ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾದೋದ್ಯಮ ಸಚಿವ ಸಿ.ಟಿ ರವಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಗಿದೆ. ಸಿ.ಟಿ ರವಿ ಅವರು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ವಿಠ್ಠಲ ಹೆಗ್ಡೆ ಕಲ್ಕುಳಿ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಚಿತ್ರದುರ್ಗ [ಜ.11]: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜನಪರ ಬರಹಗಾರ, ಹೋರಾಟಗಾರ, ಪರಿಸರವಾದಿ ಕಲ್ಕುಳಿ ವಿಠಲ ಹೆಗಡೆ ಮೇಲೆ ನಕ್ಸಲ್ ಪಟ್ಟ ಕಟ್ಟಿ ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಕನ್ನಡ ಸಾರಸ್ವತ ಲೋಕಕ್ಕೆ ಅವಮಾನ ಮಾಡಿದ್ದಾರೆ. ಆದ್ದರಿಂದ ಕೂಡಲೇ ಅವರು ಕನ್ನಡಿಗರ ಕ್ಷಮೆಯಾಚಿಸಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಕುಳಿ ವಿಠಲಹೆಗಡೆ ನಕ್ಸಲ್ ಸಂಪರ್ಕ ಹೊಂದಿದ್ದರೆ ಶಿಕ್ಷೆ ವಿಧಿಸಲು ಕಾನೂನಿದೆ. ಹೋರಾಟಗಾರರ ಮೇಲೆ ನಕ್ಸಲ್ ಪಟ್ಟ ಕಟ್ಟುವುದು ಸರಿಯಲ್ಲ. ಕನ್ನಡಿಗರ ಆತ್ಮಾಭಿಮಾನದ ಶಕ್ತಿಯಾಗಿ ಕೆಲಸ ಮಾಡುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇದೊಂದು ದೊಡ್ಡ ಅಪಚಾರವಾಗಿದೆ. ಸಮ್ಮೇಳನದಲ್ಲಿ ಭಾಗವಹಿ ಸುವವರಿಗೆ ಒಒಡಿ ಸೌಲಭ್ಯ ಹಾಗೂ ಭದ್ರತೆಯನ್ನು ಒದಗಿಸಿಲ್ಲದಿರುವುದು ಸಮ್ಮೇಳನಕ್ಕೆ ಅಗೌರವ ತರುವ ಕೆಲಸ ಮಾಡಿದ್ದಾರೆ ಎಂದರು.
ಕಲ್ಕುಳಿ ವಿಠಲ ಹೆಗಡೆ ಅವರನ್ನು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ನೇಮಕ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಸರ್ಕಾರದ ಅಧೀನದಲ್ಲಿಲ್ಲ. ಅದೊಂದು ಸ್ವಾಯತ್ತ ಸಂಸ್ಥೆ ವೈಯಕ್ತಿಕ ವಿಚಾರಕ್ಕಾಗಿ ಸಚಿವ ಸಿ.ಟಿ.ರವಿ ಶೃಂಗೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕತ್ತಲಲ್ಲಿಡುವುದು ಉತ್ತಮ ಬೆಳವಣಿಗೆಯಲ್ಲ.
ಚಿಕ್ಕಮಗಳೂರು ಅಕ್ಷರ ಜಾತ್ರೆ: ಹಣ ಕೊಡದ ಸರ್ಕಾರ, ಕೈ ಬಿಡದ ಶೃಂಗೇರಿ ಮಠ...
ವಿಚಾರವಾದಿಗಳಿಗೆ ಬೇರೆ ಬೇರೆ ಪಟ್ಟ ಕಟ್ಟುವುದು ಯಾವ ನ್ಯಾಯ. ಬುದ್ಧ, ಬಸವ, ಪಂಪ, ರನ್ನ, ಅವರ ನಡುವೆ ಎಷ್ಟೆ ಭಿನ್ನಾಭಿ ಪ್ರಾಯಗಳಿದ್ದರೂ ಪರಸ್ಪರರನ್ನು ಗೌರವಿ ಸುತ್ತಿದ್ದರು. ಹಿಂದೆಂದೂ ಕೇಳಿ ಕಂಡರಿಯದಂತಹ ಘಟನೆ ಇದಾಗಿದ್ದು, ಕನ್ನಡಿಗರು ತಲೆತಗ್ಗಿಸುವಂತೆ ಮಾಡಿರುವ ಸಿ.ಟಿ.ರವಿ ವಿರುದ್ಧ ಯಾವ ಸಾಹಿತಿಗಳೂ ಮಾತನಾಡದೆ ಬಾಯಿಮುಚ್ಚಿ ಕೊಂಡು ಕುಳಿತಿರು ವುದು ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು. ಸಚಿವ ಸಿ.ಟಿ.ರವಿ ನಿಜವಾಗಿಯೂ ಕನ್ನಡ ಸಾಹಿತ್ಯ ಪರಂಪರೆ ಮೇಲೆ ಭಯೋತ್ಪಾದನೆ ನಡೆಸುವಂತಿದೆ.
ಜನರನ್ನು ಎತ್ತಿಕ ಟ್ಟುವ ಕೆಲಸ ಅವರಿಗೆ ಶೋಭೆ ತರುವಂತದ್ದಲ್ಲ. ಯಾವುದೇ ಪಕ್ಷ, ಸರ್ಕಾರವಾಗಲಿ ಇಂದು ಇರುತ್ತೆ ನಾಳೆ ಹೋಗುತ್ತೆ. ಆದರೆ, ಕನ್ನಡ ಭಾಷೆ ಶಾಶ್ವತ. ಸಚಿವರ ಈ ವರ್ತನೆ ನೋಡಿದರೆ ಮುಂದಿನ ದಿನ ಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಅವರ ಪಕ್ಷದವರನ್ನು ಮಾಡಿದರೂ ಆಶ್ಚರ್ಯವಿಲ್ಲ ಎಂದು ಟೀಕಿಸಿದರು.