ಅದಮಾರು ಮಠದಿಂದ ಕೊರೋನಾ ನಿಧಿಗೆ 55 ಲಕ್ಷ ರು. ದೇಣಿಗೆ

Kannadaprabha News   | Asianet News
Published : Apr 18, 2020, 07:42 AM IST
ಅದಮಾರು ಮಠದಿಂದ ಕೊರೋನಾ ನಿಧಿಗೆ 55 ಲಕ್ಷ ರು. ದೇಣಿಗೆ

ಸಾರಾಂಶ

ಅದಮಾರು ಮಠ ಮತ್ತು ಮಠದ ಶಿಕ್ಷಣ ಸಂಸ್ಥೆಗಳ ವತಿಯಿಂದ ಪ್ರಧಾನ ಮಂತ್ರಿ ಕೊರೋನಾ ಸಂತ್ರಸ್ತರ ನಿಧಿಗೆ 55,55,555 (ಐವತ್ತೈದು ಲಕ್ಷದ ಐವತ್ತೈದು ಸಾವಿರದ ಐನೂರ ಐವತ್ತೈದು ) ರು. ನೀಡಲಾಗಿದೆ.  

ಉಡುಪಿ(ಏ.18): ಇಲ್ಲಿನ ಅದಮಾರು ಮಠ ಮತ್ತು ಮಠದ ಶಿಕ್ಷಣ ಸಂಸ್ಥೆಗಳ ವತಿಯಿಂದ ಪ್ರಧಾನ ಮಂತ್ರಿ ಕೊರೋನಾ ಸಂತ್ರಸ್ತರ ನಿಧಿಗೆ 55,55,555 (ಐವತ್ತೈದು ಲಕ್ಷದ ಐವತ್ತೈದು ಸಾವಿರದ ಐನೂರ ಐವತ್ತೈದು ) ರು. ನೀಡಲಾಗಿದೆ.

ಅದಮಾರು ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಶುಕ್ರವಾರ ಮಠದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಈ ಮೊತ್ತದ ಚೆಕ್‌ ಹಸ್ತಾಂತರಿಸಿದರು. ಜಿಲ್ಲಾಧಿಕಾರಿ ಜಿ.ಜಗದೀಶ್‌, ಶಾಸಕ ಕೆ.ರಘುಪತಿ ಭಟ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್‌ ಉಪಸ್ಥಿತರಿದ್ದರು.

ಹೆಲ್ತ್‌ ಕೇರ್ ಸಿಬ್ಬಂದಿಗೆ 25 ಸಾವಿರ ಪಿಪಿಇ ಕಿಟ್ ಕೊಟ್ಟ ಬಾಲಿವುಡ್ ಬಾದ್‌ಶಾ..!

ಈಗಾಗಲೇ ಅದಮಾರು ಮಠದ ವತಿಯಿಂದ 2 ಲಕ್ಷ ರು.ಗಳನ್ನು ಪ್ರಧಾನ ಮಂತ್ರಿಯವರ ಕೊರೋನಾ ಪರಿಹಾರ ನಿಧಿಗೆ ನೀಡಲಾಗಿದೆ. ಶ್ರೀಕೃಷ್ಣ ಮಠದ ವತಿಯಿಂದ 1,000ದಷ್ಟು ದಿನವಹಿ ಸಾಮಗ್ರಿಗಳ ಕಿಟ್‌ಗಳನ್ನೂ ಹಾಗೂ ಅದಮಾರು ಮಠದ ಆಡಳಿತದಲ್ಲಿರುವ ಕುಂಜಾರುಗಿರಿ ಶ್ರೀ ದುರ್ಗಾದೇವಾಸ್ಥಾನದಿಂದ 250 ಕಿಟ್‌ಗಳನ್ನೂ ನೀಡಲಾಗಿದೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!