Chitradurga News: ಕೊಳಚೆ ನೀರಿನಿಂದ ದುರ್ಗಂಧ; ಗ್ರಾಪಂ ನಿರ್ಲಕ್ಷ್ಯ ಆರೋಪ

By Kannadaprabha News  |  First Published Dec 25, 2022, 7:52 AM IST

ತಾಲೂಕಿನ ಸೋಮಗುದ್ದು ಗ್ರಾಮದಲ್ಲಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ಸಮುದಾಯ ಭವನ ಮತ್ತು ಅಂಗನವಾಡಿ ಕೇಂದ್ರದ ಸುತ್ತಲು ಮನೆಗಳಿಂದ ಬರುವ ಮಲಿನವಾದ ನೀರು ಎಲ್ಲೆಡೆ ಆವರಿಸಿ ದುರ್ವಾಸನೆ ಬೀರುತ್ತಿದ್ದು, ಇದರಿಂದ ಸುತ್ತಮುತ್ತಲ ನಿವಾಸಿಗಳಿಗೆ ತೊಂದರೆಯಾಗಿದೆ. ಅಲ್ಲದೆ, ಅಂಗನವಾಡಿ ಕೇಂದ್ರಕ್ಕೆ ಬರುವ ಪುಟ್ಟಮಕ್ಕಳಿಗೂ ಸಹ ರೋಗದ ಭಯ ಉಂಟಾಗಿದೆ.


ಚಳ್ಳಕೆರೆ (ಡಿ.25) : ತಾಲೂಕಿನ ಸೋಮಗುದ್ದು ಗ್ರಾಮದಲ್ಲಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ಸಮುದಾಯ ಭವನ ಮತ್ತು ಅಂಗನವಾಡಿ ಕೇಂದ್ರದ ಸುತ್ತಲು ಮನೆಗಳಿಂದ ಬರುವ ಮಲಿನವಾದ ನೀರು ಎಲ್ಲೆಡೆ ಆವರಿಸಿ ದುರ್ವಾಸನೆ ಬೀರುತ್ತಿದ್ದು, ಇದರಿಂದ ಸುತ್ತಮುತ್ತಲ ನಿವಾಸಿಗಳಿಗೆ ತೊಂದರೆಯಾಗಿದೆ. ಅಲ್ಲದೆ, ಅಂಗನವಾಡಿ ಕೇಂದ್ರಕ್ಕೆ ಬರುವ ಪುಟ್ಟಮಕ್ಕಳಿಗೂ ಸಹ ರೋಗದ ಭಯ ಉಂಟಾಗಿದೆ.

ಇತ್ತೀಚಿಗಷ್ಟೇ ಮತ್ತೆ ಕೊರೋನಾ ಸೋಂಕು ಕಾಣಲು ಆರಂಭಿಸಿದ್ದು, ಈ ಕೊಳಚೆ ನೀರು ಮತ್ತು ದುರ್ವಾಸನೆಯಿಂದ ಸುತ್ತಮುತ್ತಲ ನೂರಾರು ಜನರಿಗೆ ತೊಂದರೆಯಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಒ ರವರಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

Latest Videos

undefined

Chitradurga: ಚಿರತೆ ಪ್ರತ್ಯಕ್ಷ, ಕುರುಡಿಹಳ್ಳಿ ಗ್ರಾಮದ ಜನರಲ್ಲಿ ಮೂಡಿದ ಆತಂಕ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಗೂ ಅನುದಾನ ನೀಡುತ್ತಿದ್ದರೂ, ಈ ಅನುದಾನವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು ಪಂಚಾಯಿತಿ ಆಡಳಿತ ವಿಫಲವಾಗಿದೆ ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ. ಹೀಗೆಂದು ಆರೋಪಿಸಿರುವ ಗ್ರಾಮಸ್ಥರಾದ ಜೆ.ಟಿ. ನಾಗಭೂಷಣ್‌, ಟಿ. ವಿಶ್ವನಾಥ, ಕೂಡಲೇ ಚರಂಡಿ ನಿರ್ಮಿಸಿ ಈ ಅವ್ಯವಸ್ಥೆ ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

click me!