Tumkur: ಭೂಮಿ, ವಸತಿ ವಂಚಿತರಿಂದ ಬೃಹತ್‌ ಪ್ರತಿಭಟನೆ

By Kannadaprabha News  |  First Published Jul 18, 2023, 6:07 AM IST

ಜಿಲ್ಲೆಯ ಭೂಮಿ ಮತ್ತು ವಸತಿ ವಂಚಿತರ ಹಕ್ಕು ಹೋರಾಟ ಸಮಿತಿ ಹಾಗೂ ತುಮಕೂರು ಜಿಲ್ಲಾ ಬೀದಿಬದಿ ವ್ಯಾಪಾರಿಗಳ ವಸತಿ ಹಕ್ಕು ಸಂಘದ ವತಿಯಿಂದ ತುಮಕೂರಿನಲ್ಲಿ ಟೌನ್‌ಹಾಲ… ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.


 ತುಮಕೂರು : ಜಿಲ್ಲೆಯ ಭೂಮಿ ಮತ್ತು ವಸತಿ ವಂಚಿತರ ಹಕ್ಕು ಹೋರಾಟ ಸಮಿತಿ ಹಾಗೂ ತುಮಕೂರು ಜಿಲ್ಲಾ ಬೀದಿಬದಿ ವ್ಯಾಪಾರಿಗಳ ವಸತಿ ಹಕ್ಕು ಸಂಘದ ವತಿಯಿಂದ ತುಮಕೂರಿನಲ್ಲಿ ಟೌನ್‌ಹಾಲ… ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಜಿಲ್ಲೆಯ ವಿವಿಧ ತಾಲೂಕಿನಿಂದ ಆಗಮಿಸಿದ್ದ ನೂರಾರು ಮತ್ತು ವಸತಿ ವಂಚಿತ ಫಲಾನುಭವಿಗಳು ಪ್ರತಿಭಟನೆಯಲ್ಲಿ ಹೆಜ್ಜೆ ಹಾಕಿ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿಗಳ ಕಚೇರಿ ಬಳಿಗೆ ಬಂದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್‌ ಪ್ರತಿಭಟನಾ ಧರಣಿ ನಡೆಸಿ ಕೂಡಲೇ ನಮೂನೆ 50, 53, 57ಕ್ಕೆ ವಸತಿ ಮತ್ತು ಭೂಮಿಗಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಶ್ರೀನಿವಾಸ ಅವರಿಗೆ ಮನವಿ ಮಾಡಿದರು.

Tap to resize

Latest Videos

ಭೂಮಿ ಮತ್ತು ವಸತಿ ವಂಚಿತ ಹೋರಾಟ ಹಕ್ಕು ಸಮಿತಿಯ ರಾಜ್ಯಾಧ್ಯಕ್ಷ ಕುಮಾರ್‌ ಸಮತಳ ಮಾತನಾಡಿ, ನಮ್ಮ ನಾಡಿನ ದೀನ ದಲಿತರು, ಶೋಷಿತರು ತಲತಲಾಂತರದಿಂದ ವಸತಿ ಭೂಮಿಗಾಗಿ ಅರ್ಜಿ ಸಲ್ಲಿಸಿ ಕಚೇರಿಗೆ ತಿರುಗಿ ಚಪ್ಪಲಿ ಸವೆಸುತ್ತಿದ್ದಾರೆ. ಉಳ್ಳವರು ಭೂಮಿ ಮತ್ತು ವಸತಿ ವಂಚಿತರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದು ಹಲವು ಸರ್ಕಾರಗಳು ಬಂದು ಆಡಳಿತ ನಡೆಸಿದರೂ ಈವರೆಗೂ ಸಮನಾದ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಸಮಾಜವಾದಿ ಹಿನ್ನೆಲೆಯಿಂದ ಬಂದ ಸಮಾಜದ ಬಗ್ಗೆ ಕಳಕಳಿ ಇರುವ ಅಹಿಂದ ಅಸ್ಮಿತೆ ಎನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೂಮಿ ಮತ್ತು ವಸತಿ ಹೋರಾಟಗಾರರ ಮನವಿ ಆಲಿಸಿ ಶೀಘ್ರವಾಗಿ ಭೂಮಿ ಮತ್ತು ವಸತಿಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ವಕೀಲರಾದ ಸುಧಾ ಮಾತನಾಡಿ, ಕಾನೂನಿನಲ್ಲಿ ಎಲ್ಲರೂ ಕೂಡ ಸಮಾನರು. ಸಮಾನತೆ ನಮಗೆಲ್ಲಾ ಕಬ್ಬಿಣದ ಕಡಲೆಯಾಗಿದ್ದು, ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಸಂವಿಧಾನದಲ್ಲಿ ಕೇವಲ ಎಲ್ಲರಿಗೂ ಸಮಾನತೆ ಎಂಬ ಬೋಧನೆ ಇದೆಯಷ್ಟೇ, ಹಾಗಾಗಿ ನ್ಯಾಯ ಸಿಗುವವರೆಗೂ ಹೋರಾಟ ನಡೆಸೋಣ ಎಂದರು.

