ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಭಾಗಿಯಾದವರನ್ನು ಪೊಲೀಸ್ ಇಲಾಖೆ ಬಂಧಿಸುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು ಬಂಧಿಸುತ್ತಿರುವ ಅಮಾಯಕರು ಎನ್ನುವ ಕುರಿತು ಜೆಡಿಎಸ್, ಕಾಂಗ್ರೆಸ್ ನಾಯಕರ ಹೇಳಿಕೆಗೆ ಹಿಂದೂಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.18): ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ Hubballi Riots) ಭಾಗಿಯಾದವರನ್ನು ಪೊಲೀಸ್ ಇಲಾಖೆ (Police Department) ಬಂಧಿಸುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು ಬಂಧಿಸುತ್ತಿರುವ ಅಮಾಯಕರು ಎನ್ನುವ ಕುರಿತು ಜೆಡಿಎಸ್, ಕಾಂಗ್ರೆಸ್ ನಾಯಕರ ಹೇಳಿಕೆಗೆ ಹಿಂದೂಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ (Congress), ಜೆಡಿಎಸ್ (JDS) ಮುಖಂಡರ ಹೇಳಿಕೆಗೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಕಿಡಿಕಾರಿದ್ದಾರೆ.
ಇದು ಪ್ರೀ ಪ್ಲಾನ್ ಗಲಾಟೆ: ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣ ಪ್ರೀ ಪ್ಲಾನ್ ಗಲಾಟೆಯಾಗಿದ್ದು, ಹನುಮ ಜಯಂತಿ ದಿನದಂದು ದೇವಸ್ಥಾನ, ಪೊಲೀಸ್ ಠಾಣೆಗೆ ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನು ಪ್ಲಾನ್ ಮಾಡಿಯೇ ಗಲಾಟೆ ಮಾಡಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತಾಡಿ ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದವರ ಮೇಲೆ ಗೂಂಡಾ ಆಕ್ಟ್ ಹಾಗೂ ಮೋಕಾ ಕಾಯ್ದೆಯ ಅಡಿಯಲ್ಲಿ ಕೇಸ್ ದಾಖಲಿಸಬೇಕೆಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಮುಸ್ಲಿಂ ವ್ಯಾಪಾರಿಗಳ ಬಗ್ಗೆ ತಮ್ಮ ಖಡಕ್ ನಿಲುವು ಪ್ರಕಟಿಸಿದ್ದ ಶ್ರೀಗಳಿಗೆ ಮುತಾಲಿಕ್ ಅಭಿನಂದನೆ
ಕುಮಾರಸ್ವಾಮಿ ಹೇಳಿಕೆಗೆ ಕಿಡಿ: ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ವಿಚಾರದಲ್ಲಿ ಪೊಲೀಸರು ಕೆಲ ಅಮಾಯಕರನ್ನು ಬಂಧಿಸುತ್ತಿದ್ದಾರೆ ಎನ್ನುವ ಹೇಳಿಕೆಗೆ ಮುತಾಲಿಕ್ ಕಿಡಿಕಾರಿದರು. ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದವರು ಯಾರು ಅಮಾಯಕರಲ್ಲ ಎಲ್ಲಾರು ಗಲಾಟೆ ಮಾಡಿದವರೇ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು. ಕಾಂಗ್ರೆಸ್‌ನವರು ಯಾವಾಗಲೂ ಕೂಡ ಮುಸ್ಲಿಮರನ್ನು ಅಮಾಯಕರು ಎಂದೇ ಹೇಳುವುದು ಇದರಲ್ಲಿ ಯಾವುದೇ ಹೊಸತು ಇಲ್ಲ, ಕಾಂಗ್ರೆಸ್ ನಾಯಕರು ಗಲಾಟೆ ಮಾಡಿದ ಮುಸ್ಲಿಂರನ್ನು (Muslim) ಅಮಾಯಕರು ಎನ್ನುವುದೇ ಒಂದು ಸ್ಟ್ಯಾಂಡ್ ಎಂದು ಲೇವಡಿ ಮಾಡಿದರು.
ಇನ್ನು ಕುಮಾರಸ್ವಾಮಿ ಹೇಳಿಕೆಗೆ ಕೆಂಡಮಂಡಲರಾದ ಮುತಾಲಿಕ್, ಕುಮಾರಸ್ವಾಮಿ ಅವರೇ ನಾಚಿಕೆ ಆಗಲ್ವಾ ನಿಮಗೆ, ಗಲಾಟೆಯಲ್ಲಿ ಭಾಗಿಯಾದವರು ಅಮಾಯಕರೇ ಕುಮಾರಸ್ವಾಮಿ ಅವರೇ ಎಂದು ಆಕ್ರೋಶವನ್ನು ಹೊರಹಾಕಿದರು. ಹೋಮ ಹವನ ಮಾಡುವಂತಹ ನೀವು (ಕುಮಾರಸ್ವಾಮಿ ) ಪೋಲಿಸ್ ಸ್ಟೇಷನ್ ಮೇಲೆ ದೇವಸ್ಥಾನದ ಮೇಲೆ ಕಲ್ಲು ತೋರಿದವರು ಅಮಾಯಕರೆಂದು ಹೇಳುತ್ತಿರುವದನ್ನು ಖಂಡಿಸಿದರು. ಈಗಾಗಲೇ ಮುಸ್ಲಿಮರ ಪರ ನಿಂತು ಕಾಂಗ್ರೆಸ್ ನೆಲಕಚ್ಚಿದೆ, ಕುಮಾರಸ್ವಾಮಿಯವರೇ ಮುಂದಿನ ದಿನಗಳಲ್ಲಿ ಇದೇ ನಿಲುವು ಅನುಸರಿಸಿದರೆ ಜೆಡಿಎಸ್ ಕೂಡ ನೆಲಕಚ್ಚುತ್ತೆ ಎಂದು ಕುಮಾರಸ್ವಾಮಿಗೆ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.
ಬಸವರಾಜ್ ಬೊಮ್ಮಾಯಿ ಅವರೇ ಯೋಗಿ ತರಹ ಮೈ ಕೊಡವಿ ನಿಲ್ಲಿ: ರಾಜ್ಯದಲ್ಲಿ ನಡೆಯುತ್ತಿರುವ ಕೋಮುಗಲಭೆ, ಗಲಾಟೆ ಪ್ರಕರಣಗಳು ಬಗ್ಗೆ ಸಿಎಂ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕೆಂದು ಮುತಾಲಿಕ್ ಒತ್ತಾಯಿಸಿದರು. ರಾಜ್ಯದಲ್ಲೂ ಉತ್ತರ ಪ್ರದೇಶ, ಮಧ್ಯಪ್ರದೇಶದ ರೀತಿಯಲ್ಲಿ ಆಡಳಿತ ನಡೆಸಬೇಕು, ಯೋಗಿ ತರಹ ಮೈ ಕೊಡವಿ ನಿಲ್ಲಿ ಬಸವರಾಜ್ ಬೊಮ್ಮಾಯಿ ಅವರೇ ಎಂದು ಒತ್ತಾಯಿಸಿದರು. ಹುಬ್ಬಳ್ಳಿಯಲ್ಲೂ ಕೂಡ ಅಕ್ರಮ ಮನೆಗಳಿವೆ, ಅಲ್ಲಿರೋ ಅಕ್ರಮ ಮನೆಗಳಿವೆ ಅದನ್ನು ಕಿತ್ತು ಬಿಸಾಕಿ ಎಂದರು. ಯಾರು ಅಮಾಯಕರಲ್ಲ ಎಲ್ಲರೂ ಗುಂಡಾಗಳೇ ಈ ರೀತಿ ಕೆಲಸವನ್ನು ಮಾಡಿದ್ದುಮ ಸರ್ಕಾರ ಸರಿಯಾದ ಕ್ರಮ ತೆಗೆದುಕೊಂಡು ಪೊಲೀಸರು ತನಿಖೆಯನ್ನು ನಡೆಸಬೇಕೆಂದರು. ಹುಬ್ಬಳ್ಳಿ ಗಲಾಟೆಗೆ ಅಲ್ಲಿನ ಕಾಂಗ್ರೆಸ್ ಶಾಸಕ ಅಬ್ಬಯ್ಯ ಅವರು ಹೊಣೆಗಾರರು ಎಂದು ಆರೋಪಿಸಿದರು.
Pramod Muthalik ಹಿಂದೂ ಸಂಘಟನೆಗಳಿಗೆ ಕಿರಿಕಿರಿ ನೀಡಿದರೆ ಬಿಜೆಪಿಗೆ ಅನಾಹುತ!
ಬುದ್ದಿ ಜೀವಿಗಳು ಮುಸ್ಲಿಂ ಕ್ರಿಶ್ವಿಯನರ ಏಜೆಂಟ್‌ಗಳು: ರಾಜ್ಯದಲ್ಲಿ ಹಿಜಾಬ್, ಹಲಾಲ್ ಕಟ್ ವಿವಾದದಿಂದ ಮುಸ್ಲಿಂ ಸಮಾಜ ಹತಾಶಯಾಗಿದ್ದಾರೆ ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ ಈ ಕಾರಣಕ್ಕಾಗಿ ಮುಸ್ಲಿಂ ಯುವಕರು ಗಲಾಟೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಇಂತವರನ್ನು ಮೌಲ್ವಿಗಳು ಹದ್ದು ಬಸ್ತಿನಲ್ಲಿ ಇಡಬೇಕೆಂದು ಸಲಹೆ ನೀಡಿದರು. ಇನ್ನು ಹುಬ್ಬಳ್ಳಿಯಲ್ಲಿ ನಡೆದ ಗಲಾಟೆ ಬಗ್ಗೆ ಬುದ್ದಿ ಜೀವಿಗಳು ಬಾಯಿ ಮುಚ್ಕೊಂಡಿದ್ದಾರೆ. ಮುಸ್ಲಿಂರ ಬದಲಾಗಿ ಹಿಂದೂಗಳು ಗಲಾಟೆಯಲ್ಲಿ ಭಾಗಿಯಾಗಿದ್ದರೇ ಆಗ ಬುದ್ದಿಜೀವಿಗಳು ಬೀದಿಗೆ ಇಳಿದು ಹೇಳಿಕೆ ನೀಡುತ್ತಿದ್ದರು. ಬುದ್ದಿಜೀವಿಗಳು ಮುಸ್ಲಿಂ ಕ್ರಿಶ್ವಿಯನರ ಏಜೆಂಟ್‌ನಂತೆ ವರ್ತನೆ ಮಾಡುತ್ತಾರೆ ಎಂದು ಕಿಡಿಕಾರಿದರು.