
ಬೆಂಗಳೂರು (ಫೆ.26): ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಉದ್ಯಮಿ ಮೋಹನ್‌ದಾಸ್ ಪೈ ಜಟಾಪಟಿ ತೀವ್ರವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿನ ರಸ್ತೆಗಳ ಬಗ್ಗೆ ಯಾವ ಕೆಲಸವೂ ಆಗಿಲ್ಲ. ದಯವಿಟ್ಟು ನಮಗೆ ಕನಿಷ್ಠ ಸ್ವಚ್ಛವಾದ, ನಡೆದಾಡಬಹುದಾದ ಸಿಟಿ ಮಾಡುವಂತೆ ಸಚಿವ ಡಿಕೆ ಶಿವಕುಮಾರ್ ಜೊತೆ ಮಾತನಾಡಿ ಎಂದು ಐಟಿ-ಬಿಟಿ ಮಿನಿಸ್ಟರ್ ಪ್ರಿಯಾಂಕ್ ಖರ್ಗೆಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಮೋಹನ್ ದಾಸ್ ಪೈ ಮಾಡಿದ್ದ ಟ್ವೀಟ್‌ಗೆ ಈ ಬಗ್ಗೆ ಗಮನ ನೀಡುತ್ತೇವೆ ಎಂದಾಗಲಿ, ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡುತ್ತೇನೆ ಎಂದು ಹೇಳಿ ವಿಚಾರವನ್ನು ಅಲ್ಲಿಗೆ ಮುಗಿಸಬಹುದಿತ್ತು. ಅದರ ಬದಲು ಬೆಂಗಳೂರಿನಲ್ಲಿ ದೇಶದ ಅತಿಹೆಚ್ಚು ಯೂನಿಕಾರ್ನ್ ಇದೆ, ಅದಿದೆ, ಇದಿದೆ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ ಉತ್ತರಿಸಿದ್ದರು.
ಬೆಂಗಳೂರಿನ ಐಟಿ ಉದ್ಯಮ, ಸ್ಟಾರ್ಟ್‌ಅಪ್ ಗಳ ಬಗ್ಗೆ ಪೋಸ್ಟ್ ಮಾಡಿದ್ದ ಪ್ರಿಯಾಂಕ್ ಖರ್ಗೆ, 'ಅತಿ ಹೆಚ್ಚು ಯೂನಿಕಾರ್ನ್‌ಗಳಿವೆ, ಅತಿ ಹೆಚ್ಚು ಐಟಿ ರಫ್ತು ಮಾಡ್ತಿದ್ದೇವೆ' ಎಂದು ವಿಷಯಾಂತರ ಮಾಡುವ ಕುರಿತಾದ ಟ್ವೀಟ್ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಉದ್ಯಮಿ ಮೋಹನ್ ದಾಸ್ ಪೈ, 'ಸಚಿವ ಪ್ರಿಯಾಂಕ್ ಖರ್ಗೆ ಅವರೆ ನಮಗೆ ಇದೆಲ್ಲವೂ ತಿಳಿದಿದೆ. ನಮ್ಮ ಜೀವನವನ್ನು ಸುಧಾರಿಸಲು ನೀವು ನಮ್ಮ ಮಂತ್ರಿಯಾಗಿ ಏನು ಮಾಡಿದ್ದೀರಿ?' ಎಂದು ಪ್ರಶ್ನೆ ಮಾಡಿದದರು.
'ಯಾವುದೇ ರಸ್ತೆ ಗುಂಡಿಗಳು ಇಲ್ಲದೇ ಇರುವ ಉತ್ತಮ ನಗರ ಮಾಡುವ ಬಗ್ಗೆ ಗ್ಯಾರಂಟಿ ಇದೆಯಾ? ಉತ್ತಮ ಪಾದಚಾರಿ ಮಾರ್ಗದ ಜೊತೆಗೆ ಬೆಂಗಳೂರು ಕ್ಲೀನ್ ಸಿಟಿಯಾಗಿ ಮಾಡಬಲ್ಲಿರಾ? ಇದು ರಾಕೆಟ್ ಸೈನ್ಸ್ ಅಲ್ಲ ನಿರಂತರ ನಿರ್ವಹಣೆ ಕೆಲಸ. ದಯವಿಟ್ಟು ನಮಗೆ ಕನಿಷ್ಠ ಸ್ವಚ್ಛವಾದ, ನಡೆದಾಡಬಹುದಾದ ಸಿಟಿ ಮಾಡುವಂತೆ ಸಚಿವ ಡಿಕೆ ಶಿವಕುಮಾರ್ ಜೊತೆ ಮಾತನಾಡಿ. ಕಳೆದ 2 ವರ್ಷಗಳಲ್ಲಿ ನಮ್ಮ ಜೀವನವು ಹೆಚ್ಚು ಶೋಚನೀಯವಾಗಿದೆ ಎಂದು ತಿರುಗೇಟು ನೀಡಿದ್ದರು.
