ನಗರದ ಹಾಸನ ಸರ್ಕಲ್‌ನ ರೈಲ್ವೆ ಗೇಟ್‌ನಲ್ಲಿ ರೈಲ್ವೆ ಮೇಲ್ಸೆತುವೆ ಅಥವಾ ಕೆಳ ಸೇತುವೆ ನಿರ್ಮಾಣ ಮಾಡಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಪ್ರತಿನಿತ್ಯ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ತಾಲೂಕು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಸ್. ಜಯಣ್ಣ ರಾಜ್ಯ ಸರ್ಕಾರ ಹಾಗೂ ಲೋಕಸಭಾ ಸದಸ್ಯರನ್ನು ಒತ್ತಾಯಿಸಿದ್ದಾರೆ.
ತಿಪಟೂರು: ನಗರದ ಹಾಸನ ಸರ್ಕಲ್‌ನ ರೈಲ್ವೆ ಗೇಟ್‌ನಲ್ಲಿ ರೈಲ್ವೆ ಮೇಲ್ಸೆತುವೆ ಅಥವಾ ಕೆಳ ಸೇತುವೆ ನಿರ್ಮಾಣ ಮಾಡಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಪ್ರತಿನಿತ್ಯ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ತಾಲೂಕು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಸ್. ಜಯಣ್ಣ ರಾಜ್ಯ ಸರ್ಕಾರ ಹಾಗೂ ಲೋಕಸಭಾ ಸದಸ್ಯರನ್ನು ಒತ್ತಾಯಿಸಿದ್ದಾರೆ.
ತಿಪಟೂರು, ಆರ್ಥಿಕವಾಗಿ ಅಭಿವೃದ್ದಿ ಹೊಂದುತ್ತಿದ್ದು, ಇದಕ್ಕೆ ಪೂರಕವಾಗಿರುವಂತೆ ರೈಲು ಹಾಗೂ ಬಸ್ ಸಾರಿಗೆ ವ್ಯವಸ್ಥೆಯೂ ಇದೆ. ಆದರೆ ರೈಲ್ವೆ ದ್ವಿಪಥ ಮಾರ್ಗ ಬಂದ ಮೇಲೆ ಬೆಂಗಳೂರು-ಅರಸೀಕೆರೆ ಮಾರ್ಗವಾಗಿ ಪ್ರತಿದಿನ ಹೆಚ್ಚುಗಳು, ಗೂಡ್ಸ್‌ಗಳು ಈ ಮಾರ್ಗದಲ್ಲ್ಲಿ ಸಂಚರಿಸುತ್ತವೆ. ಹಾಸನ ಸರ್ಕಲ್ ರೈಲ್ವೆ ಗೇಟ್ ಬೆಂಗಳೂರು-ಹಾಸನ, ನಗರದ ಗಾಂಧಿನಗರ ಭಾಗದ ಬಡಾವಣೆಗಳು, ಶಾರದಾ ನಗರ ಸೇರಿದಂತೆ ತಿಪಟೂರು, ಅರಸೀಕೆರೆ, ಚನ್ನರಾಯಪಟ್ಟಣ ಭಾಗಗಳ ನೂರಾರು ವಾಹನಗಳು ಇದೇ ರೈಲ್ವೆ ಗೇಟ್ ದಾಟಿ ಹೋಗಬೇಕಾಗಿದೆ.
ನಗರ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಂತೂ ಶಾಲಾ-ಕಾಲೇಜುಗಳಿಗೆ, ಅಧಿಕಾರಿಗಳು ಕಚೇರಿಗಳಿಗೆ ಸರಿಯಾದ ಸಮಯಕ್ಕೆ ಹೋಗಲಾಗುತ್ತಿಲ್ಲ. ತುರ್ತು ಕೆಲಸವಿದ್ದರಂತೂ ದೇವರೆ ಗತಿ. ಅರ್ಧಗಂಟೆಗಳ ಕಾಲ ಸುಖಾಸುಮ್ಮನೆ ವ್ಯಯ ಮಾಡುವಂತಾಗಿದೆ. ಒಟ್ಟಾರೆ ಈ ರೈಲ್ವೆ ಗೇಟ್ ಅನೇಕ ಭಾಗಗಳಿಗೆ ಸಂಪರ್ಕ ಹೊಂದಿದ್ದು ಮೇಲ್ಸೆತುವೆ ಇಲ್ಲದ ಕಾರಣ ದಿನದಲ್ಲಿ ಹತ್ತಾರು ಬಾರಿ ಗೇಟ್ ಮುಚ್ಚುವುದರಿಂದ, ವಾಹನ ಸವಾರರು ಕನಿಷ್ಠ ೨೦-೩೦ನಿಮಿಷಗಳ ಕಾಲ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜೊತೆಗೆ ಬದಲಿ ಮಾರ್ಗವೂ ಇಲ್ಲದ್ದರಿಂದ ಗೇಟ್‌ನ ಎರಡೂ ಕಡೆಗಳಿಂದ ವಾಹನ ಸವಾರರು ಸಾಲುಗಟ್ಟಿ ನಿಂತುಕೊಳ್ಳುತ್ತಾರೆ. ಗೇಟ್ ತೆರೆದ ತಕ್ಷಣವೆ ವಾಹನ ದಟ್ಟಣೆಯಿಂದ ಮುಖಾಮುಖಿ ಡಿಕ್ಕಿ ಒಡೆದು ಅಪಘಾತಗಳು ಸಹ ಸಂಭವಿಸುತ್ತಿದ್ದು, ಈ ಸಮಸ್ಯೆಯನ್ನು ಪ್ರತಿನಿತ್ಯ ಅನುಭವಿಸುವಂತಾಗಿದೆ. ಹಾಗಾಗಿ ರೈಲ್ವೆ ಅಧಿಕಾರಿಗಳೊಂದಿಗೆ ಲೋಕಸಭಾ ಸದಸ್ಯರಾದ ಜಿ.ಎಸ್. ಬಸವರಾಜು ಮಾತನಾಡಿ ತಿಪಟೂರಿನ ಹಾಸನ ಸರ್ಕಲ್ ರೈಲ್ವೆ ಗೇಟ್‌ನಲ್ಲಿ ಮೇಲ್ಸೇತುವೆ ಅಥವಾ ಕೆಳ ಸೇತುವೆ ನಿರ್ಮಿಸುವ ಬಗ್ಗೆ ಗಮನಹರಿಸಬೇಕೆಂದು ನಾಗರಿಕರು, ವಾಹನ ಸವಾರರು ಹಾಗೂ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರ ಪರವಾಗಿ ಎಸ್. ಜಯಣ್ಣ ಒತ್ತಾಯಿಸಿದ್ದಾರೆ.