ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ಎಲ್ಲ ಪಬ್‌ಗಳನ್ನು ಬಂದ್ ಮಾಡಲು ಆದೇಶಿಸಿದ್ದರೆ ಮಂಗಳೂರು ನಗರದಲ್ಲಿ ಮಾತ್ರ ಇದು ಅನ್ವಯಿಸಿಲ್ಲ. ನಗರದ ದೊಡ್ಡ ಮಟ್ಟದ ಕೆಲವು ಪಬ್‌ಗಳು ತಡರಾತ್ರಿವರೆಗೂ ತೆರೆದಿದ್ದು, ಮೋಜು- ಮಸ್ತಿಗೆ ಮುಕ್ತವಾಗಿರುವುದಾಗಿ ನಾಗರಿಕರು ಆರೋಪಿಸಿದ್ದಾರೆ.
ಮಂಗಳೂರು(ಮಾ.21): ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ಎಲ್ಲ ಪಬ್‌ಗಳನ್ನು ಬಂದ್ ಮಾಡಲು ಆದೇಶಿಸಿದ್ದರೆ ಮಂಗಳೂರು ನಗರದಲ್ಲಿ ಮಾತ್ರ ಇದು ಅನ್ವಯಿಸಿಲ್ಲ. ನಗರದ ದೊಡ್ಡ ಮಟ್ಟದ ಕೆಲವು ಪಬ್‌ಗಳು ತಡರಾತ್ರಿವರೆಗೂ ತೆರೆದಿದ್ದು, ಮೋಜು- ಮಸ್ತಿಗೆ ಮುಕ್ತವಾಗಿರುವುದಾಗಿ ನಾಗರಿಕರು ಆರೋಪಿಸಿದ್ದಾರೆ.
ವಾರದ ಹಿಂದೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಒಂದೆರಡು ದಿನ ಬಂದ್ ಆಗಿದ್ದ ಈ ಪಬ್‌ಗಳು ಬಳಿಕ ನಿಧಾನವಾಗಿ ತಮ್ಮ ವ್ಯಾಪಾರವನ್ನು ಮುಂದುವರಿಸಿವೆ. ಹೊರಗಿನವರಿಗೆ ಗೊತ್ತಾಗದಂತೆ ಯುವಕ- ಯುವತಿಯರು ಕಳ್ಳ ಹೆಜ್ಜೆಯಲ್ಲಿ ತೆರಳಿ ತಡರಾತ್ರಿವರೆಗೂ ಮೋಜು ಮಸ್ತಿಯಲ್ಲಿ ಮುಳುಗಿರುತ್ತಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.
undefined
ಕೊರೋನಾ ಭೀತಿಗೆ ಕೇರಳ-ದಕ್ಷಿಣ ಕನ್ನಡ ವಾಹನ ಸಂಚಾರ ಬಂದ್
ಕೊರೋನಾ ಮುನ್ನೆಚ್ಚರಿಕೆಯಾಗಿ ಬೀದಿ ಬದಿ ಆಹಾರ ಸ್ಟಾಲ್‌ಗಳನ್ನು ಬಂದ್ ಮಾಡಿ ಬಡ ವ್ಯಾಪಾರಸ್ಥರ ಕುಟುಂಬಗಳು ಬೀದಿಪಾಲಾಗಿದ್ದರೆ, ಅತ್ತ ಲಕ್ಷಾಂತರ ರು. ಆದಾಯ ಗಳಿಸುವ ದೊಡ್ಡ ಮಟ್ಟದ ಪಬ್‌ಗಳಿಗೆ ಯಾವುದೇ ನಿರ್ಬಂಧ ಇಲ್ಲದಂತಾಗಿದೆ.
ನಗರದಲ್ಲಿ 10ಕ್ಕೂ ಅಧಿಕ ಪಬ್‌ಗಳಿದ್ದು, ಬಹುತೇಕ ಪಬ್‌ಗಳು ಬಂದ್ ಆಗಿವೆ. ಆದರೆ ಬೆರಳೆಣಿಕೆಯ ಪಬ್‌ಗಳು ಸರ್ಕಾರದ ಆದೇಶ ಮೀರಿ ಮಾತ್ರ ಕಾರ್ಯಾಚರಿಸುತ್ತಿವೆ. ಇದರಲ್ಲಿ ಅಧಿಕಾರಿಗಳ ಕೈವಾಡದ ಶಂಕೆ ಕೂಡ ವ್ಯಕ್ತವಾಗಿದೆ.ಶುಕ್ರವಾರ ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಅಂತಹ ಪ್ರಕರಣಗಳು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.