ಮುನಿರತ್ನ ವಿರುದ್ಧ ಅತ್ಯಾಚಾರ, ಜಾತಿ ನಿಂದನೆ, ಬೆದರಿಕೆ ಹಾಗೂ ಹನಿಟ್ರ್ಯಾಪ್ ಯತ್ನ ಸೇರಿ 4 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ಜಾತಿನಿಂದನೆ ಹಾಗೂ ಬಿಜೆಪಿ ಕಾರ್ಯಕರ್ತೆ ಮೇಲಿನ ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿ ಎಸ್‌ಐಟಿ ಆರೋಪ ಪಟ್ಟಿ ಸಲ್ಲಿಸಿದೆ.
ಬೆಂಗಳೂರು(ಡಿ.28): ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅವರ ವಿರುದ್ದ ಕೇಳಿ ಬಂದಿದ್ದ ಅತ್ಯಾಚಾರ ಆರೋಪ ತನಿಖೆಯಲ್ಲಿ ರುಜು ವಾತಾಗಿದೆ ಎಂದು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಆರೋಪ ಪಟ್ಟಿ ಸಲ್ಲಿಸಿದೆ.
ಇನ್ನು ತಮ್ಮ ವಿರೋಧಿಗಳನ್ನು ಎಚ್‌ಐವಿ ಏಡ್ಸ್ ಪೀಡಿತರ ಮೂಲಕ ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಏಡ್ಸ್ ಹರಡುವಿಕೆಗೆ ಶಾಸಕರು ದುಷ್ಕೃತ್ಯ ಎಸಗಿದ್ದರು ಎಂಬ ಗಂಭೀರ ಸ್ವರೂಪದ ಆರೋಪ ಕೂಡ ಸಾಬೀತಾಗಿದೆ ಎಂದು ಎಸ್‌ಐಟಿ ಹೇಳಿದೆ. ಈ ಆರೋಪವನ್ನು ಐಪಿಸಿ 270ರ ಅಡಿ (ಅಪಾಯಕಾರಿ ರೋಗ ಹರಡುವಿಕೆ) ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಶಾಸಕರ ಕೃತ್ಯಕ್ಕೆ ನೆರವು ನೀಡಿದ ಆರೋಪ ಹೊತ್ತಿದ್ದ ಅವರ ಸಹಚರರಾದ ಆರ್.ಸುಧಾಕರ್, ಪಿ.ಶ್ರೀನಿವಾಸ್ ಹಾಗೂ ಇನ್ಸ್‌ಪೆಕ್ಟರ್ ಬಿ.ಐಯ್ಯಣ್ಣರೆಡ್ಡಿ ವಿರುದ್ಧ ದಾಖಲಾದ ಆಪಾದನೆ ಕೂಡ ತನಿಖೆಯಲ್ಲಿ ಸಾಬೀತಾಗಿದೆ.
undefined
ಬಿಜೆಪಿ ಕಾರ್ಯಕರ್ತೆ ದೂರು:
ಕಳೆದ ಸೆಪ್ಟೆಂಬರ್‌ನಲ್ಲಿ ಕಗ್ಗಲೀ ಪುರ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ಹಾಗೂ ಸಹಚರರ ವಿರುದ್ಧ ಅತ್ಯಾಚಾರ ಆರೋಪ ಮಾಡಿ ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಕಾರ್ಯ ಕರ್ತೆ ದೂರು ನೀಡಿದ್ದರು. ಪ್ರಕರಣದ ತನಿಖೆಗೆ ಸರ್ಕಾರ ಎಸ್‌ಐಟಿ ರಚಿಸಿತ್ತು. ಈ ಬಗ್ಗೆ ಸುದೀರ್ಘ ತನಿಖೆ ನಡೆಸಿದ ಎಸ್‌ಐಟಿ, ಶಾಸಕರ ವಿರುದ ಆತ್ರಾ ಚಾರ ಹಾಗೂ ಅವರ ಸಹಚರರ ಮೇಲೆ ಕೃತ್ಯಕ್ಕೆ ಸಹಕರಿಸಿದ ಆರೋಪದಡಿ ಆರೋಪ ಪಟ್ಟಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ, ಜಾತಿ ನಿಂದನೆ, ಬೆದರಿಕೆ ಹಾಗೂ ಹನಿಟ್ರ್ಯಾಪ್ ಯತ್ನ ಸೇರಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್‌ಗೆ ಜಾತಿನಿಂದನೆ ಹಾಗೂ ಬಿಜೆಪಿ ಕಾರ್ಯಕರ್ತೆ ಮೇಲಿನ ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿ ಎಸ್‌ಐಟಿ ಆರೋಪ ಪಟ್ಟಿ ಸಲ್ಲಿಸಿದೆ. ಇನ್ನುಳಿದ ಬಿಬಿಎಂಪಿ ಗುತ್ತಿಗೆದಾರನಿಗೆ ಜೀವ ಬೆದರಿಕೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ವಿಧಾನಸಭೆ ಸ್ಪೀಕರ್‌ಬಳಿ ಅನುಮತಿಗೆ ಎಸ್‌ಐಟಿ ಮನವಿ ಮಾಡಿದೆ. ಅದೇ ರೀತಿ ಬಿಬಿಎಂಪಿ ಮಾಜಿ ಸದಸ್ಯೆ ಪತಿಯನ್ನು ಹನಿಟ್ ಟ್ಯಾಪ್‌ಗೆ ಯತ್ನಿಸಿದ ಪ್ರಕರಣದ ತನಿಖೆ ಮುಂದುವರೆದಿದೆ.
