ಚುನಾವಣೆಗೆ ದಿನಾಂಕ ನಿಗದಿ ಬೆನ್ನಲ್ಲೇ ಆರಂಭಗೊಂಡ ರಾಜಕೀಯ ಕಸರತ್ತು

Published : Mar 30, 2023, 10:09 AM IST
 ಚುನಾವಣೆಗೆ ದಿನಾಂಕ ನಿಗದಿ ಬೆನ್ನಲ್ಲೇ  ಆರಂಭಗೊಂಡ ರಾಜಕೀಯ ಕಸರತ್ತು

ಸಾರಾಂಶ

:ಕಳೆದ 14 ತಿಂಗಳಿನಿಂದ ಚುನಾವಣೆಗಾಗಿ ಎದುರು ನೋಡುತ್ತಿದ್ದ ಪಟ್ಟಣ ಪಚಾಯತಗಳಿಗೆ ಸೋಮವಾರ ಚುನಾವಣೆ ಆಯೋಗ ಮುಹೂರ್ತ ಫಿಕ್ಸ್‌ ಮಾಡಿದ್ದು, ಆ ಮೂಲಕ ಡಿ.8ರಂದು ಅಧಿಸೂಚನೆ ಹೊರಡಿಸುವಂತೆ ಚುನಾವಣೆ ಆಯೋಗ ಆದೇಶ ಹೊರಡಿಸಿದೆ. ಚುನಾವಣೆ ಆದೇಶ ಹೊರಬೀಳುತ್ತಿದ್ದಂತೆ ಪಟ್ಟಣದಲ್ಲಿ ರಾಜಕೀಯ ಕಸರತ್ತು ಆರಂಭಗೊಂಡಿದೆ.

ನಿಡಗುಂದಿ :ಕಳೆದ 14 ತಿಂಗಳಿನಿಂದ ಚುನಾವಣೆಗಾಗಿ ಎದುರು ನೋಡುತ್ತಿದ್ದ ಪಟ್ಟಣ ಪಚಾಯತಗಳಿಗೆ ಸೋಮವಾರ ಚುನಾವಣೆ ಆಯೋಗ ಮುಹೂರ್ತ ಫಿಕ್ಸ್‌ ಮಾಡಿದ್ದು, ಆ ಮೂಲಕ ಡಿ.8ರಂದು ಅಧಿಸೂಚನೆ ಹೊರಡಿಸುವಂತೆ ಚುನಾವಣೆ ಆಯೋಗ ಆದೇಶ ಹೊರಡಿಸಿದೆ. ಚುನಾವಣೆ ಆದೇಶ ಹೊರಬೀಳುತ್ತಿದ್ದಂತೆ ಪಟ್ಟಣದಲ್ಲಿ ರಾಜಕೀಯ ಕಸರತ್ತು ಆರಂಭಗೊಂಡಿದೆ.

16 ಸದಸ್ಯ ಬಲದ ಇಲ್ಲಿನ ಪಪಂಗೆ ಡಿ.8ರಿಂದc 15ರವರೆಗೆ ನಾಮಪತ್ರ ಸಲ್ಲಿಕೆ ನಡೆಯಲಿದ್ದು, 16ರಂದು ಪರಿಶೀಲನೆ ಹಾಗೂ 18ರಂದು ನಾಮಪತ್ರ ವಾಪಸ್‌ ಪಡೆಯಲು ಕೊನೆ ದಿನವಾಗಿದೆ. ಡಿ.27ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ಕಾರ್ಯ ನಡೆಯಲಿದೆ. ಡಿ.30ರಂದು ಮತ ಎಣಿಕೆ ನಡೆದು ಸ್ಪರ್ಧಿಗಳ ಹಣೆಬರಹ ತಿಳಿಯಲಿದೆ. 2022ರ ಜನವರಿಗೆ ಹೊಸ ವರ್ಷಾಚರಣೆಗೆ ಪಪಂ ಗದ್ದುಗೆಗೆ ನೂತನ ಸಾರಥಿ ಆಯ್ಕೆ ನಡೆಯಲಿದೆ.

ಇಲ್ಲಿನ ಪಟ್ಟಣ ಪಂಚಾಯತಿಗೆ ಜೂನ್‌ 2020ಕ್ಕೆ 5 ವರ್ಷದ ಅವಧಿ ಪೂರ್ಣಗೊಂಡಿತ್ತು. ಚುನಾವಣೆ ಘೋಷಣೆಯಾಗದ ಪರಿಣಾಮ ಕಳೆದ 14 ತಿಂಗಳ ಪಟ್ಟಣ ಪಂಚಾಯತಿ ಅಧಿಕಾರಿಗಳ ಹಿಡಿತದಲ್ಲಿತ್ತು. 16 ಸದಸ್ಯ ಬಲ ಹೊಂದಿದ ಪಟ್ಟಣ ಪಂಚಾಯತನಲ್ಲಿ ಕಳೆದ ಬಾರಿ 8 ಕಾಂಗ್ರೆಸ್‌, 6 ಬಿಜೆಪಿ, 2 ಪಕ್ಷೇತರರು ಆಯ್ಕೆಯಾಗಿದ್ದರು. ತಲಾ ಓರ್ವ ಪಕ್ಷೇತರ ಒಂದೊಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇದರಿಂದ 8 ಸದಸ್ಯ ಬಲ ಹೊಂದಿದ ಕಾಂಗ್ರೆಸ್‌ಗೆ ಗದ್ದುಗೆ ಸಮೀಪವಾಗಿ 5 ವರ್ಷ ಆಡಳಿತ ನಡೆಸಿತ್ತು. ಕಡಿಮೆ ಸದಸ್ಯ ಹೊಂದಿದ್ದ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಅನೇಕ ಬಾರಿ ಕಸರತ್ತು ನಡೆಸಿತು.್ತ ಆದರೆ, ಕಾಂಗ್ರೆಸ್‌, ಅವರ ಎಲ್ಲ ಪ್ರಯತ್ನವನ್ನು ವಿಫಲಗೊಳಿಸುವಲ್ಲಿ ಸಫಲರಾಗಿ 5 ವರ್ಷ ಆಳ್ವಿಕೆ ನಡೆಸಿತು.

ಕರ್ನಾಟಕ ವಿಧಾನಸಭೆ 2018ರ ಚುನಾವಣೆ ಪಕ್ಷಗಳ ಬಲಾಬಲ ಎಷ್ಟಿದೆ?: 2023ಕ್ಕೆ ಏನಾಗಲಿದೆ.!

ಕಾವೇರಿದ ಚುನಾವಣೆ ಸುದ್ದಿ:

ಸೋಮವಾರ ಮಧ್ಯಾಹ್ನ ಇಲ್ಲಿನ ಪಟ್ಟಣ ಪಂಚಾಯತಿಗೆ ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೆ ಪಟ್ಟಣದಲ್ಲಿ ಎಲ್ಲೆಡೆ ಚುನಾವಣೆ ಸುದ್ದಿ ಹಾಗೂ ಚುನಾವಣೆ ಆಯೋಗ ಹೊರಡಿಸಿದ ಪ್ರಕಟಣೆ ಪತ್ರಗಳು ಎಲ್ಲ ವಾಟ್ಸಪ್‌ನಲ್ಲಿ ಹರಿದಾಡಿದ್ದವು. ಪಪಂ ಅವಧಿ ಮುಗಿದು 14 ತಿಂಗಳಾಗಿದ್ದು, ಯಾವಾಗ ಚುನಾವಣೆ ನಡೆಸುತ್ತಾರೆ ಎಂದು ಕಾದು ಕುಳಿತವರಿಗೆ ಸೋಮವಾರ ಶುಭಸುದ್ದಿ ಸಿಕ್ಕಂತಾಗಿದೆ. ಈಗಾಗಲೇ ಅಭ್ಯರ್ಥಿಗಳ ಚರ್ಚೆ, ಪಕ್ಷಗಳತ್ತ ಮುಖ, ಟಿಕೆಟ್‌ ಪಡೆಯುವ ವಿಧಾನ ಸೇರಿದಂತೆ ಎಲ್ಲದರ ಕುರಿತು ಚರ್ಚೆಗಳ ಆರಂಭವಾಗುತ್ತಿವೆ. ಚುನಾವಣೆ ಸಮೀಪವಾಗುತ್ತಿದ್ದಂತೆ ಕಾವು ಗರಿಗೆದರಲಿದ್ದು ಯಾರು ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ, ಪಕ್ಷಗಳು ಯಾರಿಗೆ ಮಣೆ ಹಾಕುತ್ತವೆ ಕಾದುನೋಡಬೇಕು.

ರಾಹುಲ್ ಗಾಂಧಿ ಅನರ್ಹತೆಯಿಂದ ತೆರವಾಗಿರುವ ವಯನಾಡು ಉಪ ಚುನಾವಣೆ ಕುತೂಹಲಕ್ಕೆ ಆಯೋಗ ಉತ್ತರ!

ಕೈ, ಕಮಲಕ್ಕೆ ಟೆನ್ಶನ್‌

ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೆ ಕೈ, ಕಮಲ ಪಕ್ಷದಲ್ಲಿ ಟಿಕೆಟ್‌ ಹಂಚಿಕೆ ಟೆನ್ಶನ್‌ ಆರಂಭವಾಗಿದೆ. ಸ್ಥಳೀಯ ಚುನಾವಣೆಯಲ್ಲಿ ಅಳೆದು ತೂಗಿ ಟಿಕೆಟ್‌ ನೀಡಬೇಕಾಗಿದೆ. ಮುಂದಿನ 1 ವರ್ಷದಲ್ಲಿ ವಿಧಾನಸಭೆ ಚುನಾವಣೆಗೆ ಮತ ಪಡೆಯಲು ಎರಡೂ ಪಕ್ಷಕ್ಕೆ ಪಪಂ ಚುನಾವಣೆ ಗೆಲುವು ಅಡಿಪಾಯವಾಗಲಿದೆ. ಯಾರಿಗೆ ಟಿಕೆಟ್‌ ನೀಡಬೇಕು? ಗೆಲ್ಲುವ ಅಭ್ಯರ್ಥಿಯಾರು? ಎನ್ನುವ ಕುರಿತು ಎರಡೂ ಪಕ್ಷದಲ್ಲಿ ಟೆನ್ಶನ್‌ ಶುರುವಾಗಲಿದೆ.

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