ಗದಗ: ಮಾನವ ಸರಪಳಿ ನಿರ್ಮಿಸಿ ತೆರಳುತ್ತಿದ್ದರ ಮೇಲೆ ಹೆಜ್ಜೇನು ದಾಳಿ, ದಿಕ್ಕಾಪಾಲಾಗಿ ಓಡಿದ ವಿದ್ಯಾರ್ಥಿಗಳು..!

By Girish Goudar  |  First Published Sep 15, 2024, 11:32 AM IST

ಜೇನು‌ ದಾಳಿಯಿಂದ ರಕ್ಷಿಸಿಕೊಳ್ಳಲು ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ರಸ್ತೆ ಬಿಟ್ಟು ಜಮೀನಿನಲ್ಲಿ ಓಡಿಹೋಗಿ ರಕ್ಷಣೆ ಪಡೆಯಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ.  ಹೆಜ್ಜೇನು ದಾಳಿ ಹೆಚ್ಚಾದ ಹಿನ್ನೆಲೆಯಲ್ಲಿ ಗುಡಾರ ಹೊತ್ತು ರಕ್ಷಣೆ ಪಡೆದಿದ್ದಾರೆ. 


ಗದಗ(ಸೆ.15):  ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಪ್ರಯುಕ್ತ ನಡೆದ ಮಾನವ ಸರಪಳಿ ನಿರ್ಮಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಬಾಲೆಹೊಸೂರು ಗ್ರಾಮದಿಂದ ಆರಂಭವಾಗಿ ಮುಂಡರಗಿ ಮಾರ್ಗಾವಾಗಿ ಕೊಪ್ಪಳದ ಅಳವಂಡಿ ವರೆಗೆ ಮಾನವ ಸರಪಳಿ ನಡೆದಿದೆ.  ಗದಗ ಜಿಲ್ಲೆಯಲ್ಲಿ ಒಟ್ಟು 61 ಕಿಲೋ ಮೀಟರ್ ಬೃಹತ್ ಮಾನವ ಸರಪಳಿ ಮಾಡಲಾಗಿದೆ. 

ಮಾನವ ಸರಪಳಿ ಕಾರ್ಯಕ್ರಮ ಮುಗಿಸಿ ಮನೆಗೆ ಹೊರಟಿದ್ದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಬಾಲೆಹೊಸೂರು ಗ್ರಾಮದಿಂದ ಹೊರವಲಯದಲ್ಲಿ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ. 
ಜೇನು‌ ದಾಳಿಯಿಂದ ರಕ್ಷಿಸಿಕೊಳ್ಳಲು ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ರಸ್ತೆ ಬಿಟ್ಟು ಜಮೀನಿನಲ್ಲಿ ಓಡಿಹೋಗಿ ರಕ್ಷಣೆ ಪಡೆಯಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ.  ಹೆಜ್ಜೇನು ದಾಳಿ ಹೆಚ್ಚಾದ ಹಿನ್ನೆಲೆಯಲ್ಲಿ ಗುಡಾರ ಹೊತ್ತು ರಕ್ಷಣೆ ಪಡೆದಿದ್ದಾರೆ. 

Tap to resize

Latest Videos

undefined

ಕೊಪ್ಪಳ: ಕ್ರೀಡಾ ಕೂಟದ ವೇಳೆ ಹೆಜ್ಜೇನು ದಾಳಿ, 8 ಮಕ್ಕಳಿಗೆ ಗಂಭಿರ ಗಾಯ..!

ಬಯಲು ಪ್ರದೇಶದಲ್ಲಿ‌ ಜೇಜು ದಾಳಿ ಮಾಡಿದ್ದಕ್ಕೆ ವಿದ್ಯಾರ್ಥಿಗಳೆಲ್ಲ ಹೈರಾಣಾಗಿದ್ದಾರೆ. 15 ಕ್ಕೂ ವಿದ್ಯಾರ್ಥಿಗಳಿಗೆ ಹೆಜ್ಜೇನು ಕಡಿದಿವೆ. ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿ, ಶಿಕ್ಷಕರ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಶಿಕ್ಷಕಿಯರು ಸೇರಿದಂತೆ 15 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. 

ಸರಸ್ವತಿ ಗುಡಿಸಾಗರ, ಸರೋಜಾ ದಿಂಡೂರು ಶಿಕ್ಷಕಿಯರು ಅಸ್ವಸ್ಥಗೊಂಡಿದ್ದಾರೆ. ಈ ವೇಳೆ ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಕಾರ್ ನಲ್ಲಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಸ್ವತಃ ಶಾಸಕ ಚಂದ್ರು ಲಮಾಣಿ ಅವರೇ ಶಿಕ್ಷಕಿಯರಿಗೆ ಚಿಕಿತ್ಸೆ ಮಾಡಿದ್ದಾರೆ. 

click me!