ಭಜರಂಗದಳದವರು ರೌಡಿಗಳಾಗಿದ್ದು ದೇಶ, ಧರ್ಮಕ್ಕೋಸ್ಕರ: ಸುನೀಲ್ ಕೆ.ಆರ್

Published : Nov 20, 2023, 09:35 PM IST
ಭಜರಂಗದಳದವರು ರೌಡಿಗಳಾಗಿದ್ದು ದೇಶ, ಧರ್ಮಕ್ಕೋಸ್ಕರ: ಸುನೀಲ್ ಕೆ.ಆರ್

ಸಾರಾಂಶ

ಭಜರಂಗದಳದ ಪ್ರಾಂತ ಸಂಯೋಜಕ್ ಆಗಿರೋ ಸುನೀಲ್ ಕೆ.ಆರ್ ಮಾತನಾಡಿ, ದೇಶದ ಪರ ಕೆಲಸ ಮಾಡೋರ ವಿರುದ್ದ ಇಂಥದ್ದು ನಡೆಯುತ್ತಲೇ ಇದೆ. ಹಿಂದೂ ಸಮಾಜವನ್ನ ಜಾಗೃತಿ ಮಾಡೋ ಕೆಲಸ ಭಜರಂಗದಳ ಮಾಡ್ತಿದೆ: ಸುನೀಲ್ ಕೆ.ಆರ್ 

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು(ನ.20):  ಭಜರಂಗದಳದವರಿಗೆ ರೌಡಿಸಂ ಪಟ್ಟ ಕಟ್ತೀರಲ್ವಾ? ಹೌದು ನಾವು ರೌಡಿಗಳೇ. ಆದರೆ ಯಾಕೆ ರೌಡಿಗಳಾಗಿದ್ದೀವಂದ್ರೆ ಈ ದೇಶ ಮತ್ತು ನಮ್ಮ ಧರ್ಮಕ್ಕೋಸ್ಕರ. ಯಾವುದೇ ಅತ್ಯಾಚಾರ, ಕೊಲೆ ಮಾಡಿ ನಾವು ರೌಡಿಗಳಾಗಿದ್ದಲ್ಲ ಎಂದು ಪುತ್ತೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ದ ಸುನೀಲ್ ಕೆ.ಆರ್ ವಾಗ್ದಾಳಿ ನಡೆಸಿದ್ದಾರೆ. 

ಪುತ್ತೂರಿನ ಭಜರಂಗದಳ ಕಾರ್ಯಕರ್ತರ ವಿರುದ್ದ ಗಡಿಪಾರು ನೊಟೀಸ್ ವಿಚಾರ ಸಂಬಂಧಿಸಿ ಪುತ್ತೂರಿನ ಮಿನಿ ವಿಧಾನ ಸೌಧದ ಎದುರು ನಡೆದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು. ಭಜರಂಗದಳದ ಪ್ರಾಂತ ಸಂಯೋಜಕ್ ಆಗಿರೋ ಸುನೀಲ್ ಕೆ.ಆರ್ ಮಾತನಾಡಿ, ದೇಶದ ಪರ ಕೆಲಸ ಮಾಡೋರ ವಿರುದ್ದ ಇಂಥದ್ದು ನಡೆಯುತ್ತಲೇ ಇದೆ. ಹಿಂದೂ ಸಮಾಜವನ್ನ ಜಾಗೃತಿ ಮಾಡೋ ಕೆಲಸ ಭಜರಂಗದಳ ಮಾಡ್ತಿದೆ ಎಂದು ಹೇಳಿದ್ದಾರೆ. 

