ಇಂಡಿ (ಆ.22) : ವೃಕ್ಷವನ್ನು ಪ್ರೀತಿಸಿದರೇ ದೇಶವನ್ನು ಪ್ರೀತಿಸಿದಂತೆ ಭೂ ಮಂಡಲವನ್ನೇ ಸ್ವರ್ಗ ಮಾಡಬೇಕು ವಿನಃ ಸ್ವರ್ಗಕ್ಕೆ ನಾವೇ ಹೋಗುವುದಲ್ಲ. ವೃಕ್ಷವನ್ನು ಪ್ರೀತಿಸುವುದು, ರಕ್ಷಿಸುವುದು ಅದುವೇ ಧರ್ಮ ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ನುಡಿದರು. ತಾಲೂಕಿನ ಸಾವಳಸಂಗ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಇಲಾಖೆ, ಗ್ರಾಪಂ ಕೊಳೂರಗಿ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡ ಸಿದ್ದೇಶ್ವರ ಮಹಾಸ್ವಾಮೀಜಿ(Siddeshwar Mahaswamiji)ಯವರ ವನ ವೀಕ್ಷಣಾ ಕಾರ್ಯಕ್ರಮ ಸಸ್ಯಗಳೊಂದಿಗೆ ಸಂತಸಂಗಮ ಕಾರ್ಯಕ್ರಮದಲ್ಲಿ ವನ ವೀಕ್ಷಣೆ ಮಾಡಿ ಆಶೀರ್ವಚನ ನೀಡಿದ ಅವರು, ನಿಸರ್ಗವನ್ನು ಪ್ರೀತಿಸಿದರೆ ಜೀವನ ಪಾವನವಾಗುತ್ತದೆ,ದೇವರ ದರ್ಶನವಾಗುತ್ತದೆ ಎಂದು ಹೇಳಿದರು.ಹಸಿರು ನಾಡಿನಲ್ಲಿ ಹಸಿರುವು ಮಾಡುವುದು ಮುಖ್ಯವಲ್ಲ.ಬರದ ನಾಡಿನಲ್ಲಿ ಹಸಿರು ಮಾಡುವುದು ಮುಖ್ಯ.ಸಾವಳಸಂಗ ಅರಣ್ಯ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು,ಪೊಷಿಸುತ್ತಿರುವ ಅರಣ್ಯ ಇಲಾಖೆಯ ಕಾರ್ಯ ಶ್ಲಾಘನೀಯ ಎಂದರು.
ಮಸೀದಿಗೆ ಭೇಟಿ ನೀಡಿ ಭಾತೃತ್ವದ ಮೆರೆದ ಗವಿ ಸಿದ್ದೇಶ್ವರ ಸ್ವಾಮೀಜಿ
ಶಾಸಕ ಯಶವಂತರಾಯಗೌಡ(MLA Yashwanth Ray Gowda) ಪಾಟೀಲ ಮಾತನಾಡಿ, ವಿಜಯಪುರ(Vijayapura)ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಮಹಾಸ್ವಾಮೀಜಿ ಅವರು ಪ್ರಪಂಚ ಕಂಡ ಶ್ರೇಷ್ಠ ಸಂತರಾಗಿದ್ದಾರೆ. ಅವರ ಆಸೆಯದಂತೆ, ಸಾವಳಸಂಗ ಗ್ರಾಮದಲ್ಲಿನ ಅರಣ್ಯ ಪ್ರದೇಶವನ್ನು ಪ್ರವಾಸಿತಾಣವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶ್ರೀಗಳ ಸ್ಫೂರ್ತಿ ನಮ್ಮ ಬದುಕಿಗೆ ಪ್ರೇರಣೆಯಾಗಲಿದೆ ಎಂದರು. ಸಾವಳಸಂಗ ಗ್ರಾಮದ ಅರಣ್ಯಪ್ರದೇಶಕ್ಕೆ ಬಂದು ತಮ್ಮ ಪಾದಸ್ಪರ್ಶ ಮಾಡಿ, ಪಾವನ ಮಾಡಿದ ಈ ಅರಣ್ಯ ಪ್ರದೇಶಕ್ಕೆ ಶ್ರೀ ಸಿದ್ದೇಶ್ವರ ಶ್ರೀಗಳ ಹೆಸರಿನಲ್ಲಿ ಶ್ರೀ ಸಿದ್ದೇಶ್ವರ ಶ್ರೀ ವೃಕ್ಷಧಾಮ ಹೆಸರಿಡಲಾಗುತ್ತದೆ. ಶ್ರೀಗಳ ಪಾದಸ್ಪರ್ಶದಿಂದ ಈ ಅರಣ್ಯಪ್ರದೇಶ ಕಂಗೊಳಿಸುತ್ತಿರುವುದರಿಂದ ಸಾವಳಸಂಗ ಗ್ರಾಮ ಸ್ವರ್ಗವಾಗಿ ಪರಿಣಮಿಸಿದೆ ಎಂದರು.
