ಒಂದೇ ರಾತ್ರಿ ಮೈಸೂರು ರಸ್ತೆಯಲ್ಲಿ 2 ಅಪಘಾತ..ಯುವಕನ ತಲೆ ಛಿದ್ರ

Published : Aug 18, 2018, 10:57 AM ISTUpdated : Sep 09, 2018, 09:33 PM IST
ಒಂದೇ ರಾತ್ರಿ  ಮೈಸೂರು ರಸ್ತೆಯಲ್ಲಿ 2 ಅಪಘಾತ..ಯುವಕನ ತಲೆ ಛಿದ್ರ

ಸಾರಾಂಶ

ಒಂದೆ ದಿನ ಎರಡೆರಡು ಅಪಘಾತ ನಡೆದಿದೆ. ದಾರುಣ ಅಪಘಾತಗಳಿಗೆ ಮೈಸೂರು ರಸ್ತೆ ಸಾಕ್ಷಿಯಾಗಿದ್ದು ಬೈಕ್ ಸವಾರರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬೆಂಗಳೂರು[ಆ.18]   ಒಂದೇ ರಾತ್ರಿ..ಒಂದೇ ಮುಖ್ಯ ರಸ್ತೆಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ನಡೆದಿದೆ.ಗುರುವಾರ ತಡ ರಾತ್ರಿ, 25 ವರ್ಷ ಹರೆಯದ ಯುವಕ ಮೈಸೂರು ರಸ್ತೆಯ ಸ್ಯಾಟ್​ಲೈಟ್​ ಬಸ್​ ನಿಲ್ದಾಣದ ಬಳಿ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಲಾರಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ನಂತರ ಲಾರಿ ನೆಲಕ್ಕೆ ಬಿದ್ದ ಬೈಕ್​ ಸವಾರನ ಮೇಲೆ ಹರಿದಿದ್ದು ಯುವಕನ ತಲೆ ಛಿದ್ರವಾಗಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಇದಾದ ಒಂದೇ ಗಂಟೆ ಅವಧಿಯಲ್ಲಿ ಅದೇ ರಸ್ತೆಯ ಮತ್ತೊಂದು ಕಡೆ ಇಂಡಿಕಾ ಕಾರು ಪಲ್ಟಿಯಾಗಿದೆ. ಪಲ್ಟಿಯಾದ ಪರಿಣಾಮ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ..ಕಾರ್​ನ ಚಾಲಕನ ಅಜಾಗರುಕತೆಯಿಂದಲೇ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು ಚಾಲಕ ಸೇರಿ ಇಬ್ಬರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.(ಸಾಂದರ್ಭಿಕ ಚಿತ್ರ]

PREV
click me!

Recommended Stories

ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
ನಟಿ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿಯಿಂದ ಗಲಾಟೆ; ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ!