ತೀ.ನರಸೀಪುರ : ಟಿಎಪಿಸಿಎಂಎಸ್ ಹರೀಶ್ ಗೌಡ ತಂಡಕ್ಕೆ ಭರ್ಜರಿ ಗೆಲುವು

By Kannadaprabha News  |  First Published Feb 12, 2024, 9:23 AM IST

ತಾಲೂಕು ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಹಕಾರ ನಿಯಮಿತ ಸಮಿತಿಯ ಆಡಳಿತ ಮಂಡಳಿಯ 5 ವರ್ಷದವಧಿಗೆ ನಡೆದ 12 ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡರ ನೇತೃತ್ವದಲ್ಲಿ ಸುಬ್ರಹ್ಮಣ್ಯ ಅವರ ತಂಡ 11 ಸ್ಥಾನದೊಂದಿಗೆ ಭರ್ಜರಿ ಜಯಗಳಿಸಿದೆ.


ತಿ.ನರಸೀಪುರ: ತಾಲೂಕು ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಹಕಾರ ನಿಯಮಿತ ಸಮಿತಿಯ ಆಡಳಿತ ಮಂಡಳಿಯ 5 ವರ್ಷದವಧಿಗೆ ನಡೆದ 12 ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡರ ನೇತೃತ್ವದಲ್ಲಿ ಸುಬ್ರಹ್ಮಣ್ಯ ಅವರ ತಂಡ 11 ಸ್ಥಾನದೊಂದಿಗೆ ಭರ್ಜರಿ ಜಯಗಳಿಸಿದೆ.

ತಾಲೂಕು ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಹಕಾರ ನಿಯಮಿತ ಸಮಿತಿಗೆ. 2023ರ ಸೆಪ್ಟೆಂಬರ ತಿಂಗಳಿನಲ್ಲಿ

Latest Videos

undefined

ಚುನಾವಣೆ ನಡೆಯಬೇಕಿತ್ತು. ಕಾಂಗ್ರೆಸ್ ಪಕ್ಷ ಜೆ.ಡಿ.ಎಸ್ ಭದ್ರಕೋಟೆಯನ್ನು ಛೀದ್ರಗೊಳಿಸಲು ಸರ್ಕಾರದ ಹಿಂಬಾಗಾಲಿನಿಂದ ಚುನಾವಣೆಯನ್ನು ಮುಂದೂಡಿದರು. ಇದನ್ನು ಸುಬ್ರಹ್ಮಣ್ಯ ಅವರು ಕೋರ್ಟಿನ ಮೆಟ್ಟಿಲು ಏರೀದ್ದರು. ಕೋರ್ಟಿನ ತೀರ್ಪಿನ ಬಳಿಕ ಆರು ತಿಂಗಳ ನಂತರ ಫೆ.11ರಂದು ನಡೆದ ಪಟ್ಟಣದ ವಿದ್ಯೋದಯ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ಎ ತರಗತಿಯ 4 ಹಾಗೂ ಬಿ ತರಗತಿಯ 8 ಸ್ಥಾನಗಳಿಗೆ ಚುನಾವಣೆ ನಡೆಯಿತು.

ಎ ತರಗತಿಯಿಂದ ರಂಗಸಮುದ್ರ ಪಿಎಸಿಸಿ ಪ್ರತಿನಿಧಿಸುವ ಟಿ. ವಾಸುದೇವ್, ಕಸಬಾ ಪಿಎಸಿಸಿ ಪ್ರತಿನಿಧಿಸುವ ಡಣಾಯಕನಪುರ ಮಲ್ಲಣ್ಣ, ಬಸವನಹಳ್ಳಿ ಪಿಎಸಿಸಿ ಯಿಂದ ಬಿ.ಎಸ್. ಮಹೇಶ್, ಯಾಚೇನಹಳ್ಳಿ ಪಿಎಸಿಸಿ ಯ ವೈ.ಎನ್.ಶಂಕರೇಗೌಡ ಆಯ್ಕೆಯಾಗಿದ್ದಾರೆ.

ಬಿ.ತರಗತಿಯಿಂದ ಸಾಮಾನ್ಯ ವರ್ಗದಿಂದ ಎಂ.ಕೆ.ಮಹೇಶ್, ಹಾಲಿ ಅಧ್ಯಕ್ಷ ಟಿ.ಪಿ.ಸುಬ್ರಹ್ಮಣ್ಯ, ಮಹಿಳಾ ಮೀಸಲು ವರ್ಗದಿಂದ ಡಿ.ಕೋಮಲ, ಎಸ್. ನಿರ್ಮಲ, ಹಿಂದುಳಿದ ವರ್ಗ ಎ ಯಿಂದ ಕೈಯಂಬಳ್ಳಿಯ ಕೆ.‌ಎಂ ಸುನಿಲ್, ಹಿಂದುಳಿದ ವರ್ಗ ಬಿ ನಿಂದ ಬನ್ನೂರಿನ ವೈ.ಎಸ್.ರಾಮಸ್ವಾಮಿ, ಎಸ್.ಸಿ ವರ್ಗದಿಂದ ಮಾದಾಪುರ ಎಂ. ಎಸ್. ಬಸವರಾಜ್, ಪ.ಪಂಗಡ ವರ್ಗದಿಂದ ಮೂಗೂರು ಎಂ. ಎಂ.ಜಯಣ್ಣ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಎಚ್.ಕೆ. ಸತೀಶ್ ಕಾರ್ಯ ನಿರ್ವಹಿಸಿದರು. ಈ ವೇಳೆ ಮಾತನಾಡಿದ ಹಲವು ನೂತನ‌ ನಿರ್ದೇಶಕರು

ತಮ್ಮ ಗೆಲುವಿಗೆ ಸಹಕಾರ ನೀಡಿದ ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ, ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ, ತಿ.ನರಸೀಪುರ ದ ಮಾಜಿ ಶಾಸಕ ಅಶ್ವಿನ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಸಂಘವನ್ನು ಸಮಗ್ರವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಹಾಗೂ ಸದಸ್ಯರಿಗೆ ಸರ್ಕಾರದ ಸವಲತ್ತು ದೊರಕಿಸುವ ನಿಟ್ಟಿನಲ್ಲಿ ನಮ್ಮ‌ತಂಡ ಶ್ರಮಿಸಲಿದೆ ಎಂದು ತಿಳಿಸಿದರು.

 ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಾದ್ಯಂತ ಸಹಕಾರ ಕ್ಷೇತ್ರದ ಅಡಿಪಾಯ ಭದ್ರವಾಗಿದೆ. ಸರ್ಕಾರ ಯಾವ ತಂತ್ರಗಾರಿಕೆ ಮಾಡಿದ್ದರು ಮತದಾರರು ನಮ್ಮ‌ ತಂಡವನ್ನು ಅತ್ಯಧಿಕ ಮತಗಳಿಂದ ಭರ್ಜರಿ ಗೆಲುವು ನೀಡಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.

ಜಿ.ಡಿ.ಹರೀಶ್ ಗೌಡ ಶಾಸಕ ಹುಣಸೂರು

click me!