ಭೂಮಿಯಿಂದ ಕೇಳಿಬರುತ್ತಿದೆ ಭಯಾನಕ‌ ಶದ್ಧ: ಊರು ತೊರೆದ ಗ್ರಾಮಸ್ಥರು

Suvarna News   | Asianet News
Published : Dec 11, 2019, 11:40 AM IST
ಭೂಮಿಯಿಂದ ಕೇಳಿಬರುತ್ತಿದೆ ಭಯಾನಕ‌ ಶದ್ಧ: ಊರು ತೊರೆದ ಗ್ರಾಮಸ್ಥರು

ಸಾರಾಂಶ

ಭೂಮಿಯಲ್ಲಿ ಬರುತ್ತಿರುವ ವಿಚಿತ್ರ ಶಬ್ಧ| ಕಳೆದ ಒಂದು ತಿಂಗಳಿಂದ ಭೂಮಿಯಲ್ಲಿ‌ ಕೇಳಿ‌ ಬರುತ್ತಿರುವ ಶದ್ಧ| ಭಯಭೀತರಾಗಿ ಊರು ಬಿಟ್ಟ ಗ್ರಾಮಸ್ಥರು|ರಾತ್ರಿಯಾದರೆ ಸಾಕು ಭೂಮಿಯಲ್ಲಿ ಗುಡುಗು ರೀತಿಯಲ್ಲಿ ಶದ್ಧ ಬರುತ್ತಿದೆ|

ವಿಜಯಪುರ(ಡಿ.11): ಭೂಮಿಯಲ್ಲಿ ಬರುತ್ತಿರುವ ವಿಚಿತ್ರ ಶಬ್ಧದಿಂದ ಗ್ರಾಮಸ್ಥರು ಕಂಗಾಲಾದ ಘಟನೆ ತಿಕೋಟಾ ತಾಲೂಕಿನ ಮಲಕನದೇವರಹಟ್ಡಿ ಗ್ರಾಮದಲ್ಲಿ ನಡೆದಿದೆ. ಕಳೆದ ಒಂದು ತಿಂಗಳಿಂದ ಭೂಮಿಯಲ್ಲಿ‌ ಶದ್ಧ ಕೇಳಿ‌ ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಭಯಭೀತರಾಗಿ ಮನೆ ತೊರೆದು ಹೋಗುತ್ತಿದ್ದಾರೆ. 

ಈ ಹಿಂದೆ ಎರಡು ವರ್ಷಗಳ ಇದೇ ರೀತಿ ಶದ್ಧ ಬರುತ್ತಿತ್ತು. ರಾತ್ರಿಯಾದರೆ ಸಾಕು ಭೂಮಿಯಲ್ಲಿ ಗುಡುಗು ರೀತಿಯಲ್ಲಿ ಶದ್ಧ ಬರುತ್ತಿದೆ. ಇದರಿಂದಾಗಿ ಜನರು ಆಗಲೂ ಇದೇ ರೀತಿ ‌ಗ್ರಾಮ ತೊರೆದಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭಯಾನಕ‌ ಶದ್ಧದಿಂದ ಗ್ರಾಮದ ಬಹುತೇಕ ಮನೆಗಳು ಬಿರುಕು ಬಿಟ್ಟಿವೆ. ಮನೆಗಳು ಬಿರುಕು ಬಿಟ್ಟ ಕಾರಣ ಗ್ರಾಮಸ್ಥರು ಜೀವ ಭಯದಲ್ಲೇ ಬದುಕುತ್ತಿದ್ದಾರೆ. ಭೂಮಿಯಿಂದ ಕೇಳಿಬರುತ್ತಿರುವ ವಿಚಿತ್ರ ಶಬ್ಧದಿಂದಾಗಿ ಸಂಬಂಧಿಕರು ಊರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. 
 

PREV
click me!

Recommended Stories

ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!
'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