ಸಾಮಾಜಿಕ ಹೋರಾಟಗಾರ, ವಕೀಲ ಬಿ. ಡಿ. ಹಿರೇಮಠ ಅಸ್ವಸ್ಥ!

By Kannadaprabha NewsFirst Published Dec 17, 2020, 5:19 PM IST
Highlights

ಸಾಮಾಜಿಕ ಹೋರಾಟಗಾರ, ವಕೀಲ ಬಿ.ಡಿ. ಹಿರೇಮಠ ಅಸ್ವಸ್ಥ| ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ| ರಟ್ಟಿಹಳ್ಳಿಯಲ್ಲಿ 14 ದಿನ ಉಪವಾಸ ಸತ್ಯಾಗ್ರಹ ನಡೆಸಿದ್ದ ಬಿ.ಡಿ. ಹಿರೇಮಠ| ಉಪವಾಸ ಮಾಡಿದ್ದರಿಂದ ತೀವೃ ಅಸ್ವಸ್ಥ.

ಹುಬ್ಬಳ್ಳಿ(ಡಿ.17): ಸಾಮಾಜಿಕ ಹೋರಾಟಗಾರ, ವಕೀಲ ಬಿ.ಡಿ. ಹಿರೇಮಠ ತೀವೃ ಅಸ್ವಸ್ಥರಾಗಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 

 ಬಿ. ಡಿ. ಹಿರೇಮಠ ರಟ್ಟಿಹಳ್ಳಿಯಲ್ಲಿ 14ದಿನ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಉಪವಾಸ ಮಾಡಿದ್ದರಿಂದ ಶುಗರ್, ರಕ್ತದೊತ್ತಡ ವ್ಯತ್ಯಯವಾಗಿ ತೀವ್ರ ಅಸ್ವಸ್ಥರಾಗಿದ್ದರು. ಸದ್ಯ ಕಿಮ್ಸ್ ಆಸ್ಪತ್ರೆಯ ವಿಐಪಿ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

'ರೈತರಿಗೆ, ಜನರಿಗೆ ತಪ್ಪು ಸಂದೇಶ ನೀಡುತ್ತಿರುವ ಕಾಂಗ್ರೆಸ್‌'

ಉಪವಾಸ ಸತ್ಯಾಗ್ರಹವೇಕೆ?

ಶಿಕಾರಿಪುರ ತಾಲ್ಲೂಕಿನ ಉಡಗಣಿ, ತಾಳಗುಂದ ಕೆರೆ ತುಂಬಿಸುವ ನೀರಾವರಿ ಯೋಜನೆಗೆ ಪೈಪ್‌ಲೈನ್‌ ಅಳವಡಿಸಲು ರೈತರ ಜಮೀನುಗಳ ಸ್ವಾಧೀನ ವಿರೋಧಿಸಿ ರಟ್ಟಿಹಳ್ಳಿಯಲ್ಲಿ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಹಿರೇಮಠ ಅವರು ಈ ಹೋರಾಟದ ನೇತೃತ್ವ ವಹಿಸಿದ್ದರು. ಗೃಹಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಬುಧವಾರ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ತೆರಳಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ಉಪವಾಸ ಸತ್ಯಾಗ್ರಹ ಕೈ ಬಿಡಲಾಗಿದೆ.
 

click me!