ನಡುರಸ್ತೆಯಲ್ಲಿ 70 ವರ್ಷದ ವೃದ್ಧ ತಾಯಿಯನ್ನು ಬಿಟ್ಟು ಹೋದ ತಮಿಳುನಾಡಿನ ವ್ಯಕ್ತಿ

Published : Sep 29, 2026, 07:41 AM IST
Mother

ಸಾರಾಂಶ

ಬ್ರಹ್ಮಾವರದಲ್ಲಿ ಮಗನೊಬ್ಬ ತನ್ನ 70 ವರ್ಷದ ವೃದ್ಧ ತಾಯಿಯನ್ನು ಅಪರಿಚಿತ ಸ್ಥಳದಲ್ಲಿ ಅಮಾನವೀಯವಾಗಿ ಬಿಟ್ಟು ಹೋಗಿದ್ದಾನೆ. ಶಾಲೆಯ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ಈಕೆಯನ್ನು ಸಮಾಜಸೇವಕರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಉಡುಪಿ: ಸ್ವತಃ ಮಗನೇ ಹೆತ್ತ ತಾಯಿಯನ್ನು ಅಪರಿಚಿತ ಸ್ಥಳದಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಇಲ್ಲಿನ ಬ್ರಹ್ಮಾವರದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಶಾಲೆ ಬಳಿಯಲ್ಲಿದ್ದ ವೃದ್ಧೆಯ ರಕ್ಷಣೆ

ಸೋಮವಾರ ಬೆಳಗ್ಗೆ ಇಲ್ಲಿನ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಬಳಿ ಅಪರಿಚಿತ ವೃದ್ಧೆ ಗಾಬರಿ ಭಯದಿಂದ ಚಡಪಡಿಸುತ್ತಿರುವುದನ್ನು ಶಾಲಾ ಬಸ್ ಚಾಲಕ ರಾಮನಾಥ್ ಶೆಣೈ ಗಮನಿಸಿ, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು.

ತಕ್ಷಣ ಸ್ಪಂದಿಸಿದ ನಿತ್ಯಾನಂದ ಒಳಕಾಡು ಸ್ಥಳಕ್ಕೆ ಧಾವಿಸಿ 112 ತುರ್ತು ಪೊಲೀಸ್ ಸಹಾಯವಾಣಿ ಸಿಬ್ಬಂದಿ ಮತ್ತು ಸ್ಥಳೀಯರ ನೆರವಿನಿಂದ ತಮ್ಮ ಉಚಿತ ಅಂಬ್ಯುಲೆನ್ಸ್‌ನಲ್ಲಿ ಅಸಹಾಯಕ ವೃದ್ಧೆಯನ್ನು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಹೆಸರು ಸರಸ್ವತಿ (70) ತಮಿಳುನಾಡಿನ ತಿರುವಳ್ಳೂರು ಊರು,

ಮಹಿಳೆಯು ತೀವ್ರ ಅನಾರೋಗ್ಯದಿಂದ ಬಳಲುತಿದ್ದು, ನಡೆದಾಡುವ ಸ್ಥಿತಿಯಲ್ಲಿಲ್ಲ, ಆಕೆ ತನ್ನ ಹೆಸರು ಸರಸ್ವತಿ (70) ತಮಿಳುನಾಡಿನ ತಿರುವಳ್ಳೂರು ಊರು, ಮಗ ಕಮಾರ್ ಸಂಬಂಧಿಕರ ಮನೆಗೆ ಹೋಗಲೆಂದು ಕರೆದುಕೊಂಡು ಬಂದು ಬಲವಂತವಾಗಿ ಇಲ್ಲಿ ಇಳಿಸಿ ಹೋಗಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಘಟನೆಯ ಕುರಿತು ನಿತ್ಯಾನಂದ ಒಳಕಾಡು ಅವರು ಮಹಿಳಾ ಪೊಲೀಸ್ ಠಾಣೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೆ ದೂರು ನೀಡಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು ದಿಢೀರ್ ಮಳೆಯಿಂದ ಅವಾಂತರ: ಇಂದಿನಿಂದ ಈ ಮೂರು ಜಿಲ್ಲೆಗಳಿಗೆ ಮಳೆ ಎಚ್ಚರಿಕೆ!
ಕನಕಪುರ ರಸ್ತೆ ಅಪಘಾತದಲ್ಲಿ ದೇಹದಿಂದ ಬೇರ್ಪಟ್ಟುರಸ್ತೆ ಮೇಲೆ ಮಿಡಿಯುತ್ತಿದ್ದ ಹೃದಯ!