2,481 ಪುಟ, 180 ಸಾಕ್ಷಿಗಳ ಹೇಳಿಕೆ :
ನಗರದ ಜನಪ್ರತಿನಿಧಿ ಗಳ ವಿಶೇಷ ನ್ಯಾಯಾಲಯಕ್ಕೆ ಮುನಿರತ್ನ ಹಾಗೂ ಮೂವರು ಸಹಚರರ ವಿರುದ್ಧ 2481 ಪುಟಗಳ ಆರೋಪ ಪಟ್ಟಿಯನ್ನು ಎಸ್ ಐಟಿ ಸಲ್ಲಿಸಿದೆ. ಇದರಲ್ಲಿ 146 ಸಾಕ್ಷಿಗಳ ಹೇಳಿಕೆ, 350 ದಾಖಲೆ ಗಳು ಸಲ್ಲಿಕೆಯಾಗಿವೆ. ಅಲ್ಲದೆ ನ್ಯಾಯಾಧೀಶರ ಮುಂದೆ ಸಿಆರ್ ಪಿಸಿ 164 ರಡಿ ದೂರುದಾರೆ ಸೇರಿ 8 ಮಂದಿ ಹೇಳಿಕೆ ನೀಡಿದ್ದಾರೆ. ವೈದ್ಯಕೀಯ ಹಾಗೂ ಎಫ್‌ಎಸ್ಎಲ್ ವರದಿಯಗಳನ್ನು ಕೂಡ ಆರೋಪಪಟ್ಟಿಯಲ್ಲಿ ಲಗತ್ತಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಯಾವ್ಯಾವ ಸೆಕ್ಷನಗಳಡಿ ಜಾರ್ಜ್‌ಶೀಟ್?:
ಐಪಿಸಿ 354ಎ (ಲೈಂಗಿಕ ಕಿರುಕುಳ), 354ಸಿ (ಅನುಮತಿ ಇಲ್ಲದೆ ಮಹಿಳೆಯ ಆಶ್ಲೀಲ ದೃಶ್ಯಾವಳಿ ಚಿತ್ರೀಕರಣ), 376(2)ಎನ್ (ನಿರಂತರ ಅತ್ಯಾ ಚಾರ), 308 (ಸಂತ್ರಸ್ತೆಯ ಕೊಲ್ಲುವ ಉದ್ದೇಶ), 120ಬಿ (ಅಪರಾಧಿಕ ಸಂಚು), 504 (ಉದೇಶ ಪೂರ್ವಕ ಅವಮಾನ), 506 (ಜೀವ ಬೆದರಿಕೆ), 270 (ಅಪಾಯಕಾರಿ ರೋಗ ಹರಡುವಿಕೆ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಸೇರಿ ಇತರೆ ಪರಿಚ್ಛೇದಗಳಡಿ ಶಾಸಕ ಮುನಿರತ್ನ ಹಾಗೂ ಸಹಚರರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.
ಏನಿದು ಪ್ರಕರಣ?:
ಕೊರೋನಾ ಲಾಕ್‌ಡೌನ್ ಸಮಯದಲ್ಲಿ ತನ್ನ ಸಾಮಾಜಿಕ ಸೇವಾ ಕಾರ್ಯಗಳನ್ನು ನೋಡಿ ಶಾಸಕ ಮುನಿರತ್ನರವರು ಪರಿಚಯಿಸಿಕೊಂಡಿದ್ದರು. ನಂತರ ತನ್ನನ್ನು ಜೆ.ಪಿ.ಪಾರ್ಕ್ ಸಮೀಪದ ತಮ್ಮ ಗೋಡೌನ್‌ಗೆ ಸಾಮಾಜಿಕ ಸೇವಾ ಕಾರ್ಯಗಳ ಕುರಿತ ಮಾತುಕತೆ ನೆಪದಲ್ಲಿ ಕರೆಸಿದ್ದರು. ಅಲ್ಲಿಗೆ ಹೋದಾಗ ಜೀವ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದರು.
