Sirsi Hostel: ದೊಡ್ಡಪ್ಪನ ಮಗನಿಂದ ಗರ್ಭಿಣಿಯಾದ 15ರ ಬಾಲಕಿ; ಹಾಸ್ಟೆಲ್‌ನಲ್ಲಿ ಹೆರಿಗೆ ಮಾಡಿಕೊಂಡು, ಕಿಟಕಿಯಲ್ಲಿ ಎಸೆದಳು!

Published : Jun 12, 2026, 08:12 PM IST
Sisri hostel girl gave birt in Toilet

ಸಾರಾಂಶ

ಶಿರಸಿಯ ಸರ್ಕಾರಿ ಹಾಸ್ಟೆಲ್‌ನಲ್ಲಿ, 15 ವರ್ಷದ ಬಾಲಕಿಯೊಬ್ಬಳು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ ಕಿಟಕಿಯಿಂದ ಹೊರಗೆಸೆದಿದ್ದಾಳೆ. ಈ ಘೋರ ಕೃತ್ಯದಿಂದ ನವಜಾತ ಶಿಶು ಮೃತಪಟ್ಟಿದ್ದು, ಬಾಲಕಿ ತನ್ನ ಸಂಬಂಧಿಕನ ಮೇಲೆ ಅತ್ಯಾ**ಚಾರದ ಆರೋಪ ಮಾಡಿದ್ದಾಳೆ. ಈ ಘಟನೆ ಹಾಸ್ಟೆಲ್‌ನ ಸುರಕ್ಷತಾ ವೈಫಲ್ಯವನ್ನು ಬಯಲು ಮಾಡಿದೆ.

ಉತ್ತರ ಕನ್ನಡ (ಜೂ.12): ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಕ್ಷರಶಃ ಎದೆನಡುಗಿಸುವ ಮತ್ತು ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಸರ್ಕಾರಿ ಹಾಸ್ಟೆಲ್‌ನಲ್ಲಿ (Sisri Government girls Hostel) ಉಳಿದುಕೊಂಡಿದ್ದ 15 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಹಾಸ್ಟೆಲ್‌ನ ಶೌಚಾಲಯದಲ್ಲೇ (Hostel Toilet) ಹೆಣ್ಣು ಮಗುವಿಗೆ ಜನ್ಮ ನೀಡಿ, ಬಳಿಕ ಆ ನವಜಾತ ಶಿಶುವನ್ನು ಕಿಟಿಕಿಯಿಂದ ಹೊರಗೆ ಎಸೆದಿರುವ ಘಟನೆ ನಡೆದಿದೆ. ಕಿಟಿಕಿಯಿಂದ ಕೆಳಕ್ಕೆ ಬಿದ್ದ ಪರಿಣಾಮ ಶಿಶು ಸ್ಥಳದಲ್ಲೇ ಮೃತಪಟ್ಟಿದೆ.

ಘಟನೆಯ ವಿವರ:

ಶಿರಸಿಯ ತೋಡದಗದ್ದೆ ಬಳಿ ಇರುವ ಸರ್ಕಾರಿ ಹಾಸ್ಟೆಲ್‌ನಲ್ಲಿ (Todadagadde govt Hostel) ಈ ಘಟನೆ ಸಂಭವಿಸಿದೆ. ಬಾಲಕಿಯು ಯಾರಿಗೂ ತಿಳಿಯದಂತೆ ಹಾಸ್ಟೆಲ್‌ನ ಟಾಯ್ಲೆಟ್‌ನಲ್ಲಿ ತಾನೇ ಹೆರಿಗೆ ಮಾಡಿಕೊಂಡಿದ್ದಾಳೆ. ಹೆರಿಗೆಯಾದ ನಂತರ ಗಾಬರಿಗೊಂಡ ಬಾಲಕಿ ಅಥವಾ ವಿಷಯ ಮರೆಮಾಚುವ ಉದ್ದೇಶದಿಂದ ಹಸುಗೂಸನ್ನು ಕಿಟಿಕಿಯಿಂದ ಹೊರಗೆ ಎಸೆದಿದ್ದಾಳೆ ಎನ್ನಲಾಗಿದೆ.

ಈ ವಿಚಾರ ಯಾರಿಗೂ ತಿಳಿದಿರಲಿಲ್ಲ. ಆದರೆ, ಹಾಸ್ಟೆಲ್ ಸಮೀಪ ಕಸ ಆರಿಸುವವರಿಗೆ ಮೃತ ಶಿಶುವಿನ ಶವ ಕಂಡುಬಂದಾಗ ವಿಷಯ ಹೊರಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸಿದಾಗ ಹಾಸ್ಟೆಲ್‌ನಲ್ಲಿದ್ದ ಅಪ್ರಾಪ್ತ ಬಾಲಕಿಯೇ ಈ ಕೃತ್ಯ ಎಸಗಿರುವುದು ಬಯಲಾಗಿದೆ.

ಬಾಲಕಿಯ ಗಂಭೀರ ಆರೋಪ:

ಪೊಲೀಸರ ವಿಚಾರಣೆಯ ವೇಳೆ ಬಾಲಕಿಯು ನೀಡಿರುವ ಹೇಳಿಕೆ ಮತ್ತಷ್ಟು ಆಘಾತಕಾರಿಯಾಗಿದೆ. ತನ್ನ ದೊಡ್ಡಪ್ಪನ ಮಗನೇ ತನ್ನ ಮೇಲೆ ಅತ್ಯಾ**ಚಾರವೆಸಗಿದ್ದು, ಇದರಿಂದಾಗಿ ತಾನು ಗರ್ಭಧರಿಸಿದ್ದಾಗಿ ಬಾಲಕಿ ಆರೋಪಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಬಾಲಕಿಯ ಗರ್ಭಕ್ಕೆ ಕಾರಣವಾದವನ ಮೇಲೆ ಅತ್ಯಾ**ಚಾರ ಎಸಗಿದ ಆರೋಪದಡಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

ಅಧಿಕಾರಿಗಳ ಭೇಟಿ:

ವಿಷಯ ತಿಳಿಯುತ್ತಿದ್ದಂತೆಯೇ ಶಿರಸಿ ತಹಶೀಲ್ದಾರ್ ಪಟ್ಟರಾಜ್ ಗೌಡ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆರಿಗೆಯಿಂದ ಅಸ್ವಸ್ಥಗೊಂಡಿರುವ ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಈ ಘಟನೆಯು ಸರ್ಕಾರಿ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆ ಮತ್ತು ಅವರ ಆರೋಗ್ಯದ ಮೇಲೆ ನಿಗಾ ಇಡುವಲ್ಲಿನ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. 15 ವರ್ಷದ ಬಾಲಕಿ ಗರ್ಭಿಣಿಯಾಗಿದ್ದರೂ ಹಾಸ್ಟೆಲ್ ಸಿಬ್ಬಂದಿಯ ಗಮನಕ್ಕೆ ಬಾರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

PREV
Read more Articles on
click me!

Recommended Stories

Pregnant Woman: ಬೆಂಗಳೂರಿನ 9 ತಿಂಗಳ ಗರ್ಭಿಣಿ ತಲೆಕೆಳಗಾಗಿ ಯೋಗ: 2 ಕೋಟಿಗೂ ಹೆಚ್ಚು ಜನ ನೋಡಿದ ವಿಡಿಯೋ ವೈರಲ್!
Bomb Blast Accused: ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರ ಅಬ್ದುಲ್ ಖಾದರ್ ಸಾವು: ಆಗಿದ್ದೇನು?