ಕೋಲಾರ: ಯುವಕರ ಬೈಕ್ ವೀಲಿಂಗ್‍ ಹುಚ್ಚಾಟಕ್ಕೆ ಸಹೋದರರಿಬ್ಬರ ದುರ್ಮರಣ

Published : Aug 10, 2019, 07:18 PM IST
ಕೋಲಾರ: ಯುವಕರ ಬೈಕ್ ವೀಲಿಂಗ್‍ ಹುಚ್ಚಾಟಕ್ಕೆ ಸಹೋದರರಿಬ್ಬರ ದುರ್ಮರಣ

ಸಾರಾಂಶ

ಬೈಕ್ ಸವಾರರ ಪುಂಡಾಟಕ್ಕೆ ಅಮಾಯಕ ಇಬ್ಬರ ಜೀವ ಬಲಿ| 2 ಬೈಕ್ ಗಳ ನಡುವೆ ಮುಖಾಮಖಿ ಡಿಕ್ಕಿಯಾಗಿ ಸಹೋದರರಿಬ್ಬರು ಸಾವು| ಬೈಕ್ ವೀಲ್ಹಿಂಗ್ ಮಾಡಿ ಸಹೋದರರ ಪ್ರಾಣ ಬಲಿ ಪಡೆದ ಪುಂಡರು. 

ಕೋಲಾರ,[ಆ.10]:  ತಮ್ಮ ಬೈಕ್  ವೀಲಿಂಗ್ ಹುಚ್ಚಾಟಕ್ಕೆ ಇಬ್ಬರು ಸಹೋದರರನ್ನು ಬಲಿ ಪಡೆದಿರುವ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ವೀಲಿಂಗ್ ಮಾಡಿಕೊಂಡು ಅತಿವೇಗವಾಗಿ ಬಂದ ಪುಂಡರ ಬೈಕ್, ಎದುರಿಗೆ ಬರುತ್ತಿದ್ದ ಮತ್ತೊಂದು ಬೈಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸಹೋದರಿಬ್ಬರು ಸಾವನ್ನಪ್ಪಿದ್ದಾರೆ. 

ಬಂಗಾರಪೇಟೆಯ ಮರಗಲ್ ಗ್ರಾಮದ ನೂರುಲ್ಲಾಖಾನ್(70) ಮತ್ತು ಸಹೋದರ ಜಲೀಲ್ ಖಾನ್(65) ಮೃತಪಟ್ಟ ದುರ್ದೈವಿಗಳು. ಕೋಲಾರ ಮುಖ್ಯರಸ್ತೆ ದಿಂಬಗೇಟ್ ಬಳಿ ನಿನ್ನೆ ಸಂಜೆ ಈ ಇಬ್ಬರು ಸಹೋದರರು ಬೈಕ್‍ನಲ್ಲಿ ಹೋಗುತ್ತಿದ್ದರು. ಇದೇ ವೇಳೆ ಇಬ್ಬರು ಯುವಕರು ಅತಿವೇಗವಾಗಿ ವೀಲಿಂಗ್‍ ಮಾಡಿಕೊಂಡು ಸಹೋದರರು ಹೋಗುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದಿದ್ದಾರೆ.

ಪರಿಣಾಮ ವೀಲಿಂಗ್ ಮಾಡಿಕೊಂಡ ಬೈಕ್ ಸವಾರರು ಹಾಗೂ ಸಹೋದರರಿಬ್ಬರೂ ನೆಲಕ್ಕುರುಳಿ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ನಾಲ್ವರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಹೋದರರಿಬ್ಬರು ಸಾವನ್ನಪ್ಪಿದ್ದಾರೆ.

ಬೈಕ್ ಸವಾರರ ಪುಂಡಾಟಕ್ಕೆ ಅಮಾಯಕ ಇಬ್ಬರ ಜೀವ ಬಲಿಯಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಈ ಬಗ್ಗೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.

PREV
click me!

Recommended Stories

ಭಟ್ಕಳ ತಹಸೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ: ಇಮೇಲ್‌ನಲ್ಲಿ ಡಿಎಂಕೆ ವಿರುದ್ಧ ಅಸಂಬದ್ಧ ಆರೋಪ
ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಕಲಾಪ ಮುಂದಕ್ಕೆ ಇದೇ ಮೊದಲು