
ಬೆಂಗಳೂರು(ಮೇ.11): ನಗರದಲ್ಲಿ ಸುರಿದ ಭಾರಿ ಮಳೆಯಿಂದ ಡ್ರೈನ್‌ಹೋಲ್(Drainhole) ಕಾಣದೆ ಖ್ಯಾತ ಗಾಯಕ ಅಜಯ್ ವಾರಿಯರ್(Ajay Warier) ಗುಂಡಿಯೊಳಗೆ ಬಿದ್ದ ಪರಿಣಾಮ ಕಾಲಿಗೆ ತೀವ್ರ ಏಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ(Social Media) ಈ ಕುರಿತು ಬರೆದುಕೊಂಡಿರುವ ಅಜಯ್, ಭಾನುವಾರ ನಗರದಲ್ಲಿ(Bengaluru) ಭಾರಿ ಮಳೆ(Rain) ಸುರಿಯುತ್ತಿದ್ದು, ನನ್ನ ಮಗಳ ಜನ್ಮ ದಿನದ ಅಂಗವಾಗಿ ಕೇರಳಕ್ಕೆ(Kerala) ಹೋಗಲು ರೈಲ್ವೆ ನಿಲ್ದಾಣದಂತೆ ಹೊರಟೆ.
ಮೆಟ್ರೋ ನಿಲ್ದಾಣವನ್ನು ಸಮೀಸುತ್ತಿದ್ದಂತೆ ಮುಖ್ಯ ರಸ್ತೆಯಲ್ಲಿ ನೀರು ನಿಂತಿದ್ದು, ಫುಟ್‌ಪಾತ್‌ಏರಿದೆ. ಕೆಲವೇ ಹೆಜ್ಜೆ ನಡೆದ ನಂತರ ನನ್ನ ಕಾಲು ಪುಟ್‌ಪಾತ್‌ನಲ್ಲಿನ ದೊಡ್ಡ ಗುಂಡಿಯೊಳಕ್ಕೆ ಹೋಯಿತು. ಗುಂಡಿ ಎಂದು ಗೊತ್ತಾಗುತ್ತಿದ್ದಂತೆ ಚರಂಡಿ ಒಳಗೆ ಬಿದ್ದೆ, ನೀರು ನನ್ನ ಎದೆಯ ಮಟ್ಟದವರೆಗೂ ಇತ್ತು. ಆದರೆ ನಾನು ಹಿಡಿದಿದ್ದ ಅದೃಷ್ಟದ ಸೂಟ್‌ಕೇಸ್‌ನ್ನು ನಾನು ನಂಬಿದ್ದೆ. ಅದು ನನ್ನನ್ನು ರಕ್ಷಿಸಿತು. ದೇವರ ದಯೆಯಿಂದ ನಾನು ಬದುಕಿ ಉಳಿಯಲು ಸಾಧ್ಯವಾಯಿತು. ಇದು ನನಗೆ ತೀವ್ರ ನೋವುಂಟು ಮಾಡಿದೆ ಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
Bengaluru Rains: ಬೆಂಗ್ಳೂರಲ್ಲಿ ಮುಂದುವರಿದ ಮಳೆ: ಧರೆಗುರುಳಿದ ಮರಗಳು..!
ಡ್ರೈನ್‌ಹೋಲ್ ಮುಚ್ಚುವ ಸಿಮೆಂಟ್ ಸ್ಲ್ಯಾಬ್‌ನ್ನು ಬದಲಾಯಿಸಲು ತಲೆಕೆಡಿಸಿಕೊಳ್ಳದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ನನ್ನ ಕಾಲಿಗೆ ಹಲವಾರು ಹೊಲಿಗೆಗಳು ಬೀಳುವಂತೆ ಆಯಿತು. ಸಂಕಷ್ಟದ ದಿನಗಳು, ಸಂಗೀತದಿಂದ ತುಂಬಾ ನಷ್ಟವಾಗುವಂತೆ ಮಾಡಿತು. ನನ್ನ ಮಗಳ ಜನ್ಮದಿನದ ಸಪ್ರೈರ್‍ಸ್ ಸಂಭ್ರಮ ಹಾರಿ ಹೋಯಿತು. ಫುಟ್‌ಪಾತ್ ಡ್ರೈನ್ ಹೋಲ್ ಮತ್ತು ಮೋರಿಗಳನ್ನು ಗುರುತಿಸದಿದ್ದರೆ ಇಂತಹ ಅವಘಡ ಯಾರಿಗಾದರೂ ಸಂಭವಿಸಬಹುದು.
ಒಂದು ವೇಳೆ ಪುಟ್ಟ ಮಗು ಅದರೊಳಗೆ ಕಾಲು ಹಾಕಿದರೆ ದೇವರೇ ಕಾಪಾಡಬೇಕಾಗಿತ್ತು. ಬಿಬಿಎಂಪಿ(BBMP) ಅಧಿಕಾರಿಗಳು ಇತ್ತ ಗಮನಹರಿಸಿ ನಗರದ ನಿವಾಸಿಗಳಿಗೆ ಸುರಕ್ಷಿತ ರಸ್ತೆ ಹಾಗೂ ಫುಟ್‌ಪಾತ್ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇತ್ತೀಚೆಗಷ್ಟೆ ಕಿರುತೆರೆಯ ಖ್ಯಾತ ನಟಿ ಸುನೇತ್ರ ಪಂಡಿತ್ ರಸ್ತೆಯ ಗುಂಡಿಗಳು ಮತ್ತು ಹಂಪಿನಿಂದ ಅಪಘಾತಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.