ನಮ್ಮಲ್ಲಿ ರಿವಾಲ್ವರ್‌ಗಳಿವೆ ಅವುಗಳಿಗೆ ಪೂಜೆ ಮಾಡಬೇಕಾ? ಎಂದ ಕೇಂದ್ರ ಸಚಿವ

By Suvarna News  |  First Published Dec 20, 2019, 12:32 PM IST

ವಿರೋಧ ಪಕ್ಷಗಳು ಪ್ರಧಾನಿ ಮೋದಿ, ಅಮಿತ್ ಷಾ ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿವೆ| ಏನಾದರೂ ಸಮಸ್ಯೆ ಇದ್ದರೆ ಚರ್ಚೆ ಮೂಲಕ ಪರಿಹರಿಸಿಕೊಳ್ಳಬೇಕು| ಅದು ಬಿಟ್ಟು ಹೀಗೆ ಶಾಂತಿಯನ್ನ ಕಡಿಸಬಾರದು| ರೈಲ್ವೆ ಆಸ್ತಿ ಪಾಸ್ತಿ ಹಾನಿ ಮಾಡುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ದೇನೆ ಎಂದ ಸುರೇಶ ಅಂಗಡಿ|
 


ಬೆಳಗಾವಿ[ಡಿ.20]: ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು ಸೇರಿಕೊಂಡು ದೇಶದಲ್ಲಿ ಅಶಾಂತಿ ಉಂಟು ಮಾಡುವ ಕೆಲಸ ಮಾಡುತ್ತಿವೆ. ವಿರೋಧ ಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಜನರ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಎಲ್ಲರೂ ಶಾಂತಿ ಕಾಪಾಡಬೇಕು ಅಂತ ಮನವಿ ಮಾಡುತ್ತೇನೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿವಿಧೆಡೆ ಹಿಂಸಾಚಾರ ವಿಚಾರದ ಬಗ್ಗೆ ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿರೋಧ ಪಕ್ಷಗಳು ಪ್ರಧಾನಿ ಮೋದಿ, ಅಮಿತ್ ಷಾ ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿವೆ.ಏನಾದರೂ ಸಮಸ್ಯೆ ಇದ್ದರೆ ಚರ್ಚೆ ಮೂಲಕ ಪರಿಹರಿಸಿಕೊಳ್ಳಬೇಕು. ಅದು ಬಿಟ್ಟು ಹೀಗೆ ಶಾಂತಿಯನ್ನ ಕಡಿಸಬಾರದು ಎಂದು ಹೇಳಿದ್ದಾರೆ.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರೈಲ್ವೆ ಆಸ್ತಿ ಪಾಸ್ತಿ ಹಾನಿ ಮಾಡುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ್ದೇನೆ. ರೈಲ್ವೆ ಆಸ್ತಿ ಪಾಸ್ತಿ ಹಾನಿ ಮಾಡುವವರಿಗೆ ಗುಂಡಿಕ್ಕಿ ಎಂಬ ಹೇಳಿಕೆಗೆ ನಾನು ಈಗಲೂ ನಾನು ಬದ್ಧನಿದ್ದೇನೆ. ನಿಮ್ಮನೆಗೆ ಬೆಂಕಿ ಹಚ್ಚಲು ಬಂದ್ರೆ ಸುಮ್ಮನೇ ಕೂರ್ತಿರಾ? ರಿವಾಲ್ವರ್‌ ನಮ್ಮಲ್ಲಿವೆ ಅವುಗಳಿಗೆ ಪೂಜೆ ಮಾಡಬೇಕಾ? ಎಂದು ಪ್ರಶ್ನಿಸಿದ್ದಾರೆ.

"

ಯಡಿಯೂರಪ್ಪ ಮೊದಲು ಸಿಎಂ ಆದಾಗ ಇಬ್ಬರು ರೈತರು ಬಲಿ, ಈಗ ಇಬ್ಬರು ಯುವಕರ ಬಲಿ ಎಂಬ ಸಿದ್ದರಾಮಯ್ಯ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಹಿರಿಯರು ಇದ್ದಾರೆ, ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ವಿರೋಧ ಪಕ್ಷಗಳೇ ಹೊಣೆಗಾರರು ಎಂದು ತಿಳಿಸಿದ್ದಾರೆ.

ಪೌರತ್ವ ಕಾನೂನು ತಂದಿದ್ದು ಕಾಂಗ್ರೆಸ್ ಅಧಿಕಾರದ ಸಂದರ್ಭದಲ್ಲಿ ಆದರೆ ಜಾರಿಯಾಗಿರಲಿಲ್ಲ. ಭಾರತದ ಯಾವ ನಾಯಕರಿಗೆ ಇದರ ಸಮಸ್ಯೆ ಇಲ್ಲ. ಸರ್ಕಾರ ಅಥವಾ ಅರೇ ಸರ್ಕಾರದ ಆಸ್ತಿಪಾಸ್ತಿಗಳನ್ನು ಹಾನಿ ಮಾಡುವ ಕೆಲಸ ಮಾಡಬಾರದು. ಹಾನಿ ಮಾಡಿದರೆ ಆಯಾ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಪೊಲೀಸರ ಗುಂಡೆಟಿಗೆ ಇಬ್ಬರು ಬಲಿ ವಿಚಾರದ ಬಗ್ಗೆ ಮಾತನಾಡಿದ ಅವರು, ಮಂಗಳೂರಲ್ಲಿ ಇಬ್ಬರ ಸಾವಿಗೆ ವಿರೋಧ ಪಕ್ಷಗಳೇ ಹೊಣೆಗಾರರಾಗಿದ್ದಾರೆ. ವಿರೋಧ ಪಕ್ಷದವರಿಗೆ ಸ್ಟೇಟಸ್ ಇಲ್ಲ ಅವರೇನೂ ಮಾತಾಡುತ್ತಾರೆ. ಪ್ರಧಾನಿ ಬಗ್ಗೆ ಏನೂ ಮಾತಾಡಬೇಕು ಅಂತ ಗೊತ್ತಿಲ್ಲ ಅವರಿಗೆ ಎಂದು ಹೇಳಿದ್ದಾರೆ. 

ಡಿಸೆಂಬರ್ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!