ಗಣಿಗಾರಿಕೆಗೆ ಅನುಮತಿ ನೀಡದಂತೆ ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ರಾಜ್ಯದಿಂದ ಒಂದು ತಕರಾರು ಅರ್ಜಿ ಸಲ್ಲಿಕೆಯಾಗಿದೆ. ಗಣಿಗಾರಿಕೆ ಮಾಡುವ ಬಗ್ಗೆ ಯಾವುದೇ ಪೂರ್ವಾಪರ ಚರ್ಚೆ ಮಾಡದೇ ಸಹಿ ಮಾಡಿರೋದು ದುರದೃಷ್ಟಕರ ವಿಷಯವಾಗಿದೆ. ಇಂತಹ ನಾಯಕರ ಜೊತೆಗೆ ಯಾವುದರ ಬಗ್ಗೆಯೂ ಚರ್ಚೆ ಮಾಡೋದಕ್ಕೆ ಆಗಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದಾರೆ, ಜೆಡಿಎಸ್ ಪಕ್ಷದ ಅಧ್ಯಕ್ಷ ಆಗಿದ್ದಾರೆ. ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ದಿಢೀರ್ ಸಹಿ ಮಾಡಬಾರದಾಗಿತ್ತು ಎಂದ ಎಸ್.ಆರ್. ಹಿರೇಮಠ
ವಿಜಯನಗರ(ಜು.21): ಜನರು ಓಟು ಕೊಟ್ಟು ಅಧಿಕಾರ ಕೊಟ್ಟು ಗೌರವ ನೀಡಿದ್ದಾರೆ. ಜನರ ಗೌರವಕ್ಕೆ ತಕ್ಕಂತೆ ನಡೆಯಬೇಕು. ಸಚಿವರಾದ ದಿನವೇ KIOCLಗೆ ಗಣಿಗಾರಿಕೆ ನಡೆಸಲು ಸಹಿ ಮಾಡ್ತಾರೆ ಅಂದರೆ ದುರದೃಷ್ಟಕರ ವಿಷಯವಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಎಸ್.ಆರ್. ಹಿರೇಮಠ ವಾಗ್ದಾಳಿ ನಡೆಸಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್.ಆರ್. ಹಿರೇಮಠ, ಸಂಡೂರಿನಲ್ಲಿ ಗಣಿಗಾರಿಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅಂಕಿತ ಹಾಕಿದ್ದಕ್ಕೆ ವಾಗ್ದಾಳಿ ನಡೆಸಿದ್ದಾರೆ. ಗಣಿಗಾರಿಕೆಗೆ ಅನುಮತಿ ನೀಡದಂತೆ ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ರಾಜ್ಯದಿಂದ ಒಂದು ತಕರಾರು ಅರ್ಜಿ ಸಲ್ಲಿಕೆಯಾಗಿದೆ. ಗಣಿಗಾರಿಕೆ ಮಾಡುವ ಬಗ್ಗೆ ಯಾವುದೇ ಪೂರ್ವಾಪರ ಚರ್ಚೆ ಮಾಡದೇ ಸಹಿ ಮಾಡಿರೋದು ದುರದೃಷ್ಟಕರ ವಿಷಯವಾಗಿದೆ. ಇಂತಹ ನಾಯಕರ ಜೊತೆಗೆ ಯಾವುದರ ಬಗ್ಗೆಯೂ ಚರ್ಚೆ ಮಾಡೋದಕ್ಕೆ ಆಗಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದಾರೆ, ಜೆಡಿಎಸ್ ಪಕ್ಷದ ಅಧ್ಯಕ್ಷ ಆಗಿದ್ದಾರೆ. ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ದಿಢೀರ್ ಸಹಿ ಮಾಡಬಾರದಾಗಿತ್ತು ಎಂದರು.
undefined
ಪ್ರಧಾನಿ ಮೋದಿಯಿಂದ ದೇಶಕ್ಕೆ ಗಂಡಾಂತರ: ಎಸ್.ಆರ್.ಹಿರೇಮಠ
ಗಣಿಗಾರಿಕೆಗೆ ಸಹಿ ಮಾಡಿದ್ದು ನನ್ನ ಪ್ರಕಾರ ಮಹಾ ಅಪರಾಧ. ದೊಡ್ಡ ಸ್ಥಾನದಲ್ಲಿ ಕುಳಿತಾಗ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಮುಂದುವರೆಯಬೇಕಿತ್ತು. ಗಣಿಗಾರಿಕೆ ನಡೆಸಿದ್ರೇ ನಾಲ್ಕು ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗ್ತದೆ. ಅರಣ್ಯಕ್ಕೆ ಆಗುವ ಹಾನಿಯ ಬಗ್ಗೆ ಪರಿಶೀಲಿಸದೇ ಅನುಮತಿ ಕೊಟ್ಟಿದ್ದು ಸರಿ ಅಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ವಾಳಿ ನಡೆಸಿದ್ದಾರೆ.