ಆಧುನಿಕ ಭರದಲ್ಲಿ ಪರಿಸರ ನಾಶವಾಗುತ್ತಿದ್ದು, ಇದೆ ರೀತಿ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಗೆ ಆರೋಗ್ಯಯುತ ಪರಿಸರ ನೀಡುವುದು ಕಷ್ಟವಾಗುತ್ತದೆ. ಹೀಗಾಗಿ ಸರ್ಕಾರಗಳು ಅರಣ್ಯ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸಾರ್ವಜನಿಕರು ಸಹ ತಮ್ಮ ಮನೆಯ ಸುತ್ತಮುತ್ತ ಒಂದೊಂದು ಗಿಡ, ಮರಗಳನ್ನು ಬೆಳೆಸಬೇಕು. ಗಿಡ, ಮರಗಳ ಕೊರತೆಯಿಂದ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಅದಕ್ಕಾಗಿ ಸಾರ್ವಜನಿಕರು ನೀರು ಇಂಗಿಸುವ, ಸಸಿ ನೆಡುವ ಕೆಲಸ ಮಾಡಬೇಕು ಎಂದರು.
ಈಶಪ್ರಸಾದ ಸ್ವಾಮೀಜಿ, ಕೊಳೂರಗಿ ಗ್ರಾಪಂ ಅಧ್ಯಕ್ಷ ಧರೆಪ್ಪ ಮಕಣಾಪುರ, ಸಂಬಾಜಿರಾವ ಮಿಸಾಳೆ, ಡಿಎಫ್‌ಒ ಬಿ.ಪಿ.ಚವ್ಹಾಣ,ಚಡಚಣ ತಾಪಂ ಇಒ ಸಂಜಯ ಖಡಗೇಕರ, ಆರ್‌ಎಫ್‌ಒ ಕಾಂತರಾಜು ಚವ್ಹಾಣ ,ಲಕ್ಷ್ಮಣ ನಾದ, ರಾಜೇಂದ್ರ ಹುನ್ನೂರ, ನಾಗೇಶ ಬಿರಾದಾರ, ಡಿ.ಎ.ಮುಜಗೊಂಡ, ಪ್ರಕಾಶ ಹಿಟ್ನಳ್ಳಿ ಇತರರು ಕಾರ್ಯಕ್ರಮದಲ್ಲಿ ಇದ್ದರು. ಅರಣ್ಯಾಧಿಕಾರಿ ಡಿ.ಎ.ಮುಜಗೊಂಡ ನಿರೂಪಿಸಿ, ವಂದಿಸಿದರು.
ಇಂತಹ ಪ್ರಧಾನಿ ಸಿಕ್ಕಿದ್ದು ಈ ದೇಶಕ್ಕೆ ಸುದೈವ; ಮೋದಿಗೆ ಸಿದ್ದೇಶ್ವರ ಶ್ರೀಗಳ ಹಾರೈಕೆ
ಡಿ.ಎ.ಮುಜಗೊಂಡಗೆ ಬೆನ್ನುತಟ್ಟಿದ ಶ್ರೀಗಳು: ಶ್ರೀಗಳ ವನ ವೀಕ್ಷಣೆ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ ಅರಣ್ಯ ಇಲಾಖೆ ಅಧಿಕಾರಿ ಡಿ.ಎ.ಮುಜಗೊಂಡ ಅವರ ನಿರೂಪಣೆ ಶ್ರೀಗಳಿಗೆ ಹಿಡಿಸಿದ್ದರಿಂದ ಶ್ರೀಗಳು ನಿರ್ಗಮನದ ವೇಳೆ ಬಹಳ ಸುಂದರ ಹಾಗೂ ಅರ್ಥಪೂರ್ಣವಾಗಿ ನಿರೂಪಣೆ ಮಾಡುತ್ತ ಮಾತನಾಡಿದ್ದಿರಿ ಎಂದು ಬೆನ್ನುತಟ್ಟಿಆಶೀರ್ವದಿಸಿದರು.
ಅರಣ್ಯ, ಗಿಡಮರಗಳಿಂದ ಸ್ವಚ್ಛವಾದ ಗಾಳಿ ಪಡೆಯುತ್ತಿದ್ದೇವೆ. ಜಗತ್ತಿನಲ್ಲಿ ಬೆಲೆಬಾಳುವ ವಸ್ತು ಗಾಳಿಯಾಗಿದೆ. ವಿದೇಶದಲ್ಲಿ ಹಣ, ಸಂಪತ್ತು ಎಲ್ಲವೂ ಇದೆ. ಆದರೆ, ಸ್ವಚ್ಛ ನಿಸರ್ಗ ಕಾಣುವುದಿಲ್ಲ. ವೃಷಗಳ ಮಧ್ಯ ದೇಶ ಕಾಣುವುದು ಭಾರತ ದೇಶ. ವಸ್ತುಗಳಿಗಿಂತ ಅನ್ನ, ನೀರು, ಗಾಳು ಮುಖ್ಯ. ಈ ಮೂರು ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ. ದೇವರು ಎಲ್ಲಿಯೂ ಇಲ್ಲ. ನಮ್ಮಲ್ಲಿಯೇ ಇದ್ದಾನೆ. ಗಾಳಿ, ಬೆಳಕು, ನೀರಿನಲ್ಲಿ ಇದ್ದಾನೆ.ದೇವರಿಗೆ ಬೆಳ್ಳಿ, ಬಂಗಾರಕ್ಕಿಂತ ಒಂದು ಹೂ ಇಟ್ಟರೆ ಅದು ದೇವರಿಗೆ ಅರ್ಪಿತವಾಗುತ್ತದೆ.
ಸಿದ್ಧೇಶ್ವರ ಶ್ರೀಗಳು ಜ್ಞಾನಯೋಗಾಶ್ರಮ ವಿಜಯಪುರ.
ರೈತರಿಗೆ ನೀರು ಕೊಡಿ, ನಿಮ್ಮ ಬದುಕು ಬಂಗಾರ ಮಾಡುತ್ತಾರೆ ಎಂಬ ಮಾತು ಪೂಜ್ಯ ಶ್ರೀಗಳು ಚಿಂತನೆಯಾಗಿದೆ. ಸರ್ಕಾರಗಳು ಕೂಡಾ ಆದ್ಯತೆಯ ಮೆರೆಗೆ ನೀರಾವರಿ ಯೋಜನೆಗಳು ಜಾರಿಗೆ ತಂದಿವೆ. ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಆರಂಭಕ್ಕೆ ಕಾಲ ಕೂಡಿ ಬಂದಿದ್ದು, ಅಂತಿಮ ಹಂತದಲ್ಲಿದೆ. ಯೋಜನೆ ಜಾರಿ ಮಾಡಿದಕ್ಕೆ ಸರ್ಕಾರಕ್ಕೆ ಈ ಭಾಗದ ರೈತರ ಪರವಾಗಿ ಅಭಿನಂದಿಸುತ್ತೇನೆ.
ಯಶವಂತರಾಯಗೌಡ ಪಾಟೀಲ ಶಾಸಕರು.