ಸೌಜನ್ಯ ಹತ್ಯೆ ಪ್ರಕರಣ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಆದರೆ ಧರ್ಮಸ್ಥಳ ಕ್ಷೇತ್ರ ಅಪಪ್ರಚಾರ ಸಹಿಸುವುದಿಲ್ಲ: ಭಜನಾ ಪರಿಷತ್

By Kannadaprabha News  |  First Published Jul 30, 2023, 10:05 AM IST

ಸೌಜನ್ಯ ಹತ್ಯೆ ಪ್ರಕರಣವನ್ನು ನಾವು ಸಹಿಸುವುದಿಲ್ಲ. ಈ ಕೃತ್ಯದ ಹಿಂದೆ ಎಷ್ಟೇ ಪ್ರಭಾವಿಗಳಿದ್ದರೂ ಕಾನೂನಾತ್ಮಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿರುವ ಸುಳ್ಯ ತಾಲೂಕು ಭಜನಾ ಪರಿಷತ್‌ ಆಗ್ರಹಿಸಿದರು.


ಸುಳ್ಯ (ಜು.30) :  ಬೆಳ್ತಂಗಡಿ ಸೌಜನ್ಯ ಹತ್ಯೆ(Soujanya murder case) ಪ್ರಕರಣವನ್ನು ನಾವು ಸಹಿಸುವುದಿಲ್ಲ. ಈ ಕೃತ್ಯದ ಹಿಂದೆ ಎಷ್ಟೇ ಪ್ರಭಾವಿಗಳಿದ್ದರೂ ಕಾನೂನಾತ್ಮಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿರುವ ಸುಳ್ಯ ತಾಲೂಕು ಭಜನಾ ಪರಿಷತ್‌, ಈ ವಿಚಾರದಲ್ಲಿ ಧರ್ಮಸ್ಥಳ ಕ್ಷೇತ್ರದ ಹೆಸರನ್ನು ಹಾಗೂ ಖಾವಂದರ ಹೆಸರನ್ನು ಎಳೆದು ಅಪಪ್ರಚಾರ ಮಾಡುವುದನ್ನು ನಾವು ಸಹಿಸುವುದಿಲ್ಲ. ಇದು ಹೀಗೆ ಮುಂದುವರಿದರೆ ನಾವು ಬೃಹತ್‌ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಭಜನಾ ಪರಿಷತ್‌ ಅಧ್ಯಕ್ಷ ಯತೀಶ್‌ ರೈ(Yatish rai) ದುಗಲಡ್ಕ, ಸತ್ಯ ಧರ್ಮದ ನಿಲಯ ಎಂದೇ ಖ್ಯಾತಿಯ ಕ್ಷೇತ ್ರಧರ್ಮಸ್ಥಳ(Dharmastala). ಭಕ್ತರ ಪಾಲಿನ ಪರಮ ಪಾವನ ಕ್ಷೇತ್ರ ಇದಾಗಿದೆ. ಅದೆಷ್ಟೋ ಲಕ್ಷಾಂತರ ಭಕ್ತರ ಬಾಳಿಗೆ ಬೆಳಕನ್ನು ನೀಡಿ ಹರಸಿದ ಧರ್ಮಾಧಿಕಾರಿ ಡಾ.ವೀರೆಂದ್ರ ಹೆಗ್ಗಡೆಯವರು ನಡೆದಾಡುವ ಮಂಜುನಾಥ ಸ್ವಾಮಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಲಕ್ಷಾಂತರ ಭಕ್ತರ ಮನಸ್ಸಿಗೆ ಘಾಸಿ ಮಾಡುವ ಹೇಯ ಕೃತ್ಯ ಕಾಣದ ದುಷ್ಟಶಕ್ತಿಗಳಿಂದ ನಡೆಯುತ್ತಿದೆ.

Tap to resize

Latest Videos

ಧರ್ಮಸ್ಥಳ ಸೌಜನ್ಯ ಪ್ರಕರಣ ಮರು ತನಿಖೆಗೆ ಶಾಸಕ ಪೂಂಜಾ ಮನವಿ, ಸಿಎಂ ಸಿದ್ದರಾಮಯ್ಯಗೆ ಪತ್ರ!

ಅಮಾಯಕ ಹೆಣ್ಣು ಮಗಳ ಹತ್ಯೆಯಾಗಿರುವುದನ್ನು ನಾವು ಸಹಿಸುವುದಿಲ್ಲ. ಕೃತ್ಯದ ಹಿಂದೆ ಎಷ್ಟೇ ಪ್ರಭಾವಿ ವ್ಯಕ್ತಿ ಗಳಿದ್ದರೂ ಕಾನೂನಾತ್ಮಕವಾಗಿ ತನಿಖೆ ನಡೆಸಿ ತಪ್ಪಿತಸ್ಥ ಆರೋಪಿಗಳನ್ನು ಬಂಧಿಸಿ ಸೂಕ್ತ ಶಿಕ್ಷೆಗೊಳಪಡಿಸಬೇಕು. ನಮ್ಮ ಭಜನಾ ಪರಿಷತ್‌ ವತಿಯಿಂದ ಇಡೀ ತಾಲೂಕಿನ ಭಜಕ ಬಾಂಧವರನ್ನು ಒಟ್ಟು ಸೇರಿಸಿಕೊಂಡು ನ್ಯಾಯಯುತವಾಗಿ ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಜನಾ ಪರಿಷತ್‌ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ, ಗೌರವಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ, ಕಾರ್ಯದರ್ಶಿ ಸತೀಶ್‌ ಟಿ.ಎನ್‌ ಕಲ್ಮಕ್ಕಾರ್‌, ದೊಡ್ಡತೋಟ ವಲಯ ಅಧ್ಯಕ್ಷ ವೆಂಕಟ್ರಮಣ ಡಿ.ಜಿ ಉಪಸ್ಥಿತರಿದ್ದರು.

ಸಿನಿಮಾ ಆಗುತ್ತಿದೆ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ - ಕೊಲೆ ಪ್ರಕರಣ, ಹೆಸರು ನೋಂದಣಿ!

click me!