Coronavirus: ಕರ್ಫ್ಯೂ ಸಡಿಲಗೊಂಡ್ರೂ ಟಫ್‌ ರೂಲ್ಸ್‌

By Kannadaprabha News  |  First Published Jan 21, 2022, 5:45 AM IST

*   ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ನಗರದಲ್ಲಿ ನಿತ್ಯ 25,000+ ಕೇಸ್‌ ಪತ್ತೆ 
*  ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರ ಪಾಲನೆ ಕಡ್ಡಾಯ
*  ಚಿತ್ರಮಂದಿರ, ಮಾಲ್‌ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ 50:50 ನಿರ್ಬಂಧ ಮುಂದುವರಿಕೆ
 


ಬೆಂಗಳೂರು(ಜ.21):  ಕೋವಿಡ್‌(Covid19) ನಿರ್ವಹಣೆ ಸಂಬಂಧ ವಾರಾಂತ್ಯದ ಕರ್ಫ್ಯೂ(Weekend Curfew) ಮತ್ತು ರಾತ್ರಿ ಕರ್ಫ್ಯೂ(Night Curfew) ಸಡಿಲಗೊಂಡರೂ ನಗರದಲ್ಲಿ ಮಾಸ್ಕ್‌(Mask) ಕಡ್ಡಾಯ, ಸಾರ್ವಜನಿಕ ಸ್ಥಳದಲ್ಲಿ 50:50 ಅಂತಹ ಕಠಿಣ ನಿಯಮಗಳು ಮುಂದುವರೆಸಲು ಬಿಬಿಎಂಪಿ(BBMP) ಮುಂದಾಗಿದೆ.

ವಾರಾಂತ್ಯದ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂ ನಂತರ ನಿರ್ಬಂಧಗಳನ್ನು ಸಡಿಲಗೊಳಿಸಬೇಕು ಎಂದು ಉದ್ಯಮಿಗಳು, ಕಾರ್ಮಿಕರು ಸೇರಿದಂತೆ ವಿವಿಧ ವಾಣಿಜ್ಯೋದ್ಯಮಿಗಳಿಂದ ಕೂಗು ಕೇಳಿಬಂದಿದೆ. ಆದರೂ ಸಹ ಈ ವಿಚಾರದಲ್ಲಿ ಸರ್ಕಾರ ಯಾವುದೇ ರೀತಿಯ ನಿರ್ಧಾರ ಕೈಗೊಂಡರೂ ಸಹ ಮಾಸ್ಕ್‌ ಕಡ್ಡಾಯ, ಸಾಮಾಜಿಕ ಅಂತರ, ಥಿಯೇಟರ್‌, ಬಾರ್‌, ಮಾಲ್‌ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ 50:50 ನಿರ್ಬಂಧಗಳನ್ನು ಮುಂದುವರೆಸಲು ಪಾಲಿಕೆ ಸಿದ್ಧತೆ ನಡೆಸಿದೆ.

Latest Videos

Corona Compensation: ಸರ್ಕಾರದ ಕೋವಿಡ್‌ ಪರಿಹಾರ ಚೆಕ್‌ ಬೌನ್ಸ್‌..!

ಪ್ರಸ್ತುತ ನಗರದಲ್ಲಿ ನಿತ್ಯ 25 ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಮಹದೇವಪುರ, ಬೊಮ್ಮನಹಳ್ಳಿ, ಪೂರ್ವ, ಪಶ್ಚಿಮ, ದಕ್ಷಿಣ, ಯಲಹಂಕ ವಲಯಗಳಲ್ಲಿ ಸೋಂಕಿತ ಪ್ರಕರಣಗಳು ಮಿತಿಮೀರಿವೆ. ಈ ನಡುವೆ ನಿರ್ಬಂಧಗಳನ್ನು ಸಡಿಲಗೊಳಿಸುವುದರಿಂದ ಮತ್ತಷ್ಟುಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ತಜ್ಞರ ಸೂಚನೆ ಮೇರೆಗೆ ಕರ್ಫ್ಯೂ ಸಡಿಲಿಕೆ ಮಾಡಿದರೂ ಇತರೆ ಕೋವಿಡ್‌ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಬಿಬಿಎಂಪಿ ಕ್ರಮಕೈಗೊಂಡಿದೆ. ಈಗಾಗಲೇ ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸುವ ಸಂಖ್ಯೆಯನ್ನು ಹೆಚ್ಚು ಮಾಡುವಂತೆ ಮಾರ್ಷಲ್‌ಗಳಿಗೆ ಸೂಚನೆಯನ್ನೂ ಕೊಡಲಾಗಿದೆ.