ಈಗಲೂ ಕೂಡ ವಿಚಾರವನ್ನು ಮತ್ತಷ್ಟು ಎಳೆಯದೆ ತಣ್ಣಗೆ ಮಾಡುವ ಬದಲು 500 ಶಬ್ದಗಳ ಟ್ವೀಟ್ ಕುಟ್ಟಿರುವ ಐಟಿ ಸಚಿವರು, 'ಮೋಹನ್‌ದಾಸ್ ಪೈ ಅವರೇ, ಇದು ರಾಕೆಟ್ ವಿಜ್ಞಾನವಲ್ಲದಿದ್ದರೆ ನಿಮ್ಮ ಅಂದಿನ ಸರ್ಕಾರಕ್ಕೆ ಏಕೆ ಜ್ಞಾನೋದಯ ಮಾಡಲಿಲ್ಲ? ನಾವು 135 ಸ್ಥಾನಗಳನ್ನು ಪಡೆದ ನಂತರ ನಿಮ್ಮ ಸಂಕಟಗಳು ನೋವಿನಿಂದ ಕೂಡಿದೆ ಎಂದು ತೋರುತ್ತಿದೆ. ನಿಮ್ಮ ವಿಶ್ವಗುರು ನರೇಂದ್ರ ಮೋದಿ ಕರ್ನಾಟಕವನ್ನು ತಿರಸ್ಕಾರದಿಂದ ನಡೆಸಿಕೊಳ್ಳುತ್ತಿರುವಾಗ ಏಕೆ ಸುಮ್ಮನಿರುವಿರಿ?' ಎಂದು ತಿರುಗೇಟು ನೀಡಿದ್ದಾರೆ.
ಕಳೆದ 10 ವರ್ಷಗಳಲ್ಲಿ ಬೆಂಗಳೂರು ದೇಶದ ಮಹಾನಗರಗಳಲ್ಲಿ ಅತ್ಯಂತ ವೇಗವಾಗಿ ಬೆಳೆದಿದೆ ಎಂದು ನಿಮಗೆ ತಿಳಿದಿದೆ. ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ನಿಮ್ಮ ನಿರಂತರ ನಕಾರಾತ್ಮಕತೆಯನ್ನು ನಿಮ್ಮ ನಾಯಕರು ಮೆಚ್ಚಬಹುದು ಎಂದು ನನಗೆ ಖಾತ್ರಿಯಿದೆ. ಆದರೆ ನಿಮಗೆ ತಿಳಿದಿರಲಿ, ನಿಮ್ಮ ಈ ಟೀಕೆಗಳು ನಿಮಗೆ ದೆಹಲಿಯಲ್ಲಿ ಅವಕಾಶ ದೊರಕಿಸುವುದಿಲ್ಲ. ನಿಮ್ಮ ನಿರಂತರ ಟೀಕೆಗಳಿಂದ ರಾಜ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎನ್ನುವುದನ್ನು ಅರ್ಥಮಾಡಿಕೊಂಡಿದ್ದೀರಾ? ನೀವು ಅದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದೀರಾ? ದೆಹಲಿಯ ಅಧಿಕಾರದ ಮೊಗಸಾಲೆಯಲ್ಲಿ ನೀವು ಎಲ್ಲರಿಗೂ ಹತ್ತಿರವಾಗಿದ್ದೀರಿ ರಾಜ್ಯದ ಹಿತಾಸಕ್ತಿಗಾಗಿ ಕೆಲಸ ಮಾಡಿ ತೋರಿಸಿ ಎಂದು ಬರೆದುಕೊಂಡಿದ್ದಾರೆ.
ಒಬ್ಬ ಉದ್ಯಮಿಯಾಗಿ ಆಗೂ ಪ್ರಜೆಯಾಗಿ ರಾಜ್ಯದ ಅದರಲ್ಲೂ ಸಿಲಿಕಾನ್ ಸಿಟಿಯಾಗಿರುವ ಬೆಂಗಳೂರಿನ ರಸ್ತೆಗಳ ಅಭಿವೃದ್ಧಿ ಬಗ್ಗೆ ಮೋಹನ್‌ದಾಸ್ ಪೈ ಮಾತನಾಡಿದ್ದಾರೆ.ಇದಕ್ಕೆ ಸಮಂಜಸವಾದ ಉತ್ತರ ನೀಡೋದನ್ನು ಬಿಟ್ಟು, ಬೆಂಗಳೂರು, ದೆಹಲಿ, ನರೇಂದ್ರ ಮೋದಿ, ಕರ್ನಾಟಕ, ಕನ್ನಡಿಗರು, ರಾಜ್ಯಸಭೆ ಟಿಕೆಟ್ ಅಂತಾ ಇಲ್ಲಸಲ್ಲದ ವಿಚಾರಗಳನ್ನು ಟ್ವೀಟ್‌ನಲ್ಲಿ ಬರೆದಿರುವ ಪ್ರಿಯಾಂಖ್ ಖರ್ಗೆಯನ್ನು ಜನರೇ ಟೀಕಿಸಿದ್ದಾರೆ.
