BSY ಸಿಎಂ ಆಗಲೆಂದು ಹರಕೆ ತೀರಿಸುತ್ತಿದ್ದಂತೆ ಪ್ರಮಾಣ ವಚನಕ್ಕೆ ಟೈಂ ಫಿಕ್ಸ್...

Published : Jul 26, 2019, 04:31 PM ISTUpdated : Jul 26, 2019, 04:41 PM IST
BSY ಸಿಎಂ ಆಗಲೆಂದು ಹರಕೆ ತೀರಿಸುತ್ತಿದ್ದಂತೆ ಪ್ರಮಾಣ ವಚನಕ್ಕೆ ಟೈಂ ಫಿಕ್ಸ್...

ಸಾರಾಂಶ

ಬಿಎಸ್‌ವೈ ಸಿಎಂ ಆಗ್ಲಿ ಅಂತ ಹರಕೆ ಹೊತ್ತುಕೊಂಡಿದ್ದ ವ್ಯಕ್ತಿ ಅತ್ತ ಹರಕೆ ಪೂಜೆ ಸಲ್ಲಿಸ್ತಾ ಇದ್ದಂತೆ ಇತ್ತ ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ಸಮಯ ನಿಗದಿಯಾಗಿದೆ. ಕಾಕತಾಳಿಯವೋ ಏನೋ.. ಆದರೂ ಭಕ್ತನ ಕೋರಿಕೆಯನ್ನು ಕಲ್ಲೂರು ಮಹಾಲಕ್ಷ್ಮೀ ನೆರವೇರಿಸಿದ್ದಾಳೆ.

ರಾಯಚೂರು(ಜು.26): ಬಿಎಸ್‌ವೈ ಸಿಎಂ ಆಗ್ಲಿ ಅಂತ ಹರಕೆ ಹೊತ್ತುಕೊಂಡಿದ್ದ ವ್ಯಕ್ತಿ ಅತ್ತ ಹರಕೆ ಪೂಜೆ ಸಲ್ಲಿಸ್ತಾ ಇದ್ದಂತೆ ಇತ್ತ ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ಸಮಯ ನಿಗದಿಯಾಗಿದೆ. ಕಾಕತಾಳಿಯವೋ ಏನೋ.. ಆದರೂ ಭಕ್ತನ ಕೋರಿಕೆಯನ್ನು ಕಲ್ಲೂರು ಮಹಾಲಕ್ಷ್ಮೀ ನೆರವೇರಿಸಿದ್ದಾಳೆ.

ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತೆ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಬಿಎಸ್ ವೈ ಮುಖ್ಯಮಂತ್ರಿ ಆಗಲಿ ಅಂತ ಅಭಿಮಾನಿಯೋರ್ವ ದೇವಿಯಲ್ಲಿ ಹರಕೆ ಹೊತ್ತಿದ್ದ. ಕಾಕತಾಳಿಯನೋ ಏನೋ ಗೊತ್ತಿಲ್ಲ. ಅತ್ತ ಬಿಎಸ್‌ವೈ ಪ್ರಮಾಣ ವಚನಕ್ಕೆ ಸಿದ್ಧತೆ ನಡೆಸಿದ್ರೆ, ಇತ್ತ ಅಭಿಮಾನಿ ಹರಕೆ ತೀರಿಸಲು ದೇವಿಗೆ ಪೂಜೆ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಯಡಿಯೂರಪ್ಪ ಪ್ರಮಾಣ ವಚನದ ಸಮಯ ನಿಗದಿಯಾಗಿದೆ.

ಭಕ್ತನ ಬೇಡಿಕೆ ಇಡೇರಿಸಿದ ಕಲ್ಲೂರು ಮಹಾಲಕ್ಷ್ಮಿ:

ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ಕಲ್ಲೂರು ಮಹಾಲಕ್ಷ್ಮಿ ದೇಗುಲ ಬೇಡಿದವರಿಗೆ ಬೇಡಿದ ವರ ನೀಡುವ ತಾಯಿ ಎನ್ನುವ ಪತ್ರೀತಿ ಈ ದೇವಿಗೆ ಇದೆ. ಹೀಗಾಗಿ ಕಲ್ಲೂರು ದೇವಸ್ಥಾನಕ್ಕೆ ನಿತ್ಯವೂ ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವಸ್ಥಾನದಲ್ಲಿ ತೆಂಗಿನಕಾಯಿ ಕಟ್ಟಿ ಹೋಗುವುದು ವಾಡಿಕೆ.