ನಂತರ ನಿನ್ನ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಹಾಗೂ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಪ್ ಲೋಡ್ ಮಾಡಿ ಮರ್ಯಾದೆ ಕಳೆಯುವುದಾಗಿ ಬೆದರಿಸಿ ಲೈಂಗಿಕವಾಗಿ ಶೋಷಿಸಿದ್ದರು. ಅಲ್ಲದೆ ಸಚಿವರಾಗಿದ್ದಾಗ ವಿಕಾಸ ಸೌಧದ ಕಚೇರಿಯಲ್ಲೂ ಅತ್ಯಾಚಾರ ಎಸಗಿದ್ದರು. ಜೆ.ಪಿ.ನಗರ ವಾರ್ಡ್ ಮಾಜಿ ಸದಸ್ಯೆ ಪತಿಗೆ ಏಡ್ಸ್ ರೋಗ ಹರಡಲು ಏಡ್ಸ್ ಸಂತ್ರಸ್ತೆಯನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದರು ಎಂದು ಆರೋಪಿಸಿ ಸೆ.18 ರಂದು ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತೆ ದೂರು ನೀಡಿದ್ದರು. ಪ್ರಕರಣದಲ್ಲಿ ಶಾಸಕರನ್ನು ರಾಮನಗರ ಪೊಲೀಸರು ಬಂಧಿಸಿದ್ದರು. ಬಳಿಕ ಮುನಿರತ್ನ ವಿರುದ್ಧ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರವು, ಈ ಬಗ್ಗೆ ತನಿಖೆಗೆ ಎಸ್‌ಐಟಿ ರಚಿಸಿತ್ತು.
ಯಾವ ಕೇಸ್ ಇದು?
• ಸೆಪ್ಟೆಂಬರ್‌ನಲ್ಲಿ ಬಿಜೆಪಿ ಕಾರ್ಯಕರ್ತೆ ಯೊಬ್ಬರು ಕಗ್ಗಲೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು
• ತನ್ನ ಮೇಲೆ ಶಾಸಕ ಮುನಿರತ್ನ, ಸಹಚರರು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು • ಇದರ ಬೆನ್ನಲ್ಲೇ ರಾಮನಗರ ಪೊಲೀಸರು ಮುನಿರತ್ನ ಅವರನ್ನು ಕೋಲಾರ ಬಳಿ ಬಂಧಿಸಿದ್ದರು
# ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು . ಇದೀಗ ಆ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಎಸ್‌ಐಟಿಯಿಂದ ಆರೋಪಪಟ್ಟಿ
ಯಾವ್ಯಾವ ಸೆಕ್ಷನ್ ಅಡಿ ಆರೋಪ? ಐಪಿಸಿ 354ಎ (ಲೈಂಗಿಕ ಕಿರುಕುಳ), 354ಸಿ (ಅನುಮತಿ ಇಲ್ಲದೆ ಮಹಿಳೆ ಯ ಅಶ್ಲೀಲ ದೃಶ್ಯಾವಳಿ ಚಿತ್ರೀ ಕರಣ), 376(2)ಎನ್ (ನಿರಂತರ ಅತ್ಯಾಚಾರ), 308 (ಸಂತ್ರಸ್ತೆಯ ಕೊಲ್ಲುವ ಉದ್ದೇಶ), 1200 (ಅಪರಾಧಿಕ ಸಂಚು), 504 (ಉದ್ದೇಶ ಪೂರ್ವಕ ಅವಮಾನ), 506 ( ), 270 (ಅಪಾಯಕಾರಿ ರೋಗ ಹರಡುವಿಕೆ) ಹಾಗೂ ಮಾಹಿತಿ ತಂತ್ರ ಜ್ಞಾನ ಕಾಯ್ದೆ -2000 ಸೇರಿ ಇತರೆ ಪರಿಚ್ಛೇದಗಳಡಿ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.
ಇನ್ನೂ 2 ಕೇಸಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಬಾಕಿ
ಮುನಿರತ್ನ ವಿರುದ್ಧ ಅತ್ಯಾಚಾರ, ಜಾತಿ ನಿಂದನೆ, ಬೆದರಿಕೆ ಹಾಗೂ ಹನಿಟ್ರ್ಯಾಪ್ ಯತ್ನ ಸೇರಿ 4 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ಜಾತಿನಿಂದನೆ ಹಾಗೂ ಬಿಜೆಪಿ ಕಾರ್ಯಕರ್ತೆ ಮೇಲಿನ ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿ ಎಸ್‌ಐಟಿ ಆರೋಪ ಪಟ್ಟಿ ಸಲ್ಲಿಸಿದೆ.