ಸಚಿವ ಸುಧಾಕರ್‌ ಕುಟುಂಬಕ್ಕೆ ಆರೋಗ್ಯ ಕೋರಿ ವಿಶೇಷ ಪೂಜೆ

By Kannadaprabha News  |  First Published Jun 24, 2020, 10:21 AM IST

ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ಅವರ ತಂದೆ ಸೇರಿದಂತೆ ಕುಟುಂಬದ ಸದಸ್ಯರಲ್ಲಿ ಕೊರೋನ ಸೋಂಕು ಕಾಣಿಸಿದ್ದು, ಕೂಡಲೇ ಅವರು ಗುಣಮುಖರಾಗಿ ವಾಪಸ್‌ ಬರಬೇಕೆಂದು ಪ್ರಾರ್ಥಿಸಿ ಕ್ಷೇತ್ರದಾದ್ಯಂತ ಸುಧಾಕರ್‌ ಮತ್ತು ಕೇಶವರೆಡ್ಡಿ ಅಭಿಮಾನಿಗಳು ವಿಶೇಷ ಪೂಜೆಗಳನ್ನು ಮಂಗಳವಾರ ಸಲ್ಲಿಸಿದರು.


ಚಿಕ್ಕಬಳ್ಳಾಪುರ(ಜೂ.24): ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್‌ ಅವರ ತಂದೆ ಸೇರಿದಂತೆ ಕುಟುಂಬದ ಸದಸ್ಯರಲ್ಲಿ ಕೊರೋನ ಸೋಂಕು ಕಾಣಿಸಿದ್ದು, ಕೂಡಲೇ ಅವರು ಗುಣಮುಖರಾಗಿ ವಾಪಸ್‌ ಬರಬೇಕೆಂದು ಪ್ರಾರ್ಥಿಸಿ ಕ್ಷೇತ್ರದಾದ್ಯಂತ ಸುಧಾಕರ್‌ ಮತ್ತು ಕೇಶವರೆಡ್ಡಿ ಅಭಿಮಾನಿಗಳು ವಿಶೇಷ ಪೂಜೆಗಳನ್ನು ಮಂಗಳವಾರ ಸಲ್ಲಿಸಿದರು.

ಸಚಿವ ಸುಧಾಕರ್‌ ಅವರ ತಂದೆ ಪಿ.ಎನ್‌. ಕೇಶವರೆಡ್ಡಿ, ಅವರ ಪತ್ನಿ ಪ್ರೀತಿ ಸುಧಾಕರ್‌ ಮತ್ತು ಮಗಳಿಗೆ ಸೋಂಕು ದೃಢಪಟ್ಟಿರುವುದಾಗಿ ಸ್ವತಃ ಸಚಿವರೇ ಟ್ವೀಟ್‌ ಮಾಡಿದ್ದು, ಎಲ್ಲರ ಆರೋಗ್ಯ ಸುಧಾಕರಣೆಗಾಗಿ ಪ್ರಾರ್ಥಿಸುವಂತೆ ಕೋರಿದ್ದರು.

Tap to resize

Latest Videos

ಮನೆ ದೇವರಿಗೆ 101 ತೆಂಗಿನಕಾಯಿ

ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಪೈಯಲಗುರ್ಕಿ ಗ್ರಾಮದಲ್ಲಿ ಸಚಿವ ಸುಧಾಕರ್‌ ಅವರ ಮನೆದೇವರ ದೇವಾಲಯವಿದ್ದು, ಚೆನ್ನಕೇಶವಸ್ವಾಮಿ ದೇವಾಲಯದಲ್ಲಿ ಕೇಶವರೆಡ್ಡಿಯವರ ಅಭಿಮಾನಿಗಳು 101 ತೆಂಗಿನಕಾಯಿ ಒಡೆದು ಸುಧಾಕರ್‌ ಕುಟುಂಬ ಶೀಘ್ರ ಕೊರೋನದಿಂದ ಮುಕ್ತಿ ಹೊಂದುವಂತೆ ಮಾಡುಬೇಕೆಂದು ದೇವರಲ್ಲಿ ಕೋರಿದರು. ಈ ಸಂದರ್ಭದಲ್ಲಿ ಮುಖಂಡರಾದ ಚಿಕ್ಕಗರಿಗಿರೆಡ್ಡಿ, ಗುತ್ತಿಗೆದಾರ ಗಿರೀಶ್‌, ತಾಪಂ ಸದಸ್ಯ ತಿರುಮಳಪ್ಪ ಸೇರಿದಂತ ಇತರರು ಇದ್ದರು.

ಆಂಜನೇಯಸ್ವಾಮಿಗೆ ವಿಶೇಷ ಪೂಜೆ

ಚಿಕ್ಕಬಳ್ಳಾಪುರ ನಗರದ ಸುಧಾಕರ್‌ ಅಭಿಮಾನಿಗಳಿಂದ ನಗರ ಹೊರವಲಯದ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷಪೂಜೆ ಸಲ್ಲಿಸುವ ಜೊತೆಗೆ 101 ತೆಂಗಿನಕಾಯಿ ಒಡೆದು ಪ್ರಾರ್ಥನೆ ಮಾಡಿದರು. ಮಂಚನಬಲೆ ಗ್ರಾಮದ ವೀರಭದ್ರಸ್ವಾಮಿ ಮತ್ತು ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, 82 ತೆಂಗಿನಕಾಯಿ ಈಡಗಾಯಿ ಒಡೆದರು.

ತಂದೆ ಬೆನ್ನಲ್ಲೇ ಸಚಿವ ಸುಧಾಕರ್ ಹೆಂಡತಿ, ಮಗಳಿಗೆ ಕೊರೋನಾ ಸೋಂಕು ದೃಢ!

ಈ ಸಂದರ್ಭದಲ್ಲಿ ಗ್ರಾಮದ ತಾಪಂ ಮಾಜಿ ಅಧ್ಯಕ್ಷ ವೆಂಕಟನಾರಾಯಣಪ್ಪ, ಜಿಪಂ ಸದಸ್ಯ ಮರಳುಕುಂಟೆ ಕೃಷ್ಣಮೂರ್ತಿ, ಎಂಎಸ್‌ಐಎಲ್‌ ಮಾಜಿ ನಿರ್ದೆಶಕ ಎಂ.ಎಸ್‌. ಶ್ರೀಧರ್‌, ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್‌, ಮಂಜುನಾಥ್‌, ನಾರಾಯಣಸ್ವಾಮಿ, ರಮೇಶ್‌, ಶಿವನಂಜಯ್ಯ, ಅಭಿಷೇಕ್‌, ನಂಜಪ್ಪ ಸೇರಿದಂತೆ ಇತರರು ಹಾಜರಿದ್ದರು.

click me!