ಇಷ್ಟಪಟ್ಟು ಮತಾಂತರವಾಗಲು ಯಾವುದೇ ನಿರ್ಬಂಧ ಇಲ್ಲ: ಸಚಿವ ಅಶ್ವಥ ನಾರಾಯಣ್‌

By Govindaraj SFirst Published Sep 19, 2022, 10:40 PM IST
Highlights

ಇಷ್ಟಪಟ್ಟು ಮತಾಂತರವಾಗಲು ಕಾಯ್ದೆಯಲ್ಲಿ ಯಾವುದೇ ನಿರ್ಬಂಧ ಇಲ್ಲ. ಆದರೆ ಕಾಂಗ್ರೆಸ್‌ ಮುಖಂಡರು ಜನರಲ್ಲಿ ತಪ್ಪು ತಿಳಿವಳಿಕೆ ಮೂಡಿಸಲು ಕಾಯ್ದೆ ಪ್ರತಿಯನ್ನು ಹರಿದು ಹಾಕುವ ಮೂಲಕ ಯತ್ನಿಸಿದ್ದಾರೆ ಎಂದು ಸಚಿವ ಅಶ್ವಥ ನಾರಾಯಣ್‌ ಹೇಳಿದರು. 

ಮಾಲೂರು (ಸೆ.19): ಇಷ್ಟಪಟ್ಟು ಮತಾಂತರವಾಗಲು ಕಾಯ್ದೆಯಲ್ಲಿ ಯಾವುದೇ ನಿರ್ಬಂಧ ಇಲ್ಲ. ಆದರೆ ಕಾಂಗ್ರೆಸ್‌ ಮುಖಂಡರು ಜನರಲ್ಲಿ ತಪ್ಪು ತಿಳಿವಳಿಕೆ ಮೂಡಿಸಲು ಕಾಯ್ದೆ ಪ್ರತಿಯನ್ನು ಹರಿದು ಹಾಕುವ ಮೂಲಕ ಯತ್ನಿಸಿದ್ದಾರೆ ಎಂದು ಸಚಿವ ಅಶ್ವಥ ನಾರಾಯಣ್‌ ಹೇಳಿದರು. ಅವರು ಪಟ್ಟಣದ ಶ್ರೀ ರಂಗ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪ್ರಕೋಷ್ಠ ಸಮಿತಿ ಸದಸ್ಯ ಹೂಡಿ ವಿಜಯಕುಮಾರ್‌ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ 72 ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್‌ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಮತಾಂತರ ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್‌ಗೆ ಈಗಾಗಲೇ ರಾಜ್ಯದ ಜನತೆ ಪಾಠ ಕಲಿಸಿದ್ದಾರೆ. ಇದೇ ಮನೋಭಾವ ಮುಂದುವರೆಸಿದ್ದಾರೆ ರಾಜ್ಯ ಕಾಂಗ್ರೆಸ್‌ ಮುಕ್ತವಾಗಲಿದೆ ಎಂದರು.

ಕಾಯ್ದೆಯಲ್ಲಿ ತಪ್ಪಿದ್ದರೆ ತಿಳಿಸಿ: ಅಮಾಯಕರು ತಿಳಿವಳಿಕೆ ಇಲ್ಲದ ಜನರನ್ನ ಮತಾಂತರ ಮಾಡೋದು ಸರಿಯಲ್ಲ. ಚುನಾಯಿತ ಪ್ರತಿನಿಧಿಗಳು ಕಾಯ್ದೆ ಪ್ರತಿಯನ್ನು ಹರಿದುಹಾಕುವ ಬದಲು ಅದರಲ್ಲಿ ಏನು ತಪ್ಪಿದೆ ಅನ್ನೂದನ್ನ ಕುರಿತು ಮಾತನಾಡುಬೇಕಾಗಿತ್ತು ಎಂದು ಹರಿಪ್ರಸಾದ್‌ ಅವರ ವರ್ತನೆ ಬಗೆ ಸಚಿವರು ಅಕ್ಷೇಪ ವ್ಯಕ್ತಪಡಿಸಿದರು. ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ ಇಡಿ ದಾಳಿ ವೈಯಕ್ತಿಕ ದ್ವೇಷ ಅಥವಾ ಷಡ್ಯಂತ್ರ ಎನ್ನುವ ಹಾಗಿದ್ದರೆ ಸಿದ್ದರಾಮಯ್ಯ ಅವರನ್ನು ಇಷ್ಟೋತ್ತಿಗೆ ಜೈಲಿಗೆ ಹಾಕಬೇಕಾಗಿತ್ತು. ಪ್ರಕರಣ ಏನಾಗುತ್ತೆ ಅನ್ನೊದು ಗೋತ್ತಿಲ್ಲ. ಕಾನೂನಿನಲ್ಲಿ ಏನು ಅವಕಾಶ ಇದ್ದರೆ ಅದಾಗುತ್ತದೆ. ತಪ್ಪು ಮಾಡಿರೋರು ಸಿಕ್ಕಿ ಹಾಕಿಕೊಳ್ಳುತ್ತಾರೆ. ತಪ್ಪು ಮಾದಿದ್ದರೆ ಎಲ್ಲಾ ಸಂಕಷ್ಟದಿಂದ ಹೂರಬರುತ್ತಾರೆ ಎಂದರು.

ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು: ಎಚ್‌.ಡಿ.ಕುಮಾರಸ್ವಾಮಿ

ಡಬಲ್‌ ಎಂಜಿನ್‌ ಸರ್ಕಾರವೇ ಬರತ್ತೆ: ಕಾಂಗ್ರೆಸ್‌ ಬಸ್‌ ಯಾತ್ರೆ, ಭಾರತ್‌ ಜೋಡೋ ಯಾತ್ರೆ ಮಾಡಿದರೂ ಅವರ ಕನಸು ನನಸಾಗುವುದಿಲ್ಲ. ಮೋದಿ ಹಾಗೂ ಬೊಮ್ಮಯಿ ಅವರ ಡಬ್ಬಲ್‌ ಇಂಜಿನ್‌ ಸರ್ಕಾರ ಮತ್ತೇ ಅಧಿಕಾರಕ್ಕೆ ಬರಲಿದೆ. ಸ್ಥಳೀಯವಾಗಿ ಪಕ್ಷ ಸಂಘಟನೆಯಲ್ಲಿ ಮುಂಚೊಣಿಯಲ್ಲಿರುವ ಹೂಡಿ ವಿಜಯಕುಮಾರ್‌ ಜತೆ ನಾವೆಲ್ಲ ಜತೆ ಇದ್ದು ,ಕಾರ‍್ಯಕರ್ತರು ಕ್ಷೇತ್ರದಲ್ಲಿ ಮತ್ತೇ ಕಮಲ ಅರಳಲು ಶ್ರಮಿಸಬೇಕು ಎಂದರು.

ಸಂಸದ ಮುನಿಸ್ವಾಮಿ ,ಡಾ.ಅಂಬೇಡ್ಕರ್‌ ಮಂಡಳಿ ಅಧ್ಯಕ್ಷ ಶಾಸಕ ನಾಗೇಶ್‌,ಸಚಿವ ಎಂ.ಟಿ.ಬಿ.ನಾಗರಾಜ್‌ ,ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್‌ ರೆಡ್ಡಿ ,ತಾಲೂಕು ಅಧ್ಯಕ್ಷ ಪುರನಾರಾಯಣಸ್ವಾಮಿ ಹಾಗೂ ಕಾರ‍್ಯಕ್ರಮ ಉಸ್ತುವಾರಿ ಹೂಡಿ ವಿಜಯಕುಮಾರ್‌ ಮಾತನಾಡಿದರು. ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ರವರೆಗೆ ನಡೆದ ರಕ್ತದಾನ ಶಿಬಿರದಲ್ಲಿ 1761 ಯೂನಿಟ್‌ ರಕ್ತವನ್ನು ಸಂಗ್ರಹಿಸಲಾಯಿತು. ಬಿಜೆಪಿ ಪಲಾನುಭವಿಗಳ ಪ್ರಕೋಷ್ಠ ಆರ್‌.ಪ್ರಭಾಕರ್‌,ಪ್ರದಾನ ಕಾರ‍್ಯದರ್ಶಿ ವೆಂಕಟೇಶ್‌ ,ಪುರಸಭೆ ಸದಸ್ಯ ರಾಮಮೂರ್ತಿ, ವೇಮನ,ಭಾನುತೇಜಾ ಸೇರಿದಂತೆ ಇತರ ಮುಖಂಡರುಗಳು ಭಾಗವಹಿಸಿದ್ದರು.

ಹೊಸ ಶಿಕ್ಷಣ ನೀತಿಯಿಂದ ಗುಣಮಟ್ಟದ ಶಿಕ್ಷಣ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಹೊಸ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳ ಕಲಿಕೆಗೆ ಮುಕ್ತ ಅವಕಾಶದ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌ ಅಶ್ವಥ್‌ ನಾರಾಯಣ ಹೇಳಿದರು. ತಾಲೂಕಿನ ಹೊಸಯಳನಾಡು ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಹೊಸಯಳನಾಡು ಕರ್ನಾಟಕ ಪಬ್ಲಿಕ್‌ ಶಾಲೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿಯೂ ಗುಣಮಟ್ಟದ ಕಲಿಕೆ ಇಲ್ಲ. 

Kolar: ಜಿಲ್ಲೆಯ ಆರೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಬೇಕು: ಸಚಿವ ಮುನಿರತ್ನ

ಆದ್ದರಿಂದ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ ತರುತ್ತಿದೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿಯು ಕೇವಲ ಶೈಕ್ಷಣಿಕವಾಗಿರದೆ ಸಾಂಸ್ಕೃತಿಕ, ದೈಹಿಕ, ಸಾಮಾಜಿಕ ಚಟುವಟಿಕೆ ಸೇರಿದಂತೆ ಎಲ್ಲ ರೀತಿಯ ಚಟುವಟಿಕೆಯಲ್ಲಿಯೂ ಭಾಗವಹಿಸಲು ಅವಕಾಶವಿದೆ. ಕಲಿಕೆ ಕೇವಲ ತರಗತಿಯಲ್ಲಿ ಮಾತ್ರವಲ್ಲ. ಸಮಾಜದಲ್ಲಿ ಆಗುವಂತಹದ್ದು. ಪ್ರತಿಯೊಂದು ವಿಚಾರದಲ್ಲಿಯೂ ಕಲಿಯುವುದು ಅವಕಾಶವಿದೆ. ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ, ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವಂತೆ ಗ್ರಾಮ ಪಂಚಾಯಿತಿ ಪಬ್ಲಿಕ್‌ ಶಾಲೆ ಹೆಸರಿನಲ್ಲಿ ಶಾಲೆ ಸ್ಥಾಪನೆ ಮಾಡಲು ಯೋಜನೆ ಕೈಗೆತ್ತಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

click me!