ಕೋಟೆನಾಡಲ್ಲಿ ಬೀದಿನಾಯಿಗಳ ಹಾವಳಿ; ಮನೆಗೆ ನುಗ್ಗಿ ದಾಳಿ ಮಾಡ್ತಿದ್ರೂ ಕಣ್ಮುಚ್ಚಿ ಕುಳಿತ ನಗರಸಭೆ!

Published : Jan 31, 2023, 03:11 PM IST
ಕೋಟೆನಾಡಲ್ಲಿ ಬೀದಿನಾಯಿಗಳ ಹಾವಳಿ; ಮನೆಗೆ ನುಗ್ಗಿ ದಾಳಿ ಮಾಡ್ತಿದ್ರೂ ಕಣ್ಮುಚ್ಚಿ ಕುಳಿತ ನಗರಸಭೆ!

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಜನರಿಗೆ ನಾಯಿಗಳ ಮೇಲಿನ ಪ್ರೀತಿ ಹೆಚ್ಚಾಗ್ತಿದೆ. ಅದಕ್ಕಾಗಿಯೇ ಅನೇಕ ಮಂದಿ ವಿವಿಧ ಜಾತಿಯ ನಾಯಿಗಳನ್ನು ಮನೆಗೆ ತಂದು ಸಾಕಲು ಶುರು ಮಾಡಿದ್ದಾರೆ. ಆದ್ರೆ ಬಡಾವಣೆಯಲ್ಲಿರುವ ಬೀದಿ ನಾಯಿಗಳನ್ನು ಕಂಡ್ರೆ ಸಾಕು ಚಿತ್ರದುರ್ಗ ನಗರದ ಬಹುತೇಕ ಬಡಾವಣೆಯ ಜನರು ಹೆದರಿ ಮನೆಯಿಂದ ಹೊರಬರುವುದಕ್ಕೂ ಹೆದರುತ್ತಿದ್ದಾರೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜ.31) ಇತ್ತೀಚಿನ ದಿನಗಳಲ್ಲಿ ಜನರಿಗೆ ನಾಯಿಗಳ ಮೇಲಿನ ಪ್ರೀತಿ ಹೆಚ್ಚಾಗ್ತಿದೆ. ಅದಕ್ಕಾಗಿಯೇ ಅನೇಕ ಮಂದಿ ವಿವಿಧ ಜಾತಿಯ ನಾಯಿಗಳನ್ನು ಮನೆಗೆ ತಂದು ಸಾಕಲು ಶುರು ಮಾಡಿದ್ದಾರೆ. ಆದ್ರೆ ಬಡಾವಣೆಯಲ್ಲಿರುವ ಬೀದಿ ನಾಯಿಗಳನ್ನು ಕಂಡ್ರೆ ಸಾಕು ಚಿತ್ರದುರ್ಗ ನಗರದ ಬಹುತೇಕ ಬಡಾವಣೆಯ ಜನರು ಹೆದರಿ ಮನೆಯಿಂದ ಹೊರಬರುವುದಕ್ಕೂ ಹೆದರುತ್ತಿದ್ದಾರೆ.

ಕಳೆದ ಒಂದು ತಿಂಗಳಿಂದ ಚಿತ್ರದುರ್ಗ(Chitradurga)ದ ಗಾಂಧಿ ನಗರ, ಸಾದಿಕ್‌ನಗರ, ಕೆಳಗೋಟೆ, ಬುದ್ದ ನಗರ, ಸರಸ್ವತಿ ಪುರಂ ಇನ್ನಿತರ ಬಡಾವಣೆಯ ಜನರು ರಾತ್ರಿ ವೇಳೆ ತಮ್ಮ ಮನೆಗಳಿಗೆ ತೆರಳೋದಕ್ಕೂ ಆತಂಕ ಪಡುವ ವಾತಾವರಣ ಸೃಷ್ಟಿಯಾಗಿದೆ‌‌. 

stray dogs attack: ಭಿಕ್ಷುಕಿಯನ್ನು ಎಳೆದಾಡಿ ಕೊಂದ ರಕ್ಕಸ ಬೀದಿನಾಯಿಗಳ ಹಿಂಡು!

