ಆನೇಕಲ್ ನಲ್ಲಿ ನಡೆದ ಭೀಕರ ಕೊಲೆ ಪ್ರಕರಣದ ಹಿಂದೆ ಅನೈತಿಕ ಸಂಬಂಧದ ಸುಳಿವೊಂದು ಸಿಕ್ಕಿದೆ. ಇದರಿಂದ ವ್ಯಕ್ತಿಯ ಭೀಕರ ಕೊಲೆಯಾಗಿದ್ದು, ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಆನೇಕಲ್ [ಜ.07]: ಆನೇಕಲ್ ತಾಲೂಕಿನ ಸೂರ್ಯನಗರ ಠಾಣಾ ವ್ಯಾಪ್ತಿಯ ಎಚ್.ಹೊಸಳ್ಳಿಯ ಜ್ಯೋತಪ್ಪನ ಭೀಕರ ಕೊಲೆಗೆ ಮಹಿಳೆಯೊಂದಿಗಿನ ಹಣದ ವ್ಯವಹಾರ ಮತ್ತು ಅನೈತಿಕ ಸಂಬಂಧಕ್ಕೆ ಬಲವಂತ ಪಡಿಸಿದ್ದೇ ಕಾರಣ ಎಂದು ತಿಳಿದುಬಂದಿದೆ.
ಜ್ಯೋತಪ್ಪನ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಮೂಲದ ಲಿಂಗರಾಜು ಹಾಗೂ ತುಮಕೂರು ಮೂಲದ ಸತೀಶ್, ರದಿಯಾಬೇಗಂಳನ್ನು ಬಂಧಿಸಲಾಗಿದೆ ಎಂದು ಎಎಸ್‌ಐ ಜಗದೀಶ್ ತಿಳಿಸಿದ್ದಾರೆ.
undefined
ಜ್ಯೋತಪ್ಪ ಚಿಲ್ಲರೆ ಅಂಗಡಿ ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸುತ್ತಿದ್ದ. ಅಲ್ಲದೆ ಮಹಿಳೆಯರಿಗೆ ಮಾತ್ರ ಸಾಲ ನೀಡುತ್ತಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ನಡುವೆ ಗಂಡನನ್ನು ಬಿಟ್ಟಿದ್ದ ರದಿಯಾ ಬೇಗಂಗೆ ಹಣದ ಅಗತ್ಯವಿತ್ತು. ಗೆಳತಿ ಮಂಜುಳಾ ಸಲಹೆ ಮೇರೆಗೆ ಜ್ಯೋತಪ್ಪನಿಂದ 20 ಸಾವಿರ ರು. ಪಡೆದಿದ್ದಳು. ಇದನ್ನೇ ದುರುಪಯೋಗ ಪಡಿಸಿಕೊಂಡ ಜ್ಯೋತಪ್ಪ, ರದಿಯಾಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಈ ಬಗ್ಗೆ ರದಿಯಾ, ಮಂಗಳಾ ಅವರೊಂದಿಗೆ ಸಮಸ್ಯೆ ಹೇಳಿಕೊಂಡಿದ್ದಳು. ಮಂಗಳಾ ತನ್ನ ಪರಿಚಯದ ಪೈಂಟರ್ ವೃತ್ತಿಯ ಲಿಂಗರಾಜುಗೆ ಜ್ಯೋತಪ್ಪನಿಗೆ ಬುದ್ಧಿ ಹೇಳುವಂತೆ ತಿಳಿಸಿದ್ದಳು.
ಬೆಂಗಳೂರಿಗರಿಗೆ ಆತಂಕ ತಂದಿಟ್ಟ ಅಂಕಿ-ಅಂಶ, ಮಸ್ಟ್ ರೀಡ್!...
ಆದರೆ ಲಿಂಗರಾಜು ತನ್ನ ಗೆಳೆಯ ಸತೀಶ್ ಹಾಗೂ ಶಶಿಕುಮಾರ್‌ನೊಂದಿಗೆ ಜೊತೆಗೂಡಿ ಹತ್ಯೆಗೆ ಯೋಜಿಸಿದ್ದರು. ರಾತ್ರಿ ಜನಸಂದಣಿ ಕಡಿಮೆ ಇರುವ ಸ್ಥಳಕ್ಕೆ ಜ್ಯೋತಪ್ಪ ಬಂದಾಗ ಲಿಂಗರಾಜು ತನ್ನ ಬಳಿಯಿದ್ದ ಥಿನ್ನರನ್ನು ಎರಚಿದ್ದ. ಸತೀಶ್ ತನ್ನಲ್ಲಿದ್ದ ಚಾಕುನಿಂದ ಇರಿದು, ಬೆಂಕಿ ಹಚ್ಚಿದ್ದರು. ಈ ವೇಳೆ ಲಿಂಗರಾಜುವಿನ ಬಳಿ ಇದ್ದ ಮೊಬೈಲ್ ಬಿದ್ದು ಹೋಗಿತ್ತು.
ಆ್ಯಸಿಡ್ ಎರಚಿ, ಬೆಂಕಿ ಹಚ್ಚಿ ಪರಾರಿ : ಬೆಂಗಳೂರಲ್ಲೊಂದು ಭೀಕರ ಕೃತ್ಯ...
ಇದರ ಸುಳಿವು ಹಿಡಿದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಶಶಿಕುಮಾರ್ ಪರಾರಿಯಾಗಿದ್ದಾನೆ ಎಂದು ಎಸ್‌ಐ ಜಗದೀಶ್ ತಿಳಿಸಿದ್ದಾರೆ. ಪ್ರಕರಣ ನಡೆದು 36 ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಸೂರ್ಯನಗರ ಪೊಲೀಸರನ್ನು ಗ್ರಾಮಾಂತರ ಎಸ್ಪಿ ರವಿ ಚೆನ್ನಣ್ಣನವರ್ ಅಭಿನಂದಿಸಿದ್ದಾರೆ.