ಖಾಸಗಿ ಕಂಪನಿಗಳ ಪ್ರಲೋಭನೆಗೆ ರಾಜಕಾರಣಿಗಳು ಒಳಗಾಗಬಾರದು| ನಮ್ಮ ರಕ್ಷಕರಾದ ನೀವೇ ಕಮಿಷನ್ ಆಸೆಗೆ ಪ್ರಕೃತಿ ಸಂಪತ್ತು ಮಾರಾಟ ಮಾಡಿದರೆ ತಂದೆ ತಾಯಿಗಳನ್ನು ಮಾರಿಕೊಂಡಂತೆ| ಚುನಾವಣೆಗೆ ಹಣ ಹೊಂದಿಸಲು ಅಮೂಲ್ಯ ಸಂಪತ್ತು ಬಲಿಕೊಡಬೇಡಿ|
ಗದಗ(ಮೇ.24): ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಸರ್ಕಾರ ತಯಾರಿ ನಡೆಸಿದೆ ಎನ್ನುವ ಮಾಹಿತಿ ಸಿಗುತ್ತಿದ್ದು, ಇದರ ವಿರುದ್ಧ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಶ್ರೀಗಳು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಕಂಪನಿಗಳ ಪ್ರಲೋಭನೆಗೆ ರಾಜಕಾರಣಿಗಳು ಒಳಗಾಗಬಾರದು. ನಮ್ಮ ರಕ್ಷಕರಾದ ನೀವೇ ಕಮಿಷನ್ ಆಸೆಗೆ ಪ್ರಕೃತಿ ಸಂಪತ್ತು ಮಾರಾಟ ಮಾಡಿದರೆ ತಂದೆ ತಾಯಿಗಳನ್ನು ಮಾರಿಕೊಂಡಂತೆ. ಚುನಾವಣೆಗೆ ಹಣ ಹೊಂದಿಸಲು ಅಮೂಲ್ಯ ಸಂಪತ್ತು ಬಲಿಕೊಡಬೇಡಿ ಎಂದಿದ್ದಾರೆ.
ಗದಗ: ಗಣಿ ಸಚಿವರ ತವರಲ್ಲೇ ನಡೀತಿದೆ ಅಕ್ರಮ ಮಣ್ಣು ಗಣಿಗಾರಿಕೆ ದಂಧೆ!
ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಮಾತನಾಡಿ, ಶೀಘ್ರವೇ ಸಮಗ್ರ ದಾಖಲೆಗಳೊಂದಿಗೆ ಸರ್ಕಾರ ಏನೆಲ್ಲ ಮಾಡುತ್ತಿದೆ ಎನ್ನುವ ಬಗ್ಗೆ ತಿಳಿಸುತ್ತೇನೆ. ಮುಂದಿನ ಹೋರಾಟದ ರೂಪರೇಷೆಗಳನ್ನು ಸಿದ್ಧ ಮಾಡುತ್ತೇವೆ ಎಂದರು.