'ಈ ಉತ್ತರವನ್ನು ಟೈಪ್ ಮಾಡಿ ತುಂಬಾ ಸಮಯ ಕಳೆಯುವ ಬದಲು, ದಯವಿಟ್ಟು ಬೆಂಗಳೂರಿನ ರಸ್ತೆಯ ಸ್ಥಿತಿಯನ್ನು ಕಾಪಾಡಿಕೊಳ್ಳಲು ಅಧಿಕಾರಿಗಳನ್ನು ವಿನಂತಿಸಬಹುದೇ? ದ್ವಿಚಕ್ರ ವಾಹನಗಳು ನಗರದಲ್ಲಿ ಓಡಾಡುವುದು ಅಕ್ಷರಶಃ ನರಕಯಾತನೆ. ನಗರದಲ್ಲಿ ಹಲವು ಫಾರ್ಚೂನ್ 500 ಕಂಪನಿಗಳಿರುವುದರಿಂದ, ರಸ್ತೆಗಳಿದ್ದರೆ ಒಳ್ಳೆಯದು' ಎಂದು ಯೂಸರ್ ಒಬ್ಬರು ಟ್ವೀಟ್ ಮಾಡಿದ್ದಾರೆ.
'ಕಾಂಗ್ರೆಸ್ ಸಚಿವರು ಇಷ್ಟೊಂದು 'ಅಳುತ್ತಾರೆ' ಅನ್ನೋದರಲ್ಲಿ ಆಶ್ಚರ್ಯವಿಲ್ಲ.. ಪ್ರಿಯಾಂಕ್ ಖರ್ಗೆ ತಮ್ಮ ಪ್ರಯತ್ನದಲ್ಲಿ ಕನಿಷ್ಠ 1% ನಷ್ಟು ಭಾಗವನ್ನು ಬದಲಾವಣೆಗೆ ಬಳಸಿದ್ದರೆ ಅವರು ಇದನ್ನು ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಎಂದಿಗೂ ಆಡಳಿತದಲ್ಲಿ ಆಸಕ್ತಿ ಹೊಂದಿಲ್ಲ. ಕೇವಲ ಅಳೋದರಲ್ಲಿ, ಎದೆ ಬಡಿದುಕೊಳ್ಳೋದರಲ್ಲಿ ಮಾತ್ರವೇ ಆಸಕ್ತಿ ಹೊಂದಿದೆ' ಎಂದು ಬರೆದಿದ್ದಾರೆ.
ಗೂಗಲ್ ಬಳಿಕ, ಬೆಂಗಳೂರಿನಲ್ಲಿ ಕಚೇರಿ ಆರಂಭಿಸಲಿರುವ ಮೆಟಾ!
'ಕೆ.ಆರ್. ಪುರಂ ನಿಂದ ಸಿಲ್ಕ್ ಬೋರ್ಡ್ ವರೆಗೆ ಬಿ.ಎಂ.ಟಿ.ಸಿ ಬಸ್/ಸ್ಕೂಟರ್ ನಲ್ಲಿ ಯಾಕೆ ಸವಾರಿ ಮಾಡಬಾರದು? ಆಗ ಸಾಮಾನ್ಯ ಮನುಷ್ಯನ ನಿಜವಾದ ಕಷ್ಟ ನಿಮಗೆ ಅರ್ಥವಾಗುತ್ತದೆ. 2 ವರ್ಷಗಳಾಗಿವೆ, ಕನಿಷ್ಠ ಇಂದಿನಿಂದ ನೀವು ಸರಿ, ಉಳಿದವು ತಪ್ಪು ಎಂದು ಹೇಳುವುದಕ್ಕಿಂತ ಸ್ವಲ್ಪ ಕೆಲಸ ಮಾಡಿ' ಎಂದು ಪ್ರಿಯಾಂಕ್ ಖರ್ಗೆಗೆ ಜಾಡಿಸಿದ್ದಾರೆ.
ಖರ್ಗೆ ತವರು ಕ್ಷೇತ್ರದಲ್ಲೇ ಇದೆಂಥ ಸ್ಥಿತಿ? ಮೊಬೈಲ್ ಟಾರ್ಚ್ ಬೆಳಕಲ್ಲೇ ಗರ್ಭಿಣಿಗೆ ಹೆರಿಗೆ ಮಾಡಿಸಿದ ವೈದ್ಯರು!