
ಶಿರಸಿ: ಮೇ 7ರ ವರೆಗೆ ಶಿರಸಿ ಬಿಸಿಲಕೊಪ್ಪ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಗಳವಾರ ಸಾರ್ವಜನಿಕರು, ರೈತ ಸಂಘಟನೆಯವರು ಸೇರಿ ನಡೆಸಿದ ಪ್ರತಿಭಟನೆಯಲ್ಲಿ ಸಾರ್ವಜನಿಕರ ಅಹವಾಲು ಕೇಳಿದ ಸಹಾಯಕ ಆಯುಕ್ತರು, ತಾಲೂಕು ದಂಡಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಶಿರಸಿ-ಬಿಸಿಲುಕೊಪ್ಪ ಮಾರ್ಗದಲ್ಲಿ ಯಾವುದೇ ಭಾರಿ ಗಾತ್ರದ ವಾಹನಗಳಿಗೆ, ಲಾರಿ ಟಿಪ್ಪರ್‌ಗಳಿಗೆ ಸರ್ಕಾರಿ ಮತ್ತು ಖಾಸಗಿ ಬಸ್‌ಗಳಿಗೆ, ಪ್ರವಾಸಿಗರ ಟೆಂಪೋ ಟ್ರಾವೆಲ್ಲರ್‌ಗಳಿಗೆ ಸಂಚಾರವನ್ನು ಮೇ 7ವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕಾರಣ ಭಾರಿ ವಾಹನಗಳಾದ ಬಸ್, ಟಿಪ್ಪರ್, ಟೆಂಪೋ ಟ್ರಾವೆಲರ್, ಖಾಸಗಿ ವಾಹನಗಳಿಗೆ ಶಿರಸಿ-ಬಿಸಲ್ಕೊಪ್ಪ ಮಾರ್ಗ ಬಿಟ್ಟು ಹುಬ್ಬಳ್ಳಿ ಕಡೆಯಿಂದ ಬರುವ ವಾಹನಗಳು ಮಳಗಿ-ದಾಸನಕೊಪ್ಪ-ಬನವಾಸಿ-ಶಿರಸಿ ಹಾಗೂ ಹಾವೇರಿ ಕಡೆಯಿಂದ ಬರುವ ವಾಹನಗಳು ದಾಸನಕೊಪ್ಪ-ಬನವಾಸಿ-ಶಿರಸಿ ಮಾರ್ಗದಲ್ಲಿ ಸಂಚರಿಸಬೇಕೆಂದು ತಿಳಿಸಲಾಗಿದೆ.