ಮದ್ವೆ ಮನೆಯ 7 ಮಂದಿಗೆ ಕೊರೋನಾ, ನಗರಸಭೆ, ಪೊಲೀಸ್ ಠಾಣೆ ಸೀಲ್‌ಡೌನ್

By Suvarna News  |  First Published Jul 15, 2020, 7:19 PM IST

ಒಂದೇ ತಾಲೂಕಿನ ಒಂದು ಮದುವೆ ಮನೆ, ನಗರಸಭೆ, ಪೊಲೀಸ್ ಠಾಣೆಗೆ ಕೊರೋನಾ ವಕ್ಕರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಗರಸಭೆ, ಪೊಲೀಸ್ ಠಾಣೆ ಸೀಲ್ ಡೌನ್ ಮಾಡಲಾಗಿದೆ.


ಉಡುಪಿ, (ಜುಲೈ.15): ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ಗ್ರಾಮದ ಒಂದೇ ಮನೆಯಲ್ಲಿ 7 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮನೆಯಲ್ಲಿ 2 ವಾರಗಳ ಹಿಂದೆ ನಡೆದ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಈಗ ಕೊರೋನಾ ಆತಂಕ ಎದುರಾಗಿದೆ.

ಇಲ್ಲಿಂದ ಮದುವೆಯಾಗಿ ಶಿವಮೊಗ್ಗ ಗಂಡನ ಮನೆಗೆ ಹೋಗಿದ್ದ ನವವಧುವಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ತಾಯಿಯ ಮನೆಯವರನ್ನು  ಪರೀಕ್ಷೆ ಮಾಡಲಾಗಿತ್ತು. ಆಗ ಮನೆಯ ಒಬ್ಬ ಪುರುಷ, 3 ಮಹಿಳೆ ಮತ್ತು 3 ಮಕ್ಕಳಿಗೆ ಸೋಂಕು ದೃಢಪಟ್ಟಿದೆ. 

Latest Videos

undefined

ಇಲ್ಲಿ ಮದುವೆಗೆ ಮೊದಲು ನಡೆದ ಮಹೆಂದಿ ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಅವರಿಗೆ ಸೋಂಕಿನ ಆತಂಕ ಎದುರಾಗಿದೆ.   

ನಗರಸಭೆಯಲ್ಲಿ ಕೊರೋನಾ 

 ಮಂಗಳವಾರ ನಗರಸಭೆಯ ಆರೋಗ್ಯ ಇಲಾಖೆಯ ಅಧಿಕಾರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಬುಧವಾರ ನಗರಸಭೆಯ ಇಬ್ಬರು ಮಹಿಳಾ ಸದಸ್ಯರಿಗೆ ಸೋಂಕು ತಗಲಿದೆ. ಕೆಲವು ದಿನಗಳ ಹಿಂದೆ ಸದಸ್ಯರೊಬ್ಬರಿಗೆ ಸೋಂಕು ಪತ್ತೆಯಾಗಿತ್ತು.  ಇತ್ತೀಚೆಗೆ ನಗರಸಭೆಯಲ್ಲಿ ಸಭೆ ನಡೆದಿದ್ದು, ಇದೀಗ ಎಲ್ಲಾ ಸದಸ್ಯರು, ಅಧಿಕಾರಿ - ಸಿಬ್ಬಂದಿಗಳು ಆತಂಕಿತರಾಗಿದ್ದಾರೆ. ನಗರಸಭೆಯನ್ನು ಮೂರುದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.

 ಕಾಪು ಠಾಣೆಯಲ್ಲಿ ಸೋಂಕು 

ಎರಡು ದಿನಗಳ ಹಿಂದೆ ಕಾಪು ಪೊಲೀಸ್ ಠಾಣೆಯ ಎಎಸೈಯೊಬ್ಬರಿಗೆ ಸೋಂಕು ಪತ್ತೆಯಾಗಿತ್ತು. ಅವರು ಕೋಟಾದಲ್ಲಿರುವ ತಮ್ಮ ಮನೆಯಲ್ಲಿ ಕ್ವಾರಂಟೈನ್ ನಲ್ಲಿರುವುದರಿಂದ ಠಾಣೆಯಲ್ಲಿ ಯಾರಿಗೂ ಸೋಂಕು ಹರಡಿಲ್ಲ ಎಂದು ಭಾವಿಸಲಾಗಿತ್ತು. ಆದರೇ ಬುಧವಾರ ಠಾಣೆಯ ಕಾನ್ ಸ್ಟೇಬಲ್ ಗೂ ಸೋಂಕು ದೃಢಪಟ್ಟಿದೆ.

click me!