ಹಾಸನ: ಕಾರು-ಲಾರಿ ನಡುವೆ ಅಪಘಾತ, ಇಬ್ಬರು ಯುವಕರ ದುರ್ಮರಣ

Published : Dec 24, 2024, 02:21 PM IST
ಹಾಸನ: ಕಾರು-ಲಾರಿ ನಡುವೆ ಅಪಘಾತ, ಇಬ್ಬರು ಯುವಕರ ದುರ್ಮರಣ

ಸಾರಾಂಶ

ಹಾಸನ ನಗರದ ಹೊರವಲಯದ ದೊಡ್ಡಪುರ ಪೆಟ್ರೋಲ್ ಬಂಕ್ ಬಳಿ ನಡೆದ ಅಪಘಾತದಲ್ಲಿ ಚನ್ನರಾಯಪಟ್ಟಣ ತಾಲೂಕಿನ ರಾಗಿ ಬೊಮ್ಮನಹಳ್ಳಿ ಗ್ರಾಮದ ಅಭಿಷೇಕ್ ಹಾಗೂ ತುರುವೇಕೆರೆ ನಿವಾಸಿ ಮಂಜುನಾಥ್ ಇವರು ಸಾವನಪ್ಪಿದ ದುರ್ದೈವಿಗಳು. 

ಹಾಸನ(ಡಿ.24):  ಲಾರಿ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಾಘತದಲ್ಲಿ ಕಾರಿನಲ್ಲಿದ್ದ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ದೊಡ್ಡಪುರ ಪೆಟ್ರೋಲ್ ಬಂಕ್ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ಹಾಸನ ನಗರದ ಹೊರವಲಯದ ದೊಡ್ಡಪುರ ಪೆಟ್ರೋಲ್ ಬಂಕ್ ಬಳಿ ನಡೆದ ಅಪಘಾತದಲ್ಲಿ ಚನ್ನರಾಯಪಟ್ಟಣ ತಾಲೂಕಿನ ರಾಗಿ ಬೊಮ್ಮನಹಳ್ಳಿ ಗ್ರಾಮದ ಅಭಿಷೇಕ್ (೩೨) ಹಾಗೂ ತುರುವೇಕೆರೆ ನಿವಾಸಿ ಮಂಜುನಾಥ್ (೨೮) ಇವರು ಸಾವನಪ್ಪಿದ ದುರ್ದೈವಿಗಳು. 

ಉಡುಪಿ ಸ್ಕೂಲ್ ಬಸ್ ಟೈರ್ ಸ್ಫೋಟ; ಯುವಕ ಎಗರಿ ಬಿದ್ದ ವಿಡಿಯೋ ವೈರಲ್!

ಇಬ್ಬರು ಕೆಲಸದ ನಿಮಿತ್ತ ಹಾಸನಕ್ಕೆ ಕಾರಿನಲ್ಲಿ ಬಂದು ಕೆಲಸ ಮುಗಿಸಿಕೊಂಡು ವಾಪಸ್ಸು ಊರಿಗೆ ಹೋಗಲು ಹಾಸನ ಅರಸೀಕೆರೆ ರಸ್ತೆ ದೊಡ್ಡಪುರ ಗ್ರಾಮದ ಹತ್ತಿರವಿರುವ ಎಚ್.ಪಿ ಪೆಟ್ರೋಲ್ ಬಂಕ್ ನಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ರಸ್ತೆ ದಾಟುತ್ತಿದ್ದಾಗ ಅರಸೀಕೆರೆ ಕಡೆಯಿಂದ ಹಾಸನ ಕಡೆಗೆ ಬರುತ್ತಿದ್ದ ಲಾರಿ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಮೇಲೆ ಹತ್ತಿ ಪಕ್ಕದ ರಸ್ತೆಗೆ ಬಂದು ಹಾಸನ ಕಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಾಗ ಕಾರು ಸಂಪೂರ್ಣ ಜಖಂಗೊಡಿದ್ದು ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರು.

ಈ ಬಗ್ಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ವೇಳೆ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.

PREV
Read more Articles on
click me!

Recommended Stories

ಇಂದು 20,000 ರೈತರ ಜತೆ ಬಿಜೆಪಿ ಸುವರ್ಣಸೌಧ ಮುತ್ತಿಗೆ
ಡ್ರಗ್‌ ಪೆಡ್ಲರ್‌ಗಳಿಗೆ ಬೆಂಗಳೂರೇ ದೊಡ್ಡ ಟಾರ್ಗೆಟ್‌: ಚಾಕೋಲೆಟ್‌, ಕಾಫಿ ಪುಡಿ ಹೆಸರಲ್ಲಿ ಡ್ರಗ್ಸ್‌ ಸಾಗಾಟ