ತುಮಕೂರು ಜಿಲ್ಲಾ ಭೂಮಿ ಮತ್ತು ವಸತಿ ಹೋರಾಟ ಹಕ್ಕು ಸಮಿತಿಯ ಜಿಲ್ಲಾಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಆಂದ್ರಾಳು ನಾಗಭೂಷಣ… ಮಾತನಾಡಿದರು.

ಹೈಕೋರ್ಚ್‌ ವಕೀಲರಾದ ಉಮಾಪತಿ, ಹಿರಿಯ ವಕೀಲ ಹಾಗೂ ಹೋರಾಟಗಾರ ನರಸಿಂಹಮೂರ್ತಿ, ಬೆಂಗಳೂರು ಮರಿಯಪ್ಪ, ವಕೀಲರಾದ ಮಾರನಹಳ್ಳಿ ಗಣೇಶ್‌, ಶಿವಕುಮಾರ್‌ ಮೇಷ್ಟು್ರ ಮನೆ, ಪದ್ಮನಾಭ, ಮೋಹನ್‌, ಶಿವಕುಮಾರ್‌, ಶೇಖರ್‌, ಚಿನ್ಮಯ…, ಜೆಸಿಬಿ ವೆಂಕಟೇಶ್‌, ಮಳೆಕಲ್ಲಹಳ್ಳಿ ಯೋಗೇಶ್‌, ನೇಗಲಾಲ ಸಿದ್ದೇಶ್‌, ಬೀದಿಬದಿ ವ್ಯಾಪಾರಿ ಸಂಘಟನೆಯ ಭದ್ರೇಗೌಡ, ಮಂಜುನಾಥ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ವಸತಿ ಮತ್ತು ಭೂಮಿ ವಂಚಿತ ಹೋರಾಟಗಾರರು ಫಲಾನುಭವಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಭೂಮಿ ಇಂದು ಮಾರಾಟದ ವಸ್ತುವಾಗಿದ್ದು, ಯಾರಿಗೂ ಕೂಡಾ ದಕ್ಕುತ್ತಿಲ್ಲ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನಲ್ಲಿ ಸತ್ತವರನ್ನು ಹೂಳಲು ಕೂಡ ಭೂಮಿ ಇಲ್ಲ. ಈಗಲೂ ಆ ಭಾಗದ ಜನರು ಹೋರಾಟ ಮಾಡುತ್ತಲೇ ಇದ್ದಾರೆ. ಸರ್ಕಾರಗಳು ಮತ್ತು ಆಡಳಿತಗಳು ನಿರಂತರವಾಗಿ ಹೋರಾಟ ಮಾಡುತ್ತಿರುವ ಭೂಮಿ ಮತ್ತು ವಸತಿ ಹೋರಾಟಗಾರರಿಗೆ ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ. ಬಂಡವಾಳಗಾರರು ಭೂಮಿಯನ್ನು ಲೂಟಿ ಹೊಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಲಾಭಕ್ಕಾಗಿ ಇಣುಕುತ್ತಿವೆ.

ಸಿ. ಯತಿರಾಜ್‌ ಪ್ರಗತಿಪರ ಹೋರಾಟಗಾರ

click me!