ರಾಸಲೀಲೆ ಸಿಡಿ ಹಾಗೂ ಮಾಜಿ ಸಿಎಂ ಓರ್ವರ ವೈನಾಡ್ ಕಥೆ ಹೇಳಿದ್ದ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಇದೀಗ ಉಲ್ಟಾ ಹೊಡೆದಿದ್ದಾರೆ.
ಬೆಳಗಾವಿ (ಮಾ.09): ನನ್ನ ಬಳಿ ರಾಜಕಾರಣಿಗಳ ಸೀಡಿ ಇದೆ ಎಂದು ಎಲ್ಲೂ ಹೇಳಿಲ್ಲ. ನನ್ನ ಬಳಿ ಯಾವುದೇ ರಾಜಕಾರಣಿಗಳ ಸೀಡಿಗಳಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಪುನರುಚ್ಚರಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವರು ಪ್ರಭಾವಿ ರಾಜಕಾರಣಿ. ಬಿಜೆಪಿ ಸರ್ಕಾರ ರಚನೆಯಲ್ಲಿ ಅವರ ಪಾತ್ರ ಪ್ರಮುಖವಾದದ್ದು. ಹೀಗಾಗಿ ಉತ್ತರ ಕರ್ನಾಟಕದ ರಾಜಕಾರಣಿಗಳು ಪ್ರಭಾವಿಗಳಾಗಿ ಬೆಳೆಯದಂತೆ ಎಲ್ಲ ಪಕ್ಷಗಳಲ್ಲಿಯೂ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ಸಿಡಿ ಕೇಸ್: 'ಪ್ರವಾಸಕ್ಕೆ ಹೋಗಿದ್ದ, ಮುಂದೆ ಹೋಗುವ ರಾಜಕಾರಣಿಗಳು ಎಚ್ಚರದಿಂದಿರಿ' ...
ಉತ್ತರ ಕರ್ನಾಟಕದ ರಾಜಕಾರಣಿಗಳು ಮುಗ್ಧರು, ನೇರ ನುಡಿಯವರು. ಮಾಜಿ ಸಚಿವರೊಬ್ಬರ ಸೀಡಿಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದರು.