ಮಗುವಿನ ಮೇಲೆ ದಾಳಿ ಮಾಡಿ ಹೊತ್ತೊಯಲು ಯತ್ನಿಸಿದ ಚಿರತೆಯನ್ನು ಬೆದರಿಸಿ ಮಗುವನ್ನು ಉಳಿಸಿಕೊಂಡ ಘಟನೆ ತುಮಕೂರು ತಾಲೂಕು ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ.
ತುಮಕೂರು : ಮಗುವಿನ ಮೇಲೆ ದಾಳಿ ಮಾಡಿ ಹೊತ್ತೊಯಲು ಯತ್ನಿಸಿದ ಚಿರತೆಯನ್ನು ಬೆದರಿಸಿ ಮಗುವನ್ನು ಉಳಿಸಿಕೊಂಡ ಘಟನೆ ತುಮಕೂರು ತಾಲೂಕು ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ.
7 ವರ್ಷದ ಬಾಲಕಿ ಲೇಖನ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಚಿರತೆಯೊಂದು ಎಗರಿ ಹೊತ್ತೊಯ್ಯಲು ಮುಂದಾದ ವೇಳೆ ಸಮೀಪದಲ್ಲೇ ಇದ್ದ ತಂದೆ ರಾಕೇಶ್ ಜೋರಾಗಿ ಕೂಗಿಕೊಂಡು ದೊಣ್ಣೆಯೊಂದಿಗೆ ಚಿರತೆಗೆ ಬೆದರಿಸಿದ್ದಾರೆ. ಕೂಡಲೇ ಚಿರತೆ, ಮಗುವನ್ನು ಬಿಟ್ಟು ಓಡಿ ಹೋಗಿದೆ.
ಚಿರತೆಯ ದಾಳಿಯಿಂದಾಗಿ ಮಗುವಿನ ಕೈ ಕಾಲು ಪರಚಿದ ಗಾಯಗಲಾಗಿವೆ. ಚಿರತೆ ದಾಳಿಯಲ್ಲಿ ಬಾಲಕಿ ಲೇಖನ ಪ್ರಾಣಾಪಾಯದಿಂದ ಪಾರಾಗಿದ್ದಾಳೆ
ಬೆಂಗಳೂರು ಆಪರೇಷನ್ ಚಿರತೆ ಸಕ್ಸಸ್
ಬೆಂಗಳೂರು (ನ.01): ಬೊಮ್ಮನಹಳ್ಳಿ ಸಮೀಪದ ಕೂಡ್ಲುಗೇಟ್‌ನಲ್ಲಿ ಕಾಣಿಸಿಕೊಂಡ ಚಿರತೆಯನ್ನು ಅರಣ್ಯಾಧಿಕಾರಿಗಳು ಸತತ ಮೂರು ದಿನ ಕಾರ್ಯಾಚರಣೆ ನಡೆಸಿದ ನಂತರ ಸೆರೆ ಹಿಡಿದಿದ್ದರು. ಆದರೆ, ಚಿರತೆಯನ್ನು ಸೆರೆ ಹಿಡಿದ ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ.
ಬೆಂಗಳೂರಿನ ಜನರನ್ನು ಕಳೆದ ಮೂರು ದಿನಗಳಿಂದ ನಿದ್ದೆಗೆಡಿಸಿದ ಚಿರತೆಯು ಬುಧವಾರ ಮಧ್ಯಾಹ್ನದ ವೇಳೆಗೆ ಸೆರೆ ಸಿಕ್ಕಿತ್ತು ಎಂದು ಬೊಮ್ಮನಹಳ್ಳಿ ಬಳಿಯ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ 40ಕ್ಕೂ ಅಧಿಕ ಸಿಬ್ಬಂದಿ ಮೂರಿ ದಿನ ಕಷ್ಟ ಪಟ್ಟಿದ್ದು, ಬುಧವಾರ ಹೆಚ್ಚಿನ ಶ್ರಮವಹಿಸಿ ಚಿರತೆ ಸೆರೆಗೆ ಮುಂದಾಗಿದ್ದರು. ಚಿರತೆಗೆ ಅರವಳಿಕೆ ಚುಚ್ಚು ಮದ್ದನ್ನು ನೀಡಿದ್ದರೂ, ಅದು ತಪ್ಪಿಸಿಕೊಂಡು ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಗುಂಡೇಟು ಹೊಡೆಯಲಾಗಿತ್ತು ಎಂದು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆ ಹಿಡಿದ ತಕ್ಷಣವೇ ವೇಗವಾಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಚಿರತೆ ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ಜನರ ನಿದ್ದೆಗೆಡಿಸಿದ್ದ ಚಿರತೆ ಮೂರು ದಿನಗಳ ಕಾರ್ಯಾಚರಣೆ ಬಳಿಕ ಸೆರೆ
