ಜು. 25ವರೆಗೆ ಶಿಕ್ಷಕರ ಪರಸ್ಪರ ವರ್ಗಾವಣೆ ಕೌನ್ಸೆಲಿಂಗ್‌

By Kannadaprabha News  |  First Published Jul 15, 2023, 8:30 PM IST

ಜುಲೈ. 25 ರಂದು ಬೆಳಿಗ್ಗೆ 10 ಗಂಟೆಯಿಂದ ವಿಶೇಷ ಶಿಕ್ಷಕರು, ದೈಹಿಕ ಶಿಕ್ಷಕರು ಗ್ರೇಡ್‌-1, ಸಹ ಶಿಕ್ಷಕರು ಕ್ರ.ಸಂ 1 ರಿಂದ ಮುಕ್ತಾಯದವರೆಗೆ ನಡೆಯಲಿದೆ.


ಬೆಳಗಾವಿ(ಜು.15): 2022-23ನೇ ಸಾಲಿನ ಬೆಳಗಾವಿ ವಿಭಾಗದ ಜಿಲ್ಲೆಯ ಹೊರಗಿನ ವಿಭಾಗದೊಳಗಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರನ್ನು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಪ್ರೌಢ ಶಾಲಾ ಶಿಕ್ಷಕರ ಕೋರಿಕೆ, ಪರಸ್ಪರ ವರ್ಗಾವಣೆಯ ಗಣಕೀಕೃತ ಕೌನ್ಸಲಿಂಗ ಜುಲೈ.18 ರಿಂದ ಜು.25 ರವರೆಗೆ ಬೆಳಗಾವಿಯ ಕೇಂದ್ರ ಅಂಚೆ ಕಚೇರಿ ಹತ್ತಿರದ ಬಿ.ಕೆ ಮಾಡೆಲ್‌ ಪ್ರೌಢಶಾಲೆಯಲ್ಲಿ ನಡೆಯಲಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ ಕೋರಿಕೆ ವರ್ಗಾವಣೆ ವೇಳಾಪಟ್ಟಿ: 

Tap to resize

Latest Videos

ಜುಲೈ.18 ರಂದು ಬೆಳಿಗ್ಗೆ 9 ಗಂಟೆಯಿಂದ ವಿಶೇಷ ಶಿಕ್ಷಕರು, ದೈಹಿಕ ಶಿಕ್ಷಕರು ಗ್ರೇಡ್‌-2, ಮುಖ್ಯ ಶಿಕ್ಷಕರು ಕ್ರ.ಸಂ 1 ರಿಂದ ಮುಕ್ತಾಯದವರೆಗೆ, ಸಹ ಶಿಕ್ಷಕರು ಕ್ರ.ಸಂ 1 ರಿಂದ 350 ರವರೆಗೆ ನಡೆಯಲಿದೆ. ಜುಲೈ.19 ರಂದು ಬೆಳಿಗ್ಗೆ 9 ಗಂಟೆಯಿಂದ ಸಹ ಶಿಕ್ಷಕರು ಕ್ರ.ಸಂ 351 ರಿಂದ 800 ರವರೆಗೆ ನಡೆಯಲಿದೆ. ಜುಲೈ.20 ರಂದು ಬೆಳಿಗ್ಗೆ 9 ಗಂಟೆಯಿಂದ ಸಹ ಶಿಕ್ಷಕರು ಕ್ರ.ಸಂ 801 ರಿಂದ ಮುಕ್ತಾಯದವರೆಗೆ ನಡೆಯಲಿದೆ.
ಪ್ರೌಢ ಶಾಲಾ ಶಿಕ್ಷಕರ ಸಾಮಾನ್ಯ ಕೋರಿಕೆ ವರ್ಗಾವಣೆ ವೇಳಾಪಟ್ಟಿ: ಜುಲೈ.21 ರಂದು ಬೆಳಿಗ್ಗೆ 9 ಗಂಟೆಯಿಂದ ವಿಶೇಷ ಶಿಕ್ಷಕರು, ದೈಹಿಕ ಶಿಕ್ಷಕರು ಗ್ರೇಡ್‌-1 ಕ್ರ.ಸಂ 1 ರಿಂದ ಮುಕ್ತಾಯದವರೆಗೆ, ಸಹ ಶಿಕ್ಷಕರು ಕ್ರ.ಸಂ 1 ರಿಂದ 200 ರವರೆಗೆ ನಡೆಯಲಿದೆ. ಜುಲೈ.22 ರಂದು ಬೆಳಿಗ್ಗೆ 9 ಗಂಟೆಯಿಂದ ಸಹ ಶಿಕ್ಷಕರು ಕ್ರ.ಸಂ 201 ರಿಂದ 600 ರವರೆಗೆ ನಡೆಯಲಿದೆ. ಜುಲೈ.24 ರಂದು ಬೆಳಿಗ್ಗೆ 9 ಗಂಟೆಯಿಂದ ಸಹ ಶಿಕ್ಷಕರು ಕ್ರ.ಸಂ 601 ರಿಂದ ಮುಕ್ತಾಯದವರೆಗೆ ನಡೆಯಲಿದೆ.

ಟೊಮೆಟೋ ಬೆಳೆದು ಲಕ್ಷ ಲಕ್ಷ ಸಂಪಾದಿಸಿದ ಯುವ ರೈತ ಮಹೇಶ್ ಹಿರೇಮಠ!

ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ ಪರಸ್ಪರ ವರ್ಗಾವಣೆ ವೇಳಾಪಟ್ಟಿ:

ಜುಲೈ.25 ರಂದು ಬೆಳಿಗ್ಗೆ 9 ಗಂಟೆಯಿಂದ ಸಹ ಶಿಕ್ಷಕರು ಕ್ರ.ಸಂ 1 ರಿಂದ ಮುಕ್ತಾಯದವರೆಗೆ ನಡೆಯಲಿದೆ.

ಪ್ರೌಢ ಶಾಲಾ ಶಿಕ್ಷಕರ ಸಾಮಾನ್ಯ ಪರಸ್ಪರ ವರ್ಗಾವಣೆ ವೇಳಾಪಟ್ಟಿ: 

ಜುಲೈ 25 ರಂದು ಬೆಳಿಗ್ಗೆ 10 ಗಂಟೆಯಿಂದ ವಿಶೇಷ ಶಿಕ್ಷಕರು, ದೈಹಿಕ ಶಿಕ್ಷಕರು ಗ್ರೇಡ್‌-1, ಸಹ ಶಿಕ್ಷಕರು ಕ್ರ.ಸಂ 1 ರಿಂದ ಮುಕ್ತಾಯದವರೆಗೆ ನಡೆಯಲಿದೆ.

ಈ ವೇಳಾಪಟ್ಟಿಯಂತೆ ಅರ್ಹ ಶಿಕ್ಷಕರು ಆದ್ಯತೆಯ ಪೂರಕ ದಾಖಲೆಗಳೊಂದಿಗೆ ವರ್ಗಾವಣೆ ಅರ್ಜಿಯ ಪ್ರತಿ, ಮೂಲ ದಾಖಲೆಗಳು ಹಾಗೂ ಶಿಕ್ಷಕರ ಮೂಲ ಐಡಿ ಕಾರ್ಡನೊಂದಿಗೆ ಹಾಜರಾಗಬೇಕು. ವರ್ಗಾವಣೆ ಕೌನ್ಸೆಲಿಂಗ್‌ ಜರುಗುವ ಆವರಣಕ್ಕೆ ಸಂಬಂಧಿಸಿದ ಶಿಕ್ಷಕರು ಮಾತ್ರ ಹಾಜರಾಗಬೇಕು ಹಾಗೂ ಅಂತಿಮ ಆದ್ಯತಾ ಪಟ್ಟಿಯಲ್ಲಿನ ಆದ್ಯತೆಯನ್ನು ಖಚಿತಪಡಿಸಿಕೊಂಡು ಕೌನ್ಸೆಲಿಂಗ್‌ಗೆ ಹಾಜರಾಗಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಪದನಿಮಿತ್ತ ಸಹನಿರ್ದೇಶಕರು, ಬೆಳಗಾವಿ ವಿಭಾಗದ ವಿಭಾಗೀಯ ಕಾರ್ಯರ್ಶಿಗಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!