ಉತ್ತರಾಖಂಡ್‌ ಚಾರಣಿಗರು ನಾಪತ್ತೆ ಪ್ರಕರಣ: ಶಿರಸಿ ಮೂಲದ ಯುವತಿ ಮಿಸ್ಸಿಂಗ್..!

By Girish Goudar  |  First Published Jun 6, 2024, 7:09 PM IST

ಉತ್ತರಾಖಂಡ್‌ಗೆ ತೆರಳಿದ್ದ ಚಾರಣಿಗರು ನಾಪತ್ತೆ ಪ್ರಕರಣದಲ್ಲಿ ಉತ್ತರಕನ್ನಡ ಜಿಲ್ಲೆಯ ಶಿರಸಿ ಮೂಲದ ಯುವತಿಯೊಬ್ಬರು ಕೂಡ ಕಾಣೆಯಾಗಿದ್ದಾರೆ. 


ಕಾರವಾರ(ಜೂ.06):  ಉತ್ತರಾಖಂಡ್‌ಗೆ ತೆರಳಿದ್ದ ಚಾರಣಿಗರು ನಾಪತ್ತೆ ಪ್ರಕರಣದಲ್ಲಿ ಉತ್ತರಕನ್ನಡ ಜಿಲ್ಲೆಯ ಶಿರಸಿ ಮೂಲದ ಯುವತಿಯೊಬ್ಬರು ಕೂಡ ಕಾಣೆಯಾಗಿದ್ದಾರೆ. ಶಿರಸಿ ತಾಲೂಕಿನ ಜಾಗನಹಳ್ಳಿ ಮೂಲದ ಪದ್ಮಿನಿ ಹೆಗಡೆ (35) ಎಂಬುವರು ಮಿಸ್ಸಿಂಗ್ ಆಗಿದ್ದಾರೆ. 

ಕಾಣೆಯಾದ ಪದ್ಮಿನಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ನೌಕರಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಮೇ.29 ರಿಂದ ಜೂನ್ 7 ರ ವರೆಗೆ ಭಟವಾಡಿ, ಮಲ್ಲಾ -ಸಿಲ್ಲಾ ಕುಶಕಲ್ಯಾಣ, ಸಹಸ್ರ ತಾಲ್ ಗೆ ಟ್ರೆಕ್ಕಿಂಗ್ ಗೆ ಪದ್ಮಿನಿ ಅನುಮತಿ ಪಡೆದಿದ್ದರು. 

Latest Videos

ಉತ್ತರಾಖಂಡ ಸಹಸ್ತ್ರ ತಾಲ್ ಶಿಖರದ ಟ್ರೆಕ್ಕಿಂಗ್‌ನಲ್ಲಿ ಸಿಲುಕಿದ 22 ಕನ್ನಡಿಗರು; ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಸುಮಾರು 17 ಜನರ ತಂಡದೊಂದಿಗೆ ಟ್ರೆಕ್ಕಿಂಗ್‌ ತೆರಳಿರುವುದಾಗಿ ಮಾಹಿತಿ ಲಭ್ಯವಾಗಿದೆ. ಪದ್ಮಿನಿ ಜೂ‌.4 ರಂದು ಮುಂಬೈನಲ್ಲಿ ಅಕ್ಕನ ಜತೆಯಿದ್ದ ತಾಯಿಗೆ ಸಂಪರ್ಕ ಮಾಡಿದ್ದರು.  ಈವರೆಗೂ ಪದ್ಮಿನಿ ಕುಟುಂಬ ನಾಪತ್ತೆಯಾಗಿರುವ ಮಾಹಿತಿ ಮಾತ್ರ ಪಡೆದಿದೆ.

click me!