ಸತ್ತ ಜೇಡದ ಬಳಿಕ ಈಗ ನಂದಿನಿ ಮೊಸರಿನಲ್ಲಿ ಸಿಮ್​ ಕಾರ್ಡ್​ ಪತ್ತೆ? ಮದ್ದೂರಿನ ವ್ಯಕ್ತಿಯಿಂದ ವಿಡಿಯೋ

Published : Nov 12, 2026, 06:10 PM IST
SIM card found in Nandini curd

ಸಾರಾಂಶ

ಮಂಡ್ಯದ ಮದ್ದೂರಿನಲ್ಲಿ ವ್ಯಕ್ತಿಯೊಬ್ಬರು ಖರೀದಿಸಿದ ನಂದಿನಿ ಮೊಸರು ಪ್ಯಾಕೆಟ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂಬ ವಿಡಿಯೋ ವೈರಲ್ ಆಗಿದೆ. ಈ ಘಟನೆಯ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಮಂಡ್ಯ: ಕೆಲ ದಿನಗಳ ಹಿಂದಷ್ಟೇ ನಂದಿನಿ ಹಾಲಿನ ಪ್ಯಾಕೇಟ್​ನಲ್ಲಿ ಸತ್ತ ಜೇಡ ಪತ್ತೆಯಾಗಿದ್ದು ಭಾರಿ ಸದ್ದು ಮಾಡಿತ್ತು. ನಂದಿನಿಯ ಬೆಲೆ ಏರಿಕೆ ನಡುವೆಯೇ ಇದು ಭಾರಿ ವಿವಾದ ಸೃಷ್ಟಿಸಿತ್ತು. ಇದೀಗ ಮಂಡ್ಯ ಜಿಲ್ಲೆಯ ಮದ್ದೂರಿನ ವ್ಯಕ್ತಿಯೊಬ್ಬರು ಜಾಲತಾಣದಲ್ಲಿ ಶೇರ್​ ಮಾಡಿರುವ ವಿಡಿಯೋ ಒಂದು ಹಲ್​ಚಲ್​ ಸೃಷ್ಟಿಸುತ್ತಿದೆ. ಇದರಲ್ಲಿ ನಂದಿನಿ ಮೊಸರಿನ ಪ್ಯಾಕೇಟ್​ನಲ್ಲಿ ಮೊಬೈಲ್​ ಸಿಮ್ ಕಾರ್ಡ್​ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಜಿಯೋ ಕಂಪೆನಿಯ ಸಿಮ್​ ಕಾರ್ಡ್​ ಮೊಸರಿನ ಪ್ಯಾಕೆಟ್​ನಲ್ಲಿ ಪತ್ತೆಯಾಗಿರುವುದಾಗಿ ಅರುಣ್ ಕುಮಾರ್ ಎಂಬುವವರು ಶೇರ್​ ಮಾಡಿಕೊಂಡಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರಿನ ವಿಶ್ವೇಶ್ವರಯ್ಯ ನಗರದ ನಿವಾಸಿ ಹಾಗೂ ಎಪಿಎಂಸಿ ಎಳನೀರು ಮಾರುಕಟ್ಟೆಯ ಉದ್ಯೋಗಿ ಈ ಆರೋಪ ಮಾಡಿದ್ದಾರೆ. ಕಳೆದ ಮಂಗಳವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬರುವಾಗ ಖರೀದಿಸಿದ್ದ ನಂದಿನಿ ಮೊಸರು ಪ್ಯಾಕೆಟ್ ಅನ್ನು ತೆರೆದಾಗ ಅದರಲ್ಲಿ ಜಿಯೋ ಸಿಮ್ ಕಾರ್ಡ್ ಸಿಕ್ಕಿದೆ ಎಂದು ಅವರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಈ ಘಟನೆಯ ವಿಡಿಯೋಗಳು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ತನಿಖೆಗೆ ಬೇಡಿಕೆ

ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ನಂದಿನಿ ಬ್ರ್ಯಾಂಡ್ ರಾಜ್ಯದ ಲಕ್ಷಾಂತರ ಗ್ರಾಹಕರ ವಿಶ್ವಾಸ ಗಳಿಸಿದೆ. ಇಂತಹ ಆರೋಪ ಬಂದಿರುವುದು ದೊಡ್ಡ ಆಘಾತ ನೀಡಿದೆ. ಆದರೆ ಇದರ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಿದೆ. ನಿಜಕ್ಕೂ ಇದು ಮೊಸರಿನ ಪ್ಯಾಕೆಟ್​ನಲ್ಲಿ ಇತ್ತೇ ಎನ್ನುವ ಬಗ್ಗೆಯೂ ಹಲವರು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯವಾಗಿ ವೈರಲ್​ ಆಗಲು, ಫೇಮಸ್​ ಆಗಲು ಜನರು ಏನು ಬೇಕಾದರೂ ಮಾಡುತ್ತಾರೆ. ಇದೇ ಕಾರಣಕ್ಕೆಕೆಲವೊಮ್ಮೆ ಸತ್ಯ ಹೇಳಿದರೂ ಅದನ್ನು ನಂಬುವುದು ಕಷ್ಟವಾಗಿದ್ದು, ಸುಳ್ಳು ಹೇಳಿದರೂ ಅದನ್ನು ನಂಬಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ, ಇದರ ಸತ್ಯಾಸತ್ಯತೆ ಪರೀಕ್ಷಿಸುವಂತೆ ಜನರು ಕೇಳುತ್ತಿದ್ದಾರೆ. ನಂದಿನಿಗೆ ಅದರದ್ದೇ ಆದ ಹೆಸರು ಇದ್ದು, ಇದರ ಸತ್ಯ ಏನು ಎನ್ನುವ ಬಗ್ಗೆ ತನಿಖೆಯಾಗಬೇಕಿದೆ ಎನ್ನುತ್ತಿದ್ದಾರೆ ಜನರು.

PREV
Read more Articles on
click me!

Recommended Stories

ರೇಣುಕಾಸ್ವಾಮಿ ಕೇಸ್: ಉಲ್ಟಾ ಹೊಡೆದ ಸಾಕ್ಷಿ! ವಿಡಿಯೋ ಕಟ್‌ ಆಗಿದೆಯೆಂದು ಭಾವಿಸಿ ದರ್ಶನ್ -ಪವಿತ್ರ ಪರಸ್ಪರ ಉಭಯ ಕುಶಲೋಪರಿ
'ಪಿಂಕ್​ ಮೆಟ್ರೋ' 3 ಹೆಸರು ಬದಲಾವಣೆಗೆ ಗ್ರೀನ್​ ಸಿಗ್ನಲ್​: ಈಡೇರಲಿಲ್ಲ ಶಂಕರ್​ ನಾಗ್​ ಅಭಿಮಾನಿಗಳ ಕನಸು