ಇದರೊಂದಿಗೆ 50:50 ನಿಯಮ ಉಲ್ಲಂಘನೆ, ಸಾಮಾಜಿಕ ಅಂತರ(Social Distance) ಪಾಲಿಸದಿರುವ ಬಗ್ಗೆಯೂ ಮಾರ್ಷಲ್‌ಗಳು ಇನ್ನು ಮುಂದೆ ನಿಗಾ ವಹಿಸಲಿದ್ದಾರೆ. ಮಾರುಕಟ್ಟೆಗಳು(Market), ಮಾಲ್‌(Shopping Mall), ಬಸ್‌ ನಿಲ್ದಾಣ(Bus Stand), ರೈಲ್ವೆ ನಿಲ್ದಾಣಗಳಲ್ಲಿ(Railway Station) ಮಾರ್ಷಲ್‌ಗಳು ತಂಡ ತಂಡವಾಗಿ ತೆರಳಿ ನಿಯಮ ಉಲ್ಲಂಘಿಸುವವರಿಂದ ದಂಡ ವಸೂಲು ಮಾಡಲಿದ್ದಾರೆ.

ಸೋಂಕಿತರು ಮನೆಗಳನ್ನು ಬಿಟ್ಟು ತಿರುಗಾಡದಂತೆ ಆರೋಗ್ಯ ಸಿಬ್ಬಂದಿಯು ಕಟ್ಟುನಿಟ್ಟಾಗಿ ಸೋಂಕಿತರ ಮನೆಗಳ ಮೇಲೆ ನಿಗಾ ವಹಿಸಲಿದ್ದಾರೆ. ಹಾಗೆಯೇ ಸೋಂಕಿತರನ್ನು ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿಯಂತ್ರಣ ಕೊಠಡಿಗಳ ಮೂಲಕ ಕರೆ ಮಾಡಿ ಆರೋಗ್ಯ ಪರಿಸ್ಥಿತಿ ವಿಚಾರಣೆಯೊಂದಿಗೆ ಸೋಂಕಿತರು ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಅರಿವು ಮೂಡಿಸುವ ಕೆಲಸವನ್ನು ಇನ್ನಷ್ಟು ಹೆಚ್ಚಿಸಲು ಪಾಲಿಕೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

3ಕ್ಕಿಂತ ಹೆಚ್ಚು ಕೇಸಿದ್ರೆ ಕ್ಲಸ್ಟರ್‌

ಯಾವುದೇ ಒಂದು ಸ್ಥಳದಲ್ಲಿ 3ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗುವ ಪ್ರದೇಶವನ್ನು ಕ್ಲಸ್ಟರ್‌ ವಲಯವೆಂದು ಪರಿಗಣಿಸಲು ಪಾಲಿಕೆ ಈಗಾಗಲೇ ಸೂಚನೆಯನ್ನು ನೀಡಿದೆ. ನಗರ ಪ್ರದೇಶಗಳಲ್ಲಿ 50 ಮೀಟರ್‌ ವ್ಯಾಪ್ತಿಯಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮನೆಗಳಲ್ಲಿ 5ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ಕಾಣಿಸಿಕೊಂಡರೆ ಅದನ್ನು ಕ್ಲಸ್ಟರ್‌ ವಲಯ ಎಂದು ಪರಿಗಣಿಸಲಾಗುವುದು. ಒಂದು ವೇಳೆ ವಸತಿ ಸಮುಚ್ಚಯಗಳಲ್ಲಿ ಸೋಂಕು ಕಾಣಿಸಿಕೊಂಡರೆ ಸ್ಥಳೀಯ ಆರೋಗ್ಯಾಧಿಕಾರಿಗಳ ನಿರ್ಧಾರ ಅಂತಿಮವಾಗಲಿದೆ. 100 ಮೀಟರ್‌ಗಳಲ್ಲಿರುವ ಹೆಚ್ಚು ಮನೆಗಳಲ್ಲಿ 15ಕ್ಕೂ ಹೆಚ್ಚು ಸೋಂಕು ಕಾಣಿಸಿಕೊಂಡರೆ ದೊಡ್ಡ ಕ್ಲಸ್ಟರ್‌ ವಲಯ ಎಂದು ಪರಿಗಣಿಸಬೇಕು. ಅಪಾರ್ಟ್‌ಮೆಂಟ್‌ಗಳಲ್ಲಿ ಆಯಾ ಮಹಡಿಗಳನ್ನು ಕಂಟೈನ್ಮೆಂಟ್‌ ವಲಯ(Containment Zone) ಎಂದು ಪರಿಗಣಿಸುವಂತೆ ಸೂಚನೆ ನೀಡಲಾಗಿದೆ.

