ಟೇಕಲ್‌ನಲ್ಲಿ ಜನರ ಬಹುದಿನಗಳ ಬೇಡಿಕೆ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಧಾನಮಂತ್ರಿ ಮೋದಿಯವರ ನೇತೃತ್ವದ ಸರ್ಕಾರದಲ್ಲಿ ರೈಲ್ವೆ ಬ್ರಿಡ್ಜ್‌ಗೆ 19 ಕೋಟಿ 29 ಲಕ್ಷ 80 ಸಾವಿರ ರುಪಾಯಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಟೇಕಲ್ (ನ.29): ಮಾಲೂರು ತಾಲೂಕಿನ ಟೇಕಲ್‌ನ ಯಲುವಗುಳಿಯು ನನ್ನ ಹುಟ್ಟೂರು ಆದ್ದರಿಂದ ನನ್ನೂರಿಗೆ ಶಾಶ್ವತವಾದ ಅಭಿವೃದ್ಧಿ ಕಾರ್ಯ ಮಾಡುವ ನಿಟ್ಟಿನಿಂದ ಟೇಕಲ್‌ನಲ್ಲಿ ಜನರ ಬಹುದಿನಗಳ ಬೇಡಿಕೆ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಧಾನಮಂತ್ರಿ ಮೋದಿಯವರ ನೇತೃತ್ವದ ಸರ್ಕಾರದಲ್ಲಿ ರೈಲ್ವೆ ಬ್ರಿಡ್ಜ್‌ಗೆ 19 ಕೋಟಿ 29 ಲಕ್ಷ 80 ಸಾವಿರ ರುಪಾಯಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. ಅವರು ಟೇಕಲ್‌ನಲ್ಲಿ ಮಾಲೂರು-ಬಂಗಾರಪೇಟೆ ಮಧ್ಯೆ ಸಂಪರ್ಕ ನೀಡುವ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದನ್ನು ಅಧಿಕಾರಿಗಳೊಡನೆ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು.
ಸತತ ಸ್ವಾತಂತ್ರ್ಯ ಪೂರ್ವದಿಂದಲೂ ಇಲ್ಲಿ ಮೇಲ್ಸೇತುವೆಗೆ ಜನರ ಬೇಡಿಕೆ ಇದ್ದು, ಒಂದು ದಿನಕ್ಕೆ 80 ರಿಂದ 120 ಬಾರಿ ಗೇಟ್ ಹಾಕಲಾಗುತ್ತದೆ. ಅದರಿಂದ ಬಹುತೇಕರಿಗೆ ತೊಂದರೆಯಾಗುತ್ತಿದ್ದು, ಅದನ್ನು ಮನಗಂಡು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಟೇಕಲ್ ರೈಲು ನಿಲ್ದಾಣದ ಅಭಿವೃದ್ಧಿಗೆ ಹಣ ಮಂಜೂರು ಮಾಡಲಾಗಿದೆ. ಇಂದು ಟೇಕಲ್ ರೈಲು ನಿಲ್ದಾಣದಲ್ಲಿ 15 ಲಕ್ಷ ರುಪಾಯಿ ವೆಚ್ಚದ 3 ರಿಂದ 4 ತಂಗುದಾಣ, 20 ಲಕ್ಷದಲ್ಲಿ ಶೌಚಾಲಯ ನಿರ್ಮಾಣ, 5 ಲಕ್ಷ ರು. ವೆಚ್ಚದಲ್ಲಿ ರೈಲ್ವೆ ಟ್ರ್ಯಾಕ್ ಮಧ್ಯದಲ್ಲಿ ಅಪಘಾತ ತಪ್ಪಿಸಲು ಬ್ಯಾರಿಕೇಡ್, 60 ಲಕ್ಷದಲ್ಲಿ ರೈಲ್ವೆ ಅಧಿಕಾರಿಗಳು ನಿಲ್ದಾಣದಲ್ಲಿ ಉಳಿದುಕೊಳ್ಳಲು ಕಟ್ಟಡ ನಿರ್ಮಾಣ, 3 ಕೋಟಿ 20 ಲಕ್ಷದಲ್ಲಿ ಪುಟ್‌ಒವರ್ ಬ್ರಿಡ್ಜ್ ಕಾಮಗಾರಿಗಳು ಪ್ರಗತಿಯಲ್ಲಿದೆ. ಟೇಕಲ್ ರೈಲ್ವೆ ನಿಲ್ದಾಣಕ್ಕೆ ಯಾರೂ ಮಾಡಿರದ ಅಭಿವೃದ್ಧಿ ಕಾರ್ಯ ಮಾಡಿರುವುದಾಗಿ ತಿಳಿಸಿದರು.