ಇದಕ್ಕೆಲ್ಲ ಮೂಲ ಕಾರಣವೇ ಬೀದಿ ನಾಯಿಗಳ ಹಾವಳಿ(stray dogs). ರಸ್ತೆ ಮೇಲೆ ಬೈಕ್ ಹಾಗು ಕಾರ್ ಗಳಲ್ಲಿ ಜನರು ಹೋಗುವಂತೆಯೇ ಇಲ್ಲ; ಏಕಾಏಕಿ ಬೀದಿ ನಾಯಿಗಳು ಬಂದು ಅಟ್ಯಾಕ್ ಮಾಡುತ್ತವೆ. ಎಷ್ಟೇ ಬಾರಿ ಜನರು ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಬೀದಿ ನಾಯಿಗಳ ಹಾವಳಿಯಿಂದಾಗಿ ಚಿಕ್ಕ ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸಲಿಕ್ಕೂ ಪೋಷಕರು ಆತಂಕ ಪಡ್ತಿದ್ದಾರೆ. ಶಾಲೆಗೆ ಹೋದ ಮಗು ಎಷ್ಟು ಬೇಗ ಬಂದು ಮನೆ ಸೇರುತ್ತೋ ಎಂಬ ಆತಂಕದಲ್ಲೇ ನಿತ್ಯ ಕಾಯುವ ಸ್ಥಿತಿ ಪೋಷಕರದು. 

ಬೀದಿ ನಾಯಿಗಳ ಹಾವಳಿ ನೆನ್ನೆ ಮೊನ್ನೆಯದಲ್ಲ, ಇದು ಸುಮಾರು ಒಂದು ತಿಂಗಳಿಂದ ನಗರದ ಪ್ರಮುಖ ಬಡಾವಣೆಗಳಲ್ಲಿ ಜನರ ಮೇಲೆ ಅಟ್ಯಾಕ್ ಮಾಡುತ್ತಲೇ ಇವೆ. ಈ ಕುರಿತು ಸ್ಥಳೀಯರು ಅನೇಕ ಬಾರಿ ನಗರಸಭೆ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಕೂಡಲೇ ಬೀದಿ ನಾಯಿಗಳನ್ನು ಬಂಧಿಸಿ ಜನರ ನೆಮ್ಮದಿ ಕಾಪಾಡಿ ಎಂದು ಗೋಗರದಿದ್ದಾರೆ. ಆದ್ರೂ ಅಧಿಕಾರಿಗಳು ಮಾತ್ರ ಸೈಲೆಂಟ್ ಆಗಿ ಇರೋದು ಇಂತಹ ಅನೇಕ ಘಟನೆಗಳಿಗೆ ಎಡೆಮಾಡಿಕೊಟ್ಟಂತಾಗಿದೆ. 

ಕಾರವಾರದಲ್ಲಿ ಬೀದಿನಾಯಿಗಳದ್ದೇ ಕಾರುಬಾರು; ರಾತ್ರಿ ಓಡಾಡೋಕೆ ಹೆದರ್ತಾರೆ ಜನ

 ಗುಂಪು ಗುಂಪಾಗಿ ಬರುವ ಬೀದಿ ನಾಯಿಗಳು ಯಾವಾಗ ಯಾರ ಮೇಲೆ ದಾಳಿ ಮಾಡುತ್ತವೋ ಏನೋ.  ಬೀದಿನಾಯಿಗಳ ಹಾವಳಿಗೆ ಜನರು ಆತಂಕದಲ್ಲಿ ಓಡಾಡುತ್ತಾರೆ.. 

ಯಾವುದಾದ್ರು ಅಹಿತಕರ ಘಟನೆ ನಡೆದಾಗ ಸ್ಪಂದಿಸುವ ಅಧಿಕಾರಿಗಳು ಮೊದಲು ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕಿದೆ. ಕೂಡಲೇ ಹಲವು ಬಡಾವಣೆಯ ಜನರು ಆತಂಕ ಪಡ್ತಿರೋ ಬೀದಿ ನಾಯಿಗಳ ಕಾಟಕ್ಕೆ ಶೀಘ್ರವೇ ಮುಕ್ತಿ ಕೊಡಿಸಬೇಕಿದೆ.

PREV
Read more Articles on
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