Covid-19 Crisis: 3.17 ಲಕ್ಷ ಕೋವಿಡ್‌ ಪ್ರಕರಣಗಳು: 8 ತಿಂಗಳ ಗರಿಷ್ಠ

ರಾಜ್ಯದಲ್ಲಿ ನಿನ್ನೆ 47774 ಮಂದಿಗೆ ಕೋವಿಡ್‌: 18% ಪಾಸಿಟಿವಿಟಿ

ರಾಜ್ಯದಲ್ಲಿ ಕೊರೋನಾ (Coronavirus) ಹೆಚ್ಚಾಗುತ್ತಿದ್ದು, ಗುರುವಾರ 47,774 ಜನರು ಸೋಂಕಿತರಾಗಿದ್ದಾರೆ, ಬೆಂಗಳೂರಿನಲ್ಲಿ ಮೊದಲ ಬಾರಿ 30 ಸಾವಿರಕ್ಕಿಂತ ಹೆಚ್ಚು ಮಂದಿಗೆ ಸೋಂಕು ತಗುಲುವ ಮೂಲಕ ಮೊದಲ ಎರಡು ಅಲೆಯ ದಾಖಲೆಯನ್ನು ರಾಜಧಾನಿ ಮುರಿದಿದೆ. ರಾಜ್ಯದಲ್ಲಿ ಸಕ್ರಿಯ ಸೋಂಕು ಪ್ರಕರಣಗಳು ಮೂರು ಲಕ್ಷ ಗಡಿಗೆ ಸಮೀಪಿಸಿವೆ. 29 ಸೋಂಕಿತರು ಸಾವಿಗೀಡಾಗಿದ್ದಾರೆ. 

22,143 ಮಂದಿ ಗುಣಮುಖರಾಗಿದ್ದು, ಸದ್ಯ 2,93,231 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಬುಧವಾರ 2.1 ಲಕ್ಷ ಸೋಂಕು ಪರೀಕ್ಷೆಗಳು ನಡೆದಿದ್ದವು. ಆದರೆ, ಗುರುವಾರ ಹಿಂದೆಂದಿಗಿಂತಲೂ ಅತಿ ಹೆಚ್ಚು 2.58 ಲಕ್ಷದಷ್ಟುನಡೆದಿವೆ. ಹೀಗಾಗಿಯೇ ಸೋಂಕಿತರ ಸಂಖ್ಯೆ ಏಳು ಸಾವಿರಷ್ಟುಏರಿಕೆಯಾಗಿದೆ (ಬುಧವಾರ 40,499 ಪ್ರಕರಣ).

ರಾಜಧಾನಿ ಬೆಂಗಳೂರಿನಲ್ಲಿ (Bengaluru) 30,540 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಹೊಸ ಪ್ರಕರಣಗಳು ಆರು ಸಾವಿರ ಹೆಚ್ಚಳವಾಗಿವೆ (ಬುಧವಾರ 24,135). ಈ ಹಿಂದೆ ಬೆಂಗಳೂರಿನಲ್ಲಿ ಏಪ್ರಿಲ್‌ 30 ರಂದು 26 ಸಾವಿರ ಮಂದಿಗೆ ಸೋಂಕು ತಗುಲಿತ್ತು. ಅದನ್ನು ಹೊರತುಪಡಿಸಿದರೆ, ಅತಿ ಹೆಚ್ಚು ಮಂದಿಗೆ ಗುರುವಾರ ಸೋಂಕು ತಗುಲಿದ್ದು, ರಾಜಧಾನಿಯಲ್ಲಿ ಆತಂಕ ಹೆಚ್ಚಿದೆ.
 

click me!