ಕೊನೆ ಉಸಿರು ಇರುವವರೆಗೂ ಕೆಆರ್‌ಪಿಪಿಯಲ್ಲಿರುವೆ: ಶಾಸಕ ಜನಾರ್ದನ ರೆಡ್ಡಿ
ಟೇಕಲ್‌ನಲ್ಲಿ ನಿತ್ಯ ಪ್ರಯಾಣಿಕರಿಗೆ ಹಲವಾರಯ ರೀತಿಯಲ್ಲಿ ಸಹಾಯವಾಗಲೆಂದು ಕೆಲವು ಮೆಮೋ ರೈಲುಗಳನ್ನು ಸ್ಥಗಿತ ಮಾಡಿದ್ದು, ಕಾಕಿನಾಡ ಎಕ್ಸ್‌ಪ್ರೆಸ್‌ನ್ನು ಜನರ ಬೇಡಿಕೆ ಅನುಗುಣವಾಗಿ ನಿಲುಗಡೆ ಮಾಡಲಾಗಿದೆ. ರೈಲು ಬರುವುದಕ್ಕಿಂತ ಮುಂಚೆಯೇ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಸಹಾಯವಾಗಲೆಂದು ಧ್ವನಿವರ್ಧಕದಲ್ಲಿ ಬರುತ್ತಿರುವ ರೈಲಿನ ಮಾಹಿತಿಯನ್ನು ಕೂಡ ನೀಡಲಾಗುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಟೇಕಲ್ ರೈಲು ನಿಲ್ದಾಣವನ್ನು ಮಾದರಿ ಮಾಡುವುದಾಗಿ ತಿಳಿಸಿದರು.
ಮೇಲ್ಸೇತುವೆಗೆ ಸಂಸದರ ಸ್ವಂತ ಸ್ಥಳ ನೀಡುವಿಕೆ: ಮೇಲ್ಸೇತುವೆ ನಿರ್ಮಾಣವು ಆದಷ್ಟು 2024 ಮಾರ್ಚ್‌ಯೊಳಗೆ ಮುಕ್ತಾಯ ಹಂತ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದು, ಆದಷ್ಟು ಬೇಗ ಮುಗಿಸಿ ಜನರಿಗೆ ಅನುಕೂಲ ಕಲ್ಪಿಸಲು ತಿಳಿಸಿರುವುದಾಗಿ ಮಾಹಿತಿ ನೀಡಿದರು. ವಿಶೇಷವಾಗಿ ರೈಲ್ವೆ ಮೇಲು ಸೇತುವೆ ಕಾಮಗಾರಿಗಿಂತ ಮೊದಲು ಮಾಡಿದ ಸೇತುವೆ ನೀಲಿ ನಕ್ಷೆಯು ಇದೀಗ ಸ್ವಲ್ಪ ಬದಲಾವಣೆಯಾಗಲಿದ್ದು, ಸಂಸದರ ಸ್ವಂತ ಜಾಗವನ್ನೇ ಅದಕ್ಕೆ ನೀಡುವುದಾಗಿ ಈ ಸಂದರ್ಭದಲ್ಲಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. ಜನರಿಗೆ ಉತ್ತಮವಾದ ಸೇತುವೆ ನಿರ್ಮಾಣವಾಗಬೇಕುರೆಂಬುದು ನಮ್ಮ ಬಹಳ ದಿನಗಳ ಆಸೆ ಮತ್ತು ಈ ಭಾಗದ ಜನರ ಮಹದಾಸೆ ಎಂದರು.
ಇಂದು ಎಲೆಕ್ಷನ್ ನಡೆದರೂ ಬಿಜೆಪಿಗೆ 135 ಸ್ಥಾನ ಬರುತ್ತೆ: ಬಿ.ಎಸ್.ಯಡಿಯೂರಪ್ಪ
ಈ ಸಂದರ್ಭದಲ್ಲಿ (ಇಇ) ಎಕ್ಸುಕ್ಯುಟೀವ್ ಇಂಜಿನಿಯರ್ ಶಿವಕುಮಾರ್, ರೈಲ್ವೆ ಅಧಿಕಾರಿಗಳಾದ ರಾಘವೇಂದ್ರ, ಮುರಳೀಧರ, ದಿಶಾ ಸಂಸ್ಥೆಯ ಸೂರ್ಯನಾರಾಯಣರಾವ್, ರೈಲ್ವೆ ಗುತ್ತಿಗೆದಾರ ವೆಂಕಟರೆಡ್ಡಿ (ಕೆಡಿಪಿ), ಚಂದ್ರಾರೆಡ್ಡಿ, ರಮೇಶಗೌಡ, ಪ್ರಶಾಂತ್, ಓಜರಹಳ್ಳಿ ಮುನಿಯಪ್ಪ, ಟೇಕಲ್ ಆಂಜಿನಪ್ಪ, ಗೋಪಾಲಕೃಷ್ಣ, ಇನ್ನೂ ಅನೇಕ ಮಂದಿ ಕಾರ್ಯಕರ್ತ ಮತ್ತು ಮುಖಂಡರು, ಸ್ಥಳೀಯ ಅಧಿಕಾರಿಗಳು ಉಪಸ್ಥಿತರಿದ್ದರು.