ಸಿಎಂ ಹುದ್ದೆಗೆ ಬಿಎಸ್‌ವೈ: ಶಿವಮೊಗ್ಗ ಕಾರ್ಯಕರ್ತರಿಂದ ರುದ್ರಾಭಿಷೇಕ

ಹೀಗೆ ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನ ರಾಜಶೇಖರ್ ಪಾಟೀಲ್ ಎಂಬುವರು ಕೂಡ ಯಡಿಯೂರಪ್ಪ ಸಿಎಂ ಆಗಬೇಕೆಂದು ದೇವಾಲಯದಲ್ಲಿ ತೆಂಗಿನಕಾಯಿ ಕಟ್ಟಿದ್ರು. ಇವತ್ತು ಶುಕ್ರವಾರ ಇರುವುದರಿಂದ ಯಡಿಯೂರಪ್ಪ ಅವರ ಹೆಸರಿನಲ್ಲಿ ಇಡೀ ದಿನ ಪೂಜೆ ಮಾಡಿಸಲು ಮುಂದಾಗಿದ್ರು. ಇತ್ತ ಕಲ್ಲೂರು ಮಹಾಲಕ್ಷ್ಮಿ ದೇಗುಲದಲ್ಲಿ ಪೂಜೆ ಆರಂಭ ಆಗುತ್ತಲ್ಲೇ ಅತ್ತ ಬೆಂಗಳೂರಿನಲ್ಲಿ ಯಡ್ಡಿಯೂರಪ್ಪ ಸಿಎಂ ಪದಗ್ರಹಣದ ಸಮಯ ಘೋಷಣೆ ಮಾಡಲಾಗಿತ್ತು.

350 ವರ್ಷ ಹಳೆಯ ದೇವಸ್ಥಾನ:

ಕಲ್ಲೂರು ವರಮಹಾಲಕ್ಷ್ಮಿ ದೇಗುಲಕ್ಕೆ ಸರಿಸುಮಾರು 350ವರ್ಷಗಳ ಇತಿಹಾಸ ಇದ್ದು, ಈ ದೇವಾಲಯಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಧರಂಸಿಂಗ್ ಸಹ ಈ ದೇವಿ ಬಳಿ ಹರಕೆ ಹೊತ್ತ ಬಳಿಕವೇ ಸಿಎಂ ಆಗಿದ್ರು. ಯಡಿಯೂರಪ್ಪ ಕೂಡ ಈ ದೇಗುಲಕ್ಕೆ ಚುನಾವಣೆ ಪ್ರಚಾರದ ವೇಳೆಯಲ್ಲಿ ಬಂದು ತೆಂಗಿನಕಾಯಿ ಕಟ್ಟಿ ಹರಕೆ ಹೊತ್ತು ಹೋಗಿದ್ರು. ಸಿಎಂ ಆಗುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅಭಿಮಾನಿಯೊಬ್ಬ ಇವತ್ತು ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಮಾಡಿಸಿ ಹರಕೆ ತಿರಿಸಿದ್ರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಟ್ಟಿನಲ್ಲಿ ಹತ್ತಾರು ರಾಜಕೀಯ ರಂಪಾಟಗಳ ಬಳಿಕ ಮತ್ತೆ ಯಡಿಯೂರಪ್ಪ ರಾಜ್ಯದ ಸಿಎಂ ಆಗಿ ಇವತ್ತು ಪ್ರಮಾಣ ವಚನ ಸ್ವೀಕರಿಸಲು ಮುಂದಾಗಿದ್ದಾರೆ. ಇತ್ತ ಯಡಿಯೂರಪ್ಪ ಅಭಿಮಾನಿಗಳು ತಮ್ಮ ನಾಯಕ ಸಿಎಂ ಆಗಲು ಮಹಾಲಕ್ಷ್ಮಿ ದೇವಿ ಮಹಿಮೆಯೇ ಕಾರಣ ಅಂತ ಹರಕೆ ಹೊತ್ತ ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆ ಅರ್ಪಿಸಿದ್ರು.

PREV
click me!

Recommended Stories

ಕಾರವಾರ: ಉಂಡ‌ ಮನೆಗೆ ದ್ರೋಹ; ಮನೆ ಕೆಲಸದವನಿಂದಲೇ ಲಕ್ಷಾಂತರ ರೂಪಾಯಿ ಕದ್ದವನ ಬಂಧನ
ಬೆಂಗಳೂರಿನಲ್ಲಿ ಇಷ್ಟೊಂದು ಚಳಿಗೆ ಕಾರಣವೇನು? ಮುಂದಿನ ಮೂರು ದಿನ ಉತ್ತರ ಕರ್ನಾಟಕದಲ್ಲಿ ಶೀತಗಾಳಿ!