'ಅಮ್ಮಾ ಕ್ರಿಕೆಟ್ ಆಡಲು ಹೋಗ್ತೀನಿ' ಎಂದು ಹೊರಟಿದ್ದ ಮಗ ದುರಂತ ಅಂತ್ಯ, ದಾವಣಗೆರೆಯಲ್ಲಿ ವಿದ್ರಾವಕ ಘಟನೆ

Published : Oct 16, 2026, 04:47 PM IST
davanagere accident 15 year old boy died

ಸಾರಾಂಶ

ಮಕ್ಕಳು ಒಬ್ಬರೇ ಇರುವಾಗ ಕಾರು, ಬೈಕ್ ಕೀಗಳನ್ನ ಮನೆಯಲ್ಲಿ ಇಟ್ಟು ಹೋಗುವ ಮೊದಲು ಪೋಷಕರು ಎಚ್ಚೆತ್ತುಕೊಳ್ಳಬೇಕು. ನೀವು ಜಾಗೃತೆ ವಹಿಸದಿದ್ದರೆ ಇಂಥ ದುರಂತಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ.

ದಾವಣಗೆರೆ: 'ಕ್ರಿಕೆಟ್ ಆಡಲು ಹೋಗ್ತೀನಿ ಅಮ್ಮಾ' ಎಂದು ಮನೆಯಿಂದ ತೆರಳಿದ್ದ ಬಾಲಕ ದುರಂತ ಅಂತ್ಯ ಕಂಡಿದ್ದಾನೆ. 15 ವರ್ಷದ ಸುಜನ್ ಮೃತ ಬಾಲಕ.

ಆಗಿದ್ದೇನು?

ಮನೆಯಲ್ಲಿ ಅಮ್ಮನ ಬಳಿ ಕ್ರಿಕೆಟ್ ಆಡಲು ಹೋಗ್ತೀನಿ ಎಂದು ಹೊರಟಿದ್ದ ಸುಜನ್, ಸ್ನೇಹಿತ ಆದಿತ್ಯನ ಮನೆಗೆ ಹೋಗಿದ್ದ. ಅಲ್ಲಿ ರಾಮ್ ತೇಜ್ ರೆಡ್ಡಿ ಎಂಬಾತ ಕೂಡ ಜೊತೆಯಾಗಿದ್ದ. ಮೂವರು ಸೇರಿ ಕೆಲ ಕಾಲ ಸಹಜವಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ಜಾಲಿರೈಡ್ ಪ್ಲಾನ್ ಮಾಡಿದ್ದಾರೆ. ಯಾಕೆಂದರೆ ಆದಿತ್ಯನ ಮನೆಯಲ್ಲಿ ಪೋಷಕರು ಇರಲಿಲ್ಲ. ಕೆಲಸದ ನಿಮಿತ್ತ ಆಚೆ ಹೋಗಿದ್ದರು. ಮನೆಯಲ್ಲಿದ್ದ ಹುಂಡೈ ಕ್ರೆಟಾ ಕಾರನ್ನು ಬಿಟ್ಟು ಹೋಗಿದ್ದರು. ಪೋಷಕರು ಮನೆಯಲ್ಲಿ ಇಲ್ಲದಿರೋದು ಈ ಮೂವರಿಗೆ ಒಂದೊಳ್ಳೆ ಚಾನ್ಸ್ ಸಿಕ್ಕಂತಾಗಿತ್ತು.