ಮುನಿಸು ಮರೆತು ಒಂದಾಗಿ ಕಾಣಿಸಿದ ಕಟೀಲ್- ಕಲ್ಲಡ್ಕ ಪ್ರಭಾಕರ ಭಟ್‌

ನಾಲ್ಕು ಗೋಡೆ ಮಧ್ಯೆ ಕೂತಿರೋ ಅಸಿಸ್ಟೆಂಟ್ ಕಮಿಷನರ್ ಹೊರಗೆ ಬಂದು ಅವಲೋಕನ ಮಾಡಲಿ. ಕೊರೋನಾ ಹೊತ್ತಲ್ಲಿ ನಮ್ಮ ಕಾರ್ಯಕರ್ತರು ಸೇವೆ ಮಾಡಿದ್ದಾರೆ. ಅನಾಥ ಹೆಣಗಳನ್ನ ದಹನ ಮಾಡಿದ್ದು ಭಜರಂಗದಳ ಕಾರ್ಯಕರ್ತರು. ಮತಾಂಧ ಲವ್ ಜಿಹಾದ್ ಹುನ್ನಾರಗಳನ್ನ ಕಾರ್ಯಕರ್ತರು ತಡೆದಿದ್ದಾರೆ. ಆ ಮತಾಂಧರ ಮೇಲೆ ಪೋಸ್ಕೋ ಕೇಸ್ ಆಗಿದ್ದರೂ ಗಡೀಪಾರು ಮಾಡಿಲ್ಲ. ಅದನ್ನ ತಡೆದ ನಮ್ಮ ಕಾರ್ಯಕರ್ತರ ಮೇಲೆ ಗಡೀಪಾರು ಆದೇಶ ಮಾಡ್ತೀರಾ. ಪುತ್ತೂರಿನಲ್ಲಿ ಫ್ಲೆಕ್ಸ್ ಗೆ ಚಪ್ಪಲಿ ಹಾಕಿದ್ದಕ್ಕೆ ಕಾರ್ಯಕರ್ತರ ಮೇಲೆ ಪೊಲೀಸರೇ ಹಲ್ಲೆ ಮಾಡಿದ್ದಾರೆ. ಪುತ್ತೂರಿನಲ್ಲಿ ಭಯೋತ್ಪಾದನೆ, ಜಿಹಾದ್ ಮಾಡೋರನ್ನ ಗಡೀಪಾರು ಮಾಡಿ.‌ ಭಜರಂಗದಳದವರಿಗೆ ರೌಡಿಸಂ ಪಟ್ಟ ಕಟ್ತೀರಲ್ವಾ? ಹೌದು ನಾವು ರೌಡಿಗಳೇ. ಯಾಕೆ ರೌಡಿಗಳಾಗಿದ್ದೀವಂದ್ರೆ ಈ ದೇಶ ಮತ್ತು ನಮ್ಮ ಧರ್ಮಕ್ಕೋಸ್ಕರ.‌ ಯಾವುದೇ ಅತ್ಯಾಚಾರ, ಕೊಲೆ ಮಾಡಿ ನಾವು ರೌಡಿಗಳಾಗಿದ್ದಲ್ಲ‌. ನಮ್ಮ ಕಾರ್ಯಕರ್ತರು ಕ್ರಿಮಿನಲ್ ಲಿಸ್ಟ್ ನಲ್ಲಿ ಇರೋದು ದೇಶ ಮತ್ತು ಧರ್ಮಕ್ಕೋಸ್ಕರ.‌ ಪುತ್ತೂರು ಭಾಗದಲ್ಲಿ ನಮ್ಮ ಕಾರ್ಯಕರ್ತರು ಯಾವುದಕ್ಕೂ ಸಿದ್ದ ಎಂದು ತಿಳಿಸಿದ್ದಾರೆ.  