ಬೊಮ್ಮನಹಳ್ಳಿ ಸಮೀಪದ ಕೂಡ್ಲು ಹೊಸಪಾಳ್ಯ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಓಡಾಟ ನಡೆಸಿದ್ದು, ಸೋಮವಾರದಿಂದ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ಎಲ್ಲೂ ಚಿರತೆ ಕಂಡುಬಂದಿರಲಿಲ್ಲ. ಕೂಡ್ಲು ಸಮೀಪದ ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಲೇಔಟ್‌ನ ಪಾಳು ಬಿದ್ದ ಬೃಹತ್ ಕಟ್ಟಡವೊಂದರಲ್ಲಿ ಅಧಿಕಾರಿಗಳು ಮಂಗಳವಾರ ಕಾರ್ಯಾಚರಣೆ ನಡೆಸಿದ್ದರು. ಆದರೆ ಚಿರತೆ ಈ ಕಟ್ಟಡದಲ್ಲಿ ಇಲ್ಲ ಎಂದು ಖಚಿತವಾದ ನಂತರ, ಅಲ್ಲಿ ಬೋನ್ ಅಳವಡಿಸಿ ಬೇರೆಡೆ ಕಾರ್ಯಾಚರಣೆ ವರ್ಗಾಯಿಸಲಾಗಿತ್ತು. ಮಂಗಳವಾರವೂ ಕಾರ್ಯಾಚರಣೆ ವಿಫಲವಾದ ಕಾರಣ, ಅರಣ್ಯ ಇಲಾಖೆಯಿಂದ ಬುಧವಾರ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು. ಪಾಳು ಬಿದ್ದ ಕಟ್ಟಡದ ಬಳಿಯಿದ್ದ ಎಲ್ಲ ಪೊದೆಗಳಲ್ಲಿ ಡ್ರೋನ್ ಮೂಲಕ ಶೋಧನೆ ಮಾಡಿದಾಗ ಚಿರತೆ ಇರುವುದು ಖಚಿತವಾಗಿತ್ತು.
ಚಿರತೆಗೆ ಬಂದೂಕಿನಿಂದ ಗುಂಡು ಹಾರಿಸಲಾಯ್ತಾ?: ಚಿರತೆ ಇರುವುದು ಖಚಿತವಾಗಿತ್ತಿದ್ದಂತೆ ಪಾಳುಬಿದ್ದ ಕಟ್ಟಡದ ಪಕ್ಕದಲ್ಲಿ ರಕ್ಕಸವಾಗಿ ಬೆಳೆದು ನಿಂತಿದ್ದ ಖಾಲಿ ನಿವೇಶನದ ಎಲ್ಲ ಪೊದೆಗಳನ್ನು ಜೆಸಿಬಿಯಿಂದ ತೆರವುಗೊಳಿಸಲಾಗುತ್ತಿತ್ತು. ಇನ್ನು ಪೊದೆಗಳನ್ನು ಕತ್ತರಿಸಿದಂತೆಲ್ಲಾ ಒಂದರಿಂದ ಮತ್ತೊಂದು ಪೊದೆಯೊಳಗೆ ಚಿರತೆ ಓಡಾಡುತ್ತಿತ್ತು. ಪಕ್ಕದಲ್ಲಿ ಚಿರತೆ ಸೆರೆಗೆ ಬೋನು ಅಳವಡಿಕೆ ಮಾಡಿದ್ದರೂ ಅದರಲ್ಲಿ ಹೋಗುತ್ತಿರಲಿಲ್ಲ. ಕೊನೆಗೆ, ಚಿರತೆ ಓಡಾಡುವಾಗ ಒಮ್ಮೆ ಅರವಳಿಕೆ ಚುಚ್ಚುಮದ್ದಿನ ಇಂಜೆಕ್ಷನ್ ಹೊಡೆದಿದ್ದಾರೆ. ಅದರೂ ಅದು ಓಡಾಡುವುದು ನಿಲ್ಲಿಸಿಲ್ಲ. ನಂತರ, ಅರಣ್ಯಾಧಿಕಾರಿ ಬಂದೂಕಿನಿಂದಲೂ ಶೂಟ್ ಮಾಡಿದ್ದಾರೆಯೇ ಎಂಬ ಅನುಮಾನ ಕಂಡುಬಂದಿದೆ. ಇದಕ್ಕೆ ಕಾರಣ ಚಿರತೆಯ ಹೊಟ್ಟೆಯ ಭಾಗದಲ್ಲಿ ರಕ್ತವೂ ಸುರಿಯುತ್ತಿದ್ದುದು ಕಂಡುಬಂದಿದೆ.