ಕಾರಿನ ಕೀ ತೆಗೆದುಕೊಂಡು ಬಂದು ಆದಿತ್ಯ ಕಾರಿನಲ್ಲಿ ಕೂತಿದ್ದ. ಮೂವರು ಅದೇ ಕಾರಿನಲ್ಲಿ ಶಕ್ತಿನಗರದಿಂದ ತೆರಳಿದ್ದರು. ಆನಗೋಡು ಗ್ರಾಮದತ್ತ ತೆರಳಿದ್ದ ಹುಡುಗರು ಮತ್ತೆ ವಾಪಸ್ ಬರುವಾಗ ಭೀಕರ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಕಾರು ಸಿಎನ್‌ಜಿ ಸಾಗಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ರಾಷ್ಟ್ರೀಯ ಹೆದ್ದಾರಿ 48ರ ಮೇಲೆ ಜಾಲಿ ರೈಡ್‌ ನಡೆಸುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಸುಜನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೋರ್ವ ಬಾಲಕ ಆದಿತ್ಯಗೆ ಗಂಭೀರ ಗಾಯ ಆಗಿದೆ. ಇನ್ನು ಮತ್ತೋರ್ವ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ದಾವಣಗೆರೆ ಉತ್ತರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಾರಿಯಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಮೃತರೆಲ್ಲ ದಾವಣಗೆರೆಯ ಶಕ್ತಿ ನಗರ ಹಾಗೂ ಜೆ ಹೆಚ್ ಪಟೇಲ್ ಬಡಾವಣೆಯ ನಿವಾಸಿಗಳು.

ಪೋಷಕರು ಕಂಗಾಲು

ಮಗನನ್ನು ಕಳೆದುಕೊಂಡ ಅಪ್ಪ-ಅಮ್ಮ ಕಂಗಾಲು ಆಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಓಡೋಡಿ ಬಂದಿದ್ದಾರೆ. ಅಲ್ಲಿ ಮಗನ ಸ್ಥಿತಿಯನ್ನು ಕಂಡು ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದ್ದಾದರೂ ಯಾವುದೇ ಪ್ರಯೋಜನ ಆಗಲಿಲ್ಲ. ಮಗನನ್ನು ಕಳೆದುಕೊಂಡ ಅಪ್ಪ-ಅಮ್ಮ ದುಃಖದಲ್ಲಿ ಮುಳುಗಿದ್ದಾರೆ.

ಇನ್ನು ಅಪಘಾತದ ಹೊಡೆತಕ್ಕೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜು ಆಗಿದೆ. ರಭಸದಿಂದ ಲಾರಿ ಬಂದು ಡಿಕ್ಕಿ ಹೊಡೆಯುವ ದೃಶ್ಯ ನೋಡಿದ್ರೆ ಎದೆ ಝೆಲ್ ಎನ್ನುತ್ತದೆ. ಮನೆಯಲ್ಲಿ ಕಾರು, ಬೈಕ್ ಇಟ್ಕೊಂಡಿರುವ ಪೋಷಕರು ಎಚ್ಚರ ವಹಿಸಲೇಬೇಕಾಗಿದೆ. ಮಕ್ಕಳು ದೊಡ್ಡವರಾಗುತ್ತಿದ್ದಾರೆ, ಜವಾಬ್ದಾರಿ ಬಂದಿದೆ. ಯಾವುದೇ ಕಿತಾಪತಿ ಮಾಡಲ್ಲ ಅಂದುಕೊಂಡರೆ ತಪ್ಪಾಗಿ ಬಿಡುತ್ತದೆ. ಯಾವುದೇ ಕಾರಣಕ್ಕೂ ಬೈಕ್, ಕಾರಿನ ಕೀಯನ್ನು ಅವರಿಗೆ ಕಾಣದಂತೆ ಇಟ್ಟು ಎಲ್ಲಿಯೂ ಹೋಗಬಾರದು. ಪೋಷಕರು, ಮನೆಯವರು ಎಚ್ಚರ ವಹಿಸದಿದ್ದರೆ ಇಂಥ ಅನಾಹುತಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.

PREV
Read more Articles on
click me!

Recommended Stories

ಕಾಡು ಮರೆತು ಊರ ಮನೆ ಗೇಟ್ ಕಾಯ್ತಿದೆ ನರಭಕ್ಷಕ ಚಿರತೆ! ರಾಮನಗರದಲ್ಲಿ ಬೆಚ್ಚಿಬಿದ್ದ ಗ್ರಾಮಸ್ಥರು!
Putturu Buffaloes: ಮೈಸೂರು ದಸರಾ ಕಂಬಳಕ್ಕೆ ಭರ್ಜರಿ ಸಿದ್ಧತೆ; 172 ರಲ್ಲಿ ಆಯ್ಕೆಯಾಗಿದ್ದು 150 ಜೋಡಿ ಎಮ್ಮೆ