ನಿಮ್ಮ ಗಡೀಪಾರು, ಕೇಸ್ ಗಳಿಗೆ ಕಾರ್ಯಕರ್ತರು ವಿಚಲಿತರಾಗಲ್ಲ‌. ಕಾರ್ಯಕರ್ತರು ಮನೆ ಬಿಟ್ಟು ಹೋಗ್ತಾರೆ, ಸಂಘಟನೆಗೆ ಬರಲ್ಲ ಅನ್ನೋ ಮನಸ್ಥಿತಿ ಬೇಡ. ಭಜರಂಗದಳ ಕಾರ್ಯಕರ್ತರು ಯಾವುದೇ ಹೋರಾಟಕ್ಕೂ ಸಿದ್ದ. ಗಡೀಪಾರು ವಿಚಾರದ ಆದೇಶ ತಕ್ಷಣ ಹಿಂಪಡೆಯಬೇಕು. ಪೊಲೀಸ್ ಇಲಾಖೆ ಬಂಧುಗಳು ಕೂಡ ಹಿಂದೂಗಳ ಪರವಾಗಿ ನಿಲ್ಲಬೇಕು‌. ಪೊಲೀಸ್ ಇಲಾಖೆಯ ಹಿಂದೂ ಬಂಧುಗಳು ನಮಗೆ ಸಹಕಾರ ನೀಡಬೇಕು. ಮೇಲಿನ ಒತ್ತಡಕ್ಕೆ ಬಿದ್ದು ನೀವು ಆದೇಶ ಮಾಡಬೇಡಿ. ಗಡಿಪಾರು ಕೇಸ್ ಗಳನ್ನ ಮತ್ತೊಮ್ಮೆ ಪರಿಶೀಲನೆ ಮಾಡಿ ವಾಪಾಸ್ ಪಡೆಯಿರಿ ಎಂದರು.

ಗಡೀಪಾರು ಆದೇಶ ಖಂಡಿಸಿ ಪುತ್ತೂರಿನಲ್ಲಿ ಭಜರಂಗದಳ ಬೃಹತ್ ಪ್ರತಿಭಟನೆ ನಡೆಯಿತು. ಪುತ್ತೂರಿನ ತಾಲೂಕು ಆಡಳಿತ ಸೌಧದ ಎದುರು ಭಜರಂಗದಳ ಹಾಗೂ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ದ.ಕ ಜಿಲ್ಲೆಯ ಪುತ್ತೂರಿನ ಐವರು ಭಜರಂಗದಳ ಕಾರ್ಯಕರ್ತರಿಗೆ ಗಡೀಪಾರು ನೋಟೀಸ್ ನೀಡಲಾಗಿದ್ದು, ನವೆಂಬರ್ 22ರಂದು ಪುತ್ತೂರು ಸಹಾಯಕ ಆಯುಕ್ತರೆದುರು ಹಾಜರಾಗಲು ಸೂಚನೆ ನೀಡಲಾಗಿದೆ.ಭಜರಂಗದಳ ಕಾರ್ಯಕರ್ತರಾದ ಲತೇಶ್ ಗುಂಡ್ಯ, ಪ್ರಜ್ವಲ್, ನಿಶಾಂತ್, ಪ್ರದೀಪ್ ಮತ್ತು ದಿನೇಶ್ ಗೆ ನೋಟೀಸ್ ನೀಡಿದ್ದು, ಈ ಐವರಲ್ಲಿ ಲತೇಶ್ ಹೊರತುಪಡಿಸಿ ಉಳಿದ ನಾಲ್ಬರ ಮೇಲೆ ಒಂದೊಂದೇ ಪ್ರಕರಣಗಳಿದ್ದವು. ಕೋಮು ಗಲಭೆ, ದನಸಾಗಾಟ ಹಲ್ಲೆ, ನೈತಿಕ ಪೊಲೀಸ್ ಗಿರಿ ಸೇರಿ ಪ್ರಕರಣಗಳಲ್ಲಿ ಭಾಗಿಯಾದ ಆರೋಪವಿದೆ. ಪುತ್ತೂರು ನಗರ ಠಾಣೆ ಹಾಗೂ ಸುಳ್ಯ ಠಾಣೆಯಿಂದ ಗಡೀಪಾರಿಗೆ ಮನವಿ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸ್ ಅಧಿನಿಯಮ 1953ರ ಕಲಂ 55ರಡಿ ಗಡೀಪಾರು ನೋಟೀಸ್ ನೀಡಲಾಗಿದೆ. ‌

PREV
click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್