಪೂಜೆ ಮಾಡಿದರು. ಇದುವರೆಗೆ ದುಷ್ಕರ್ಮಿಗಳು ಪತ್ತೆಯಾಗಿಲ್ಲ. ಈ ಕುರಿತು ಕೂಡಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!