ರೈತರ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಪಡಿಸದ್ದಿದ್ದರೆ, ಸರ್ಕಾರವೇ ವ್ಯವಸಾಯ ಮಾಡಿ ಅನ್ನದಾತ ಕುಟುಂಗಳನ್ನು ಸುಧರಿಸುವ ಕಾಲ ಬರಲಿದೆ ಎಂದು ಶಾಸಕ ವೆಂಕಟರಮಣಪ್ಪ ಹೇಳಿದರು.
ಪಾವಗಡ : ರೈತರ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಪಡಿಸದ್ದಿದ್ದರೆ, ಸರ್ಕಾರವೇ ವ್ಯವಸಾಯ ಮಾಡಿ ಅನ್ನದಾತ ಕುಟುಂಗಳನ್ನು ಸುಧರಿಸುವ ಕಾಲ ಬರಲಿದೆ ಎಂದು ಶಾಸಕ ವೆಂಕಟರಮಣಪ್ಪ ಹೇಳಿದರು.
ತಾಲೂಕು ಕೃಷಿ ಇಲಾಖೆ ವತಿಯಿಂದ ಕೃಷಿ ಇಲಾಖೆ ಅವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆ ಸಮಾರಂಭದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.
(Farmers ) ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದ ಕಾರಣ ವ್ಯವಸಾಯದ ಬಗ್ಗೆ ರೈತರಿಗೆ ಆಸಕ್ತಿ ಕಡಿಮೆ ಆಗುತ್ತಿದೆ.ಯಂತ್ರೋಪಕರಣ ಹಾಗೂ ಇತರೆ ಕಂಪನಿಗಳಿಂದ ತಯಾರಿಸಿದ ವಸ್ತುಗಳಿಗೆ ಬೆಲೆ ನಿಗದಿಪಡಿಸುವ ಅಧಿಕಾರ ಮಾಲೀಕರಿಗಿರುತ್ತದೆ. ಆದರೆ ರೈತನ ಬೆಳೆಗೆ ಆತನೆ (Price) ನಿಗದಿಪಡಿಸಲು ಸಾಧ್ಯವಾಗುತ್ತಿಲ್ಲ, ಮಾರುಕಟ್ಟೆಗೆ ಹೋದರೆ ದಳ್ಳಾಳ್ಳಿ ನಿಗದಿಪಡಿಸಿದ ಬೆಲೆಗೆ ಬೆಳೆ ಮಾರಾಟ ಮಾಡುವ ಅನಿರ್ವಾಯತೆ ಇದೆ. ಒಂದು ಎಕರೆ ಬೆಳೆಗೆ 1 ಲಕ್ಷ ವಿನಿಯೋಗಿಸಿದರೆ, ಉತ್ಪನ್ನ ಬೆಳೆಯಿಂದ ಕೇವಲ 20ರಿಂದ 50 ಸಾವಿರ ಬೆಳೆಯ ಹಣ ಸಿಗಲಿದೆ. ಇದರಿಂದ ರೈತರ ಬದುಕು ಹಸನಾಗಲು ಹೇಗೆ ಸಾಧ್ಯ ಎಂದರು.
ಕೇಂದ್ರ ಸರ್ಕಾರ ಕಾನೂನ್ಮಕವಾಗಿ ನರೇಗಾ ಅನುಷ್ಟಾನ ಮಾಡಿದ್ದು, ಯಂತ್ರಗಳಿಂದ ಕೆಲಸ ಮಾಡಿದರೆ ಒಪ್ಪುವುದಿಲ್ಲ. ಬೆವರು ಸುರಿಸಿ ಕೆಲಸ ಮಾಡಿದ ಕೂಲಿಕಾರರ ಖಾತೆಗೆ ಹಣ ಜಮಾವಾಗಲಿದೆ. ಸೋಲಾರ್‌ಗೆ ಜಮೀನು ನೀಡಿದ ತಾಲೂಕಿನ ರೈತರಿಗೆ ಅನ್ಯಾಯವಾಗುವುದಿಲ್ಲ. ಅವರ ಅವಧಿ ಪೂರ್ಣಗೊಂಡ ಬಳಿಕ ಗುತ್ತಿಗೆ ಕರಾರು ಪ್ರಕಾರ ನಿಮ್ಮ ಜಮೀನು ನಿಮಗೆ ಒಪ್ಪಿಸುತ್ತಾರೆ. ಸತತ ಮಳೆಯಿಂದ ಕೆರೆ ಕಟ್ಟೆತುಂಬಿವೆ, ಬಂಡವಾಳ ಹಾಕಿ ವ್ಯವಸಾಯ ಮಾಡಲು ರೈತರು ಹಿಂಜರಿಯುತ್ತಿದ್ದಾರೆ. ಸರ್ಕಾರವೇ ವ್ಯವಸಾಯ ಮಾಡಿ ಅನ್ನ ನೀಡುವ ಕಾಲ ಬರಲಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗುವ ಕಾಲ ಬರಲಿರುವ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ತಾ.ಶಾಖೆಯ ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಕೃಷಿ ಭೂಮಿ ಚಿನ್ನವಿದ್ದಂತೆ ಯಾರು ಮಾರಾಟ ಮಾಡಬೇಡಿ ಎಂದು ಮನವಿ ಮಾಡಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ಮಾತನಾಡಿ, ಮೀನುಗಾರಿಕೆ ಇಲಾಖೆಯಿಂದ ಪ್ರಯೋಜನವಾಗುತ್ತಿಲ್ಲ. ಹಣ ಬಿಡುಗಡೆ ವಿಳಂಬವಾಗುತ್ತಿದ್ದು ಹನಿ ನೀರಾವರಿ ಯೋಜನೆ ಅಳವಡಿಸಲು ಸಾಧ್ಯವಾಗುತ್ತಿಲ್ಲ, ರಸಗೊಬ್ಬರ ವಿತರಣೆಯಲ್ಲಿ ಖಾಸಗಿ ಮಾರಾಟಗಾರರ ಗೋಲ್‌ಮಾಲ್ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯುವಂತೆ ಶಾಸಕರಿಗೆ ಮನವಿ ಮಾಡಿದರು.
ರಾಷ್ಟ್ರೀಯ ಕಿಸಾನ್ ರೈತ ಸಂಘದ ತಾಲೂಕು ಅಧ್ಯಕ್ಷ ಕೃಷ್ಣಾರಾವ್ ಮಾತನಾಡಿ, ಈ ಹಿಂದೆ ರೈತರಿಗೆ ಅದ್ಯತೆ ಇರಲಿಲ್ಲ. ಕೃಷಿ ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳು ಉತ್ತಮ ಕೆಲಸ ನಿರ್ವಹಿಸುತ್ತಿದ್ದು ನರೇಗಾ ಹಣ ದುರುಪಯೋಗ, ತಡೆಗಟ್ಟುವಂತೆ ಶಾಸಕರಿಗೆ ಒತ್ತಾಯಿಸಿದರು.
ಈ ವೇಳೆ ತಾಲೂಕಿನ ನಾಗಲಮಡಿಕೆ ಹೋಬಳಿ ತಿರುಮಣಿ ಕಾವ್ಯಶ್ರೀ, ಪಾಪಮ್ಮ, ವೈ.ಎನ್.ಹೊಸಕೋಟೆ ಹೋಬಳಿಯ ಅಶ್ವತ್ಥನಾರಾಯಣ್, ನಿಡಗಲ್ ಹೋಬಳಿಯ ಗೋವಿಂದಪ್ಪ ಇತರೆ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷೆ ಧನಲಕ್ಷ್ಮೀ ಗೋವಿಂದರಾಜು, ತಾಲೂಕು ಕಾಂಗ್ರೆಸ್ ಮುಖಂಡರಾದ ತಾಳೇ ಮರದಹಳ್ಳಿ ನರಸಿಂಹಯ್ಯ, ಎ.ಶಂಕರರೆಡ್ಡಿ, ಪುರಸಭೆ ಸದಸ್ಯರಾದ ಪಿ.ಎಚ್.ರಾಜೇಶ್, ತೆಂಗಿನಕಾಯಿ ರವಿ, ಕೋಳಿ ಬಾಲಾಜಿ, ಕೃಷಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ವಿಜಯಮೂರ್ತಿ, ತಾಲೂಕು ತೋಟಗಾರಿಕೆ ಇಲಾಖೆ ನಿರ್ದೇಶಕ ಶಂಕರಮೂರ್ತಿ, ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಗಂಗಯ್ಯ, ತಾ.ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸೇರಿದಂತೆ ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ವೇಣು ಇತರೆ ಆನೇಕ ಮಂದಿ ಗಣ್ಯರು ಮತ್ತು ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು .