ತಮ್ಮ ಮನೆಗೇ ರಾಮ ಬಂದಿದ್ದಾನೆಂಬ ಸಂಭ್ರಮದಲ್ಲಿ ಜನರಿದ್ದಾರೆ: ಕೇಂದ್ರ ಸಚಿವ ಜೋಶಿ

By Kannadaprabha News  |  First Published Jan 23, 2024, 5:27 AM IST

ಇದೇ ರಾಮನ ಪ್ರತಿಷ್ಠಾಪನೆಗಾಗಿ 500 ವರ್ಷಗಳ ಹೋರಾಟ ನಡೆದಿತ್ತು. ಅತ್ಯಂತ ಸರಳವಾಗಿ ಸುಸೂತ್ರವಾಗಿ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆಯಾಗಿದೆ. ರಾಮನೂ ಒಳ್ಳೆಯ ಭಕ್ತನಿಗಾಗಿ ಕಾಯುತ್ತಿದ್ದ. ನರೇಂದ್ರ ಮೋದಿ ಅವರಂತಹ ಒಳ್ಳೆಯ ಭಕ್ತ ಸಿಕ್ಕ ಮೇಲೆಯೇ ಪ್ರಾಣ ಪ್ರತಿಷ್ಠಾಪನೆಯಾಗಿದೆ ಎಂದ ಪ್ರಹ್ಲಾದ ಜೋಶಿ


ಹುಬ್ಬಳ್ಳಿ(ಜ.23):  ‘ನಮ್ಮ ಮನೆಗೇ ರಾಮ ಬಂದಿದ್ದಾನೆ’ ಎನ್ನುವ ರೀತಿಯಲ್ಲಿ ದೇಶದ ಜನತೆ ಖುಷಿಪಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಇಲ್ಲಿನ ವೀರಾಪುರ ಓಣಿಯ ಗೊಲ್ಲರ ಕಾಲನಿಯಲ್ಲಿ ಸೋಮವಾರ ಬೃಹತ್ ಎಲ್ಇಡಿ ಪರದೆಯ ಮೂಲಕ ಅಯೋಧ್ಯೆಯಲ್ಲಿನ ಕಾರ್ಯಕ್ರಮದ ನೇರ ವೀಕ್ಷಣೆ ಮಾಡಿದರು. ಬಳಿಕ, ಕಾಲನಿಯಲ್ಲಿದ್ದ ಶ್ರೀರಾಮನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. 

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಇದೇ ರಾಮನ ಪ್ರತಿಷ್ಠಾಪನೆಗಾಗಿ 500 ವರ್ಷಗಳ ಹೋರಾಟ ನಡೆದಿತ್ತು. ಅತ್ಯಂತ ಸರಳವಾಗಿ ಸುಸೂತ್ರವಾಗಿ ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆಯಾಗಿದೆ. ರಾಮನೂ ಒಳ್ಳೆಯ ಭಕ್ತನಿಗಾಗಿ ಕಾಯುತ್ತಿದ್ದ. ನರೇಂದ್ರ ಮೋದಿ ಅವರಂತಹ ಒಳ್ಳೆಯ ಭಕ್ತ ಸಿಕ್ಕ ಮೇಲೆಯೇ ಪ್ರಾಣ ಪ್ರತಿಷ್ಠಾಪನೆಯಾಗಿದೆ ಎಂದರು.

Latest Videos

undefined

ಅಯೋಧ್ಯೆಯಲ್ಲಿ ರಾಮಲಲ್ಲಾಮೂರ್ತಿ ಎತ್ತಿ ಇಟ್ಟಿದ್ದು ನಾನೇ: ಯಾರು ನಂದಗೋಪಾಲ ಸಫಾರಿ?

ಕಾಂಗ್ರೆಸ್ ತುಷ್ಟಿಕರಣದ ರಾಜಕಾರಣ ಮಾಡುತ್ತಿದೆ. ಬಹುಶಃ ರಾಹುಲ್‌ ಗಾಂಧಿ ಅವರನ್ನು ಸಿದ್ದರಾಮಯ್ಯ ಕೇಳಿರಬೇಕು. ಅವರು ರಜೆ ಕೊಡಬೇಡಿ ಎಂದು ಹೇಳಿರಬೇಕು. ಅದಕ್ಕಾಗಿ ಸಿದ್ದರಾಮಯ್ಯ ರಜೆ ಕೊಟ್ಟಿಲ್ಲ. ಸಿದ್ದರಾಮಯ್ಯ ಮೊದಲಿನಿಂದಲೂ ಹಿಂದೂ ವಿರೋಧಿ ಎಂದರು.

click me!