ಚಂಡೀಗಢ ಅಪಘಾತದಲ್ಲಿ ಗೋಕಾಕ ಯೋಧ ಸಾವು!

Published : Feb 03, 2020, 08:11 AM IST
ಚಂಡೀಗಢ ಅಪಘಾತದಲ್ಲಿ ಗೋಕಾಕ ಯೋಧ ಸಾವು!

ಸಾರಾಂಶ

ಚಂಡೀಗಢ: ಅಪಘಾತದಲ್ಲಿ ಗೋಕಾಕ ಯೋಧ ಸಾವು| ಆರ್ಮ್ಡ್ ರೆಜಿಮೆಂಟ್‌ನಲ್ಲಿದ್ದ ಭಾರತೀಯ ಭೂಸೇನೆಯ ಯೋಧ 

ಗೋಕಾಕ[ಫೆ.03]:  ಚಂಡೀಗಢದಲ್ಲಿ ಸೇವೆ ಸಲ್ಲಿಸುತ್ತಿದ್ದ ಗೋಕಾಕ ಮೂಲದ ಯೋಧರೊಬ್ಬರು ಅಪಘಾತದಲ್ಲಿ ಮೃತಪಟ್ಟಘಟನೆ ಶನಿವಾರ ನಡೆದಿದೆ. 66 ಆಮ್‌ರ್‍ಡ್‌ ರೆಜಿಮೆಂಟ್‌ನಲ್ಲಿದ್ದ ಭಾರತೀಯ ಭೂಸೇನೆಯ ಯೋಧ ರವಿಕುಮಾರ ಬಾಳಪ್ಪ ಬಬಲೆನ್ನವರ (27) ಮೃತಪಟ್ಟವರು.

ಜ. 31ರಂದು ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಅವರನ್ನು ಚಂಡೀಗಡದ ಮಿಲಿಟರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಚಿಕಿತ್ಸೆ ಫಲಿಸದೇ ಫೆ.1ರಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತ

ಯೋಧನ ಪಾರ್ಥಿವ ಶರೀರ ಸೋಮವಾರ ಗೋಕಾಕ ನಗರಕ್ಕೆ ಆಗಮಿಸಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತ ಯೋಧನ ಅಂತ್ಯಸಂಸ್ಕಾರ ಜರುಗಲಿದೆ. ಮೃತ ಯೋಧನಿಗೆ ತಂದೆ-ತಾಯಿ, ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರು ಇದ್ದಾರೆ.

PREV
click me!

Recommended Stories

ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ
ಫೇಸ್‌ಬುಕ್ ಚಿಟ್ಟೆಯ ಮುಖ ನೋಡಿ ಹನಿಹೀರಲು ಬಂದವನೇ ಟ್ರ್ಯಾಪ್ , ಯುವಕನ ಮೇಲೆ ಹಲ್ಲೆ, ಹಣಕ್ಕೆ ಬೇಡಿಕೆ ಇಟ್ಟವರು ಎಸ್ಕೇಪ್!