ಮುಸ್ಲಿಮರೆ ನೀವು ಕಾಂಗ್ರೆಸ್ ಮಾತು ಕೇಳುವುದನ್ನು ನಿಲ್ಲಿಸಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರ. ಮೈಸೂರಿನಲ್ಲಿ ಮಾತನಾಡಿದ ಅವರು, ಈಗಲಾದರೂ ಸಬ್ ಕಾ ಸಾಥ್ ವಿಕಾಸ್ ಜೊತೆ ಬನ್ನಿ ಎಂದು ಕರೆ ನೀಡಿದ್ದಾರೆ.
ಮೈಸೂರು(ಡಿ.20): ಮುಸ್ಲಿಮರೆ ನೀವು ಕಾಂಗ್ರೆಸ್ ಮಾತು ಕೇಳುವುದನ್ನು ನಿಲ್ಲಿಸಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರ. ಮೈಸೂರಿನಲ್ಲಿ ಮಾತನಾಡಿದ ಅವರು, ಈಗಲಾದರೂ ಸಬ್ ಕಾ ಸಾಥ್ ವಿಕಾಸ್ ಜೊತೆ ಬನ್ನಿ ಎಂದು ಕರೆ ನೀಡಿದ್ದಾರೆ.
ಮುಸ್ಲಿಮರೇ ನೀವು ಕಾಂಗ್ರೆಸ್ ಮಾತನ್ನು ಕೇಳುವುದನ್ನು ನಿಲ್ಲಿಸಿ. ನಿಮ್ಮನ್ನು ಕಾಂಗ್ರೆಸ್‌ನವರು ಮೊಹಲ್ಲದಲ್ಲೇ ಇಟ್ಟಿದ್ದಾರೆ. ಈಗಲಾದರೂ ಸಬ್ ಕಾ ಸಾಥ್ ವಿಕಾಸ್ ಜೊತೆ ಬನ್ನಿ. ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಪರಿಣಾಮ ಕರ್ನಾಟಕದಲ್ಲಿ ಆಗಬಾರದು ಅಂತ ಸೆಕ್ಷನ್ 144 ಹಾಕಲಾಗಿದೆ ಎಂದು ಹೇಳಿದ್ದಾರೆ.
ಮಂಗಳೂರಲ್ಲಿ ಎಲ್ಲ ಪೆಟ್ರೋಲ್ ಬಂಕ್ ಬಂದ್..!
ನಾನು ಪೊಲೀಸರಿಗೆ ಮನವಿ ಮಾಡುತ್ತೇನೆ. ಸೆಕ್ಷನ್ 144ನ್ನು ನಾನಾಗಲಿ ಬಿಜೆಪಿಯವರಿಗಾಗಲಿ ಉಲ್ಲಂಘನೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಇತಿಹಾಸದಲ್ಲಿ ಕಾಂಗ್ರಸ್ ಮಾಡಿರುವ ದ್ರೋಹವನ್ನು ಮುಚ್ಚಿಕೊಳ್ಳಲು ಅಮಾಯಕ ಮುಸ್ಲಿಂರನ್ನ ಬಲಿಕೊಡುತ್ತಿದ್ದಾರೆ. ಮೋದಿ ಸರ್ಕಾರವಾಗಲಿ, ಯಡಿಯೂರಪ್ಪ ಸರ್ಕಾರವಾಗಲಿ ಮುಸ್ಲಿಂರ ವಿರೋಧಿಯಲ್ಲ ಎಂದಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಧಾನಿಮೋದಿ ಎಲ್ಲಾ ಸಂಧರ್ಭದಲ್ಲೂ ಬಂದು ಮಾತನಾಡಲು ಸಾಧ್ಯವಿಲ್ಲ. ದೇಶದ ಜನರಿಗೆ ತೊಂದರೆಯಾಗಲ್ಲ ಎಂದು ಹೇಳಿದ್ದಾರೆ. ಅಮಿತ್ ಶಾ ಕೂಡ ಸ್ಪಷ್ಟವಾಗಿ ಲೋಕಸಭೆಯಲ್ಲಿ ಮಾತನಾಡಿದ್ದಾರೆ. ಬಿಜೆಪಿಯವರು ಈ ಬಗ್ಗೆ ಅಭಿಯಾನ ಮಾಡುತ್ತೇವೆ. ಮಾಧ್ಯಮಗಳ ಸಹಕಾರ ಕೇಳುತ್ತೇನೆ ಎಂದು ಹೇಳಿದ್ದಾರೆ.
ಮಂಗಳೂರು ಹಿಂಸಾಚಾರ ಪೊಲೀಸರ ಪ್ಲಾನ್ ಎಂದ ಎಂಎಲ್‌ಸಿ