4 ಕಾಂಗ್ರೆಸ್‌ ಶಾಸಕರಿಗೆ ರಾಜ್ಯದಲ್ಲಿ ಬಿಜೆಪಿಗರಿಂದ ಬಿಗಿ ಭದ್ರತೆ

Kannadaprabha News   | Asianet News
Published : Mar 07, 2020, 07:55 AM IST
4 ಕಾಂಗ್ರೆಸ್‌ ಶಾಸಕರಿಗೆ ರಾಜ್ಯದಲ್ಲಿ ಬಿಜೆಪಿಗರಿಂದ ಬಿಗಿ ಭದ್ರತೆ

ಸಾರಾಂಶ

ಮಧ್ಯ ಪ್ರದೇಶ ಕಾಂಗ್ರೆಸ್ ಶಾಸಕರಿಗೆ ನಗರದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ರಾಜ್ಯ ಬಿಜೆಪಿ ಮುಖಂಡರೂ ಅವರ ಕಾವಲಿಗೆ ನಿಂತಿದ್ದಾರೆ.

ಬೆಂಗಳೂರು [ಮಾ.07] : ಮಧ್ಯಪ್ರದೇಶದ ಸರ್ಕಾರ ವಿರುದ್ಧ ಬಂಡೆದ್ದು ರಾಜ್ಯಕ್ಕೆ ಬಂದಿರುವ ನಾಲ್ವರು ಕಾಂಗ್ರೆಸ್‌ ಶಾಸಕರಿಗೆ ಬಿಗಿ ಪೊಲೀಸ್‌ ಭದ್ರತೆಯನ್ನು ಕಲ್ಪಿಸಲಾಗಿದ್ದು, ರಾಜ್ಯ ಬಿಜೆಪಿ ಮುಖಂಡರೂ ಅವರ ಕಾವಲಿಗೆ ನಿಂತಿದ್ದಾರೆ.

ಶಾಸಕರಾದ ಸುರೇಂದ್ರ ಸಿಂಗ್‌ ಶೇರ್‌, ರಘುರಾಜ್‌ ಕನ್ಸಾನಾ, ಹರದೀಪ್‌ ಸಿಂಗ್‌ ಡುಂಗಾ, ಬಿಸಾಹುಲ್‌ ಲಾಲ್‌ ಸಿಂಗ್‌ ಅವರು ನಗರದಲ್ಲಿ ತಂಗಿದ್ದಾರೆ. ಯುಬಿ ಸಿಟಿಯಲ್ಲಿ ನೆಲೆಸಿದ್ದ ಶಾಸಕರನ್ನು ರಾಜ್ಯ ಬಿಜೆಪಿ ಮುಖಂಡರು ವೈಟ್‌ಫೀಲ್ಡ್‌ ಬಳಿಯಿರುವ ಓಕ್‌ವುಡ್‌ ರೆಸಾರ್ಟ್‌ಗೆ ಸ್ಥಳಾಂತರಿಸಿದ್ದಾರೆ. 

ಮಹಾಭಾರತ ಬರೆದದ್ದು ಕೀಳುಜಾತಿಯ ವಾಲ್ಮೀಕಿ: ಯತ್ನಾಳ್ ಮತ್ತೊಂದು ಎಡವಟ್ಟು

ಈ ನಾಲ್ವರು ತವರಿಗೆ ಮರಳಲು ಸಜ್ಜಾಗಿದ್ದರು. ಆದರೆ, ರಾಜ್ಯ ಬಿಜೆಪಿ ನಾಯಕರು ಅವರನ್ನು